ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಬ್ಲಾಕ್ ಲೈವ್ಸ್ ಮ್ಯಾಟರ್" ಬಗ್ಗೆ ದಕ್ಷಿಣ ಆಫ್ರಿಕಾ ನಿಲುವು ತೆಗೆದುಕೊಳ್ಳಬೇಕು: ಲುಂಗಿ ಎನ್‌ಗಿಡಿ

South Africa Must Take A Stand On Black Lives Matter: Lungi Ngidi

ವಿಶ್ವಾದ್ಯಂತ ಬ್ಲಾಕ್ ಲೈವ್ಸ್ ಮ್ಯಾಟರ್ ಆಂದೋಲನ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಕರಿ ಜನರ ಮೇಲೆ ನಡೆಯುತ್ತಿರುವ ಜನಾಂಗೀಯ ಧೋರಣೆಯನ್ನು ಖಂಡಿಸಿ ವಿಶ್ವಾದ್ಯಂತ "ಬ್ಲ್ಯಾಕ್ ಲೈವ್ಸ್ ಮ್ಯಾಟರ್" ವಿಚಾರವಾಗಿ ದೊಡ್ಡ ಹೋರಾಟಗಳು ನಡೆಯುತ್ತಿದೆ. ಈ ವಿಚಾರವಾಗಿ ದಕ್ಷಿಣ ಆಫ್ರಿಕಾ ಕೂಡ ತನ್ನ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಕಳೆದ ವಾರವಷ್ಟೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಟಗಾರರ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಎನ್‌ಗಿಡಿ ವಾರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದುಕೊಂಡರು. ಆ ಬಳಿಕ ಎನ್‌ಗಿಡಿ ತಾನು ಜನಾಂಗಿಯ ಧೋರಣೆ ವಿರುದ್ಧದ ಹೋರಾಟದ ಪರವಾಗಿರುವುದನ್ನು ಸ್ಪಷ್ಟಪಡಿಸಿದರು.

39ನೇ ವರ್ಷಕ್ಕೆ ಕಾಲಿಟ್ಟ ಮಿಸ್ಟರ್ ಕೂಲ್‌ಗೆ ವಿಶೇಷ ಉಡುಗೊರೆ ನೀಡಿದ ಬ್ರಾವೋ39ನೇ ವರ್ಷಕ್ಕೆ ಕಾಲಿಟ್ಟ ಮಿಸ್ಟರ್ ಕೂಲ್‌ಗೆ ವಿಶೇಷ ಉಡುಗೊರೆ ನೀಡಿದ ಬ್ರಾವೋ

"ಒಂದು ರಾಷ್ಟ್ರವಾಗಿ ನಾವು(ದಕ್ಷಿಣ ಆಫ್ರಿಕಾ) ಜನಾಂಗೀಯ ನಿಂದನೆ ವಿಚಾರವಾಗಿ ಕಠಿಣ ಇತಿಹಾಸವನ್ನು ಹೊಂದಿದ್ದೇವೆ. ಹೀಗಾಗಿ ಒಂದು ತಂಡವಾಗಿ ನಾವು ನಡೆಯುತ್ತಿರುವ ಬೆಳವಣಿಗೆಯ ಭಾಗವಾಗಿ ಒಂದು ನಿಲುವನ್ನು ವ್ಯಕ್ತಪಡಿಸಬೇಕಿದೆ. ಅದು ಆಗದಿದ್ದರೆ ನಾನು ಧ್ವನಿಯಾಗುತ್ತೇನೆ" ಎಂದು ಲುಂಗಿ ಎನ್‌ಗಿಡಿ ಹೇಳಿದ್ದಾಗಿ ಕ್ರಿಕ್ ಇನ್ಫೋ ವರದಿ ಮಾಡಿದೆ.

ವಿಶ್ವದ ಉಳಿದ ಭಾಗದಲ್ಲಿ ಜನಾಂಗೀಯ ಧೋರಣೆಯ ವಿರುದ್ಧ ಧ್ವನಿಗಳು ಜೋರಾಗಿ ಕೇಳಿಬರುತ್ತಿದೆ. ಹೀಗಾಗಿ ನಾವು ಕೂಡ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಲುಂಗಿ ಎನ್‌ಗಿಡಿ ಹೇಳಿಕೊಂಡಿದ್ದಾರೆ. ಜನಾಂಗೀಯ ನಿಂದನೆ ಬಗ್ಗೆ ಕ್ರಿಕೆಟ್‌ನಲ್ಲೂ ಕ್ರಿಸ್ ಗೇಲ್ ಹಾಗೂ ಡ್ಯಾರೆನ್ ಸಮಿ ಧ್ವನಿಯೆತ್ತಿದ್ದರು.

ಎಂಎಸ್ ಧೋನಿ ಹುಟ್ಟುಹಬ್ಬ: ಮಿಸ್ಟರ್ ಕೂಲ್ ವೃತ್ತಿಬದುಕಿನ ಐದು ಶ್ರೇಷ್ಠ ಇನ್ನಿಂಗ್ಸ್‌ಗಳುಎಂಎಸ್ ಧೋನಿ ಹುಟ್ಟುಹಬ್ಬ: ಮಿಸ್ಟರ್ ಕೂಲ್ ವೃತ್ತಿಬದುಕಿನ ಐದು ಶ್ರೇಷ್ಠ ಇನ್ನಿಂಗ್ಸ್‌ಗಳು

1970ಕ್ಕಿಂತ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಬಿಳಿ ಜನರನ್ನು ಮಾತ್ರವೇ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶವಿತ್ತು. ಆದರೆ ಕಳೆದ 29 ವರ್ಷಗಳಲ್ಲಿ ಈ ವಿಚಾರವಾಗಿ ಭಾರೀ ಬದಲಾವಣೆಯಾಗಿದೆ. ಹಾಘಿದ್ದರೂ ಕೂಡ ದಕ್ಷಿಣ ಆಪ್ರಕಾ ಕ್ರಿಕೆಟ್‌ನಲ್ಲಿ ಈವರೆಗೆ ಕೇವಲ 9 ಕಪ್ಪು ವರ್ಣೀಯ ಆಟಗಾರರು ಅವಕಾಶವನ್ನು ಪಡೆದುಕೊಂಡಿದ್ದಾರೆ. ಲುಂಗಿ ಎನ್‌ಗಿಡಿ ಅದರಲ್ಲಿ ಇತ್ತೀಚಿನ ಆಟಗಾರನಾಗಿದ್ದಾರೆ.

Story first published: Tuesday, July 7, 2020, 15:41 [IST]
Other articles published on Jul 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X