ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ಜನವರಿ 19 ಬುಧವಾರದಿಂದ ಆರಂಭವಾಗಲಿದೆ. ಎರಡು ತಂಡಗಳು ಕೂಡ ಈ ಸರಣಿಗೆ ಸಂಪೂರ್ಣವಾಗಿ ಸಜ್ಜಾಗಿದೆ. ಈ ಸಂದರ್ಭದಲ್ಲಿ ದಕ್ಷಿಣ ಆಪ್ರಿಕಾ ತಂಡದ ಕಡೆಯಿಂದ ಪ್ರಮುಖ ಸುದ್ದಿಯೊಂದು ಹೊರಬಿದ್ದಿದೆ. ಭಾರತ ಹಾಗೂ ದಕ್ಷಿಣ ಆಪ್ರಿಕಾ ನಡುವಿನ ಈ ಏಕದಿನ ಸರಣಿಯಿಂದ ಹರಿಣಗಳ ತಂಡದ ಪ್ರಮುಖ ವೇಗಿಯನ್ನು ಸರಣಿಯಿಂದ ಕೈಬಿಡಲಾಗಿದೆ.
ಹೌದು, ದಕ್ಷಿಣ ಆಪ್ರಿಕಾ ತಂಡದ ಪ್ರಮುಖ ವೇಗಿ ಕಗಿಸೋ ರಬಡಾ ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಈ ವಿಚಾರವನ್ನು ಅಂತಿಮ ಕ್ಷಣದಲ್ಲಿ ದಕ್ಷಿಣ ಆಫ್ರಿಕಾ ಬಹಿರಂಗಪಡಿಸಿದೆ. ಪಂದ್ಯಗಳ ಒತ್ತಡವನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ಕೈಗೊಂಡಿದೆ ದಕ್ಷಿಣ ಆಫ್ರಿಕಾ ಮಂಡಳಿ. ಮುಂದಿನ ತಿಂಗಳು ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದ್ದು ಈ ಹಿನ್ನೆಲೆಯಲ್ಲಿ ವಿಶ್ರಾಂತಿ ನೀಡಲಾಗಿದೆ.
MS ಧೋನಿ ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಿಸಿದಾಗ, ಗಳಗಳನೆ ಅತ್ತಿದ್ರಂತೆ ವಿರಾಟ್ ಕೊಹ್ಲಿ!
ಬಯೋ-ಸೆಕ್ಯೂರ್ ಎನ್ವಿರಾನ್ಮೆಂಟ್ (ಬಿಎಸ್ಇ) ನಲ್ಲಿ ಹೆಚ್ಚುವರಿ ಆಟಗಾರರು ಇರುವುದರಿಂದ ಯಾವುದೇ ಬದಲಿ ಆಟಗಾರನನ್ನು ಹೆಸರಿಸಿಲ್ಲ. ಆದರೆ ಟೆಸ್ಟ್ ತಂಡದಲ್ಲಿದ್ದ ಜಾರ್ಜ್ ಲಿಂಡೆ ಅವರನ್ನು ಟೆಸ್ಟ್ ಹೆಚ್ಚುವರಿ ಸ್ಪಿನ್ ಬೌಲಿಂಗ್ ಆಯ್ಕೆಯಾಗಿ ಈ ಏಕದಿನ ಸರಣಿಗೆ ಉಳಿಸಿಕೊಳ್ಳಲಾಗಿದೆ.
ಇನ್ನು ಭಾರತ ವಿರುದ್ಧಧ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿ ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡ ಈ ಸರಣಿಗೆ ಭಾರೀ ಉತ್ಸಾಹದಿಂದ ಸಜ್ಜಾಗಿದೆ. ಅಲ್ಲದೆ ಸೀಮಿತ ಓವರ್ಗಳ ತಮಡದ ನಾಯಕ ಟೆಂಬಾ ಬವುಮಾ ಟೆಸ್ಟ್ ಸರಣಿಯಲ್ಲಿ ಕೆಲ ಅದ್ಭುತ ಇನ್ನಿಂಗ್ಸ್ಗಳನ್ನು ಆಡಿದ್ದು ಉತ್ತಮ ಫಾರ್ಮ್ನಲ್ಲಿದ್ದಾರೆ. ಈ ಫಾರ್ಮ್ಅನ್ನು ಏಕದಿನ ಸರಣಿಗೂ ಮುಂದುವರಿಸುವ ಆತ್ಮವಿಶ್ವಾಸದಲ್ಲಿದ್ದಾರೆ.
ರಾಜಗೋಪಾಲ್ ಸತೀಶ್ಗೆ 40 ಲಕ್ಷ ರೂಪಾಯಿ ಮ್ಯಾಚ್ ಫಿಕ್ಸಿಂಗ್ ಆಫರ್: ಬಿಸಿಸಿಐ, ಐಸಿಸಿಗೆ ದೂರು
ಭಾರತ ದಕ್ಷಿಣ ಆಪ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕಳೆದುಕೊಂಡಿರುವ ಕಾರಣ ಈ ಏಕದಿನ ಸರಣಿಯನ್ನು ವಶಕ್ಕೆ ಪಡೆಯುವ ಹಂಬಲದಲ್ಲಿ ಭಾರತ ತಂಡವಿದೆ. ಕೆಎಲ್ ರಾಹುಲ್ ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದು ಜಸ್ಪ್ರೀತ್ ಬೂಮ್ರಾ ಉಪನಾಯಕನಾಗಿ ಸಾತ್ ನೀಡಲಿದ್ದಾರೆ.
ದಕ್ಷಿಣ ಆಫ್ರಿಕಾದ ಏಕದಿನ ತಂಡ: ಟೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಜುಬೇರ್ ಹಮ್ಜಾ, ಮಾರ್ಕೊ ಜಾನ್ಸೆನ್, ಜನೆಮನ್ ಮಲನ್, ಸಿಸಂಡಾ ಮಾಗಲಾ, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ವೇಯ್ನ್ ಪಾರ್ನೆಲ್, ಪ್ರೀ ಆಂಡಿಲ್ ಫೀಲ್ಯೂಕ್, ಡಿವಾಹ್ಲಿನ್ವೇ, ತಬ್ರೈಜ್ ಶಮ್ಸಿ, ರಾಸ್ಸಿ ವಾನ್ ಡೆರ್ ಡಸ್ಸೆನ್, ಕೈಲ್ ವೆರ್ರೆನ್ನೆ.
ಭಾರತ ಏಕದಿನ ತಂಡ: ಕೆಎಲ್ ರಾಹುಲ್ (ನಾಯಕ), ಜಸ್ಪ್ರೀತ್ ಬುಮ್ರಾ, ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್, ಯುಜ್ವೇಂದ್ರ ಚಾಹಲ್ ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಎಂಡಿ ಸಿರಾಜ್, ಜಯಂತ್ ಯಾದವ್, ನವದೀಪ್ ಸೈನಿ.