ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರವಿಶಾಸ್ತ್ರಿ ನಂತರ ಟೀಮ್ ಇಂಡಿಯಾ ಕೋಚ್ ಆಗಲಿದ್ದಾರಾ ಅಫ್ಘಾನಿಸ್ತಾನದ ಈ ಕ್ರಿಕೆಟ್ ಕೋಚ್?

South Africas Lance Klusener expressed his wish to become coach for Team India

ಸದ್ಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಯುಎಇಯಲ್ಲಿ ಮುಂದುವರಿಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯತ್ತ ನೆಟ್ಟಿದೆ. ಈ ಬಾರಿಯ ಐಪಿಎಲ್ ಟೂರ್ನಿ ಅಕ್ಟೋಬರ್ 15ರಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಮುಕ್ತಾಯವಾಗಲಿದ್ದು, ಇದೇ ಯುಎಇ ನೆಲದಲ್ಲಿ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಅಕ್ಟೋಬರ್ 17ರಿಂದ ಆರಂಭವಾಗಲಿದೆ.

ಒಂದು ಬಾಲ್ ಕೂಡ ಬೌಲಿಂಗ್ ಮಾಡಿಲ್ಲ; ಟೂರ್ನಿಯಿಂದ ಹೊರಬಿದ್ದ ನಂತರ ಹಾರ್ದಿಕ್ ಸಮಸ್ಯೆ ಬಿಚ್ಚಿಟ್ಟ ರೋಹಿತ್ಒಂದು ಬಾಲ್ ಕೂಡ ಬೌಲಿಂಗ್ ಮಾಡಿಲ್ಲ; ಟೂರ್ನಿಯಿಂದ ಹೊರಬಿದ್ದ ನಂತರ ಹಾರ್ದಿಕ್ ಸಮಸ್ಯೆ ಬಿಚ್ಚಿಟ್ಟ ರೋಹಿತ್

ಸುಮಾರು 5 ವರ್ಷಗಳ ಬಳಿಕ ಮರಳಿರುವ ಈ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಈಗಾಗಲೇ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲಗಳನ್ನು ಹುಟ್ಟುಹಾಕಿದೆ. ಅದರಲ್ಲಿಯೂ ಈ ಟಿ ಟ್ವೆಂಟಿ ವಿಶ್ವಕಪ್ ಕುರಿತಾಗಿ ಟೀಮ್ ಇಂಡಿಯಾ ಸಾಕಷ್ಟು ದೊಡ್ಡ ಮಟ್ಟದಲ್ಲಿಯೇ ಸುದ್ದಿಗೀಡಾಗಿದೆ. ಟೂರ್ನಿ ಆರಂಭವಾಗಲು ಇನ್ನೂ ತಿಂಗಳು ಬಾಕಿ ಇರುವಾಗಲೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಣೆ ಮಾಡುವ ಮೂಲಕ ದೊಡ್ಡ ಸುದ್ದಿ ಮಾಡಿದ್ದರು.

ಲಾಸ್ಟ್ ಬಾಲ್ ಸಿಕ್ಸ್‌ ಸಿಡಿಸಿ ಹೀರೋ ಆದ ಭರತ್ ಆ ಒಂದೇ ಒಂದು ಪಂದ್ಯದಲ್ಲಿ ಗಳಿಸಿದ ಹಣವೆಷ್ಟು ಗೊತ್ತಾ?ಲಾಸ್ಟ್ ಬಾಲ್ ಸಿಕ್ಸ್‌ ಸಿಡಿಸಿ ಹೀರೋ ಆದ ಭರತ್ ಆ ಒಂದೇ ಒಂದು ಪಂದ್ಯದಲ್ಲಿ ಗಳಿಸಿದ ಹಣವೆಷ್ಟು ಗೊತ್ತಾ?

ಹೀಗೆ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ಟಿ ಟ್ವೆಂಟಿ ತಂಡ ನೂತನ ನಾಯಕನನ್ನು ಪಡೆಯಲಿದೆ. ಅಷ್ಟೇ ಅಲ್ಲದೆ ಈ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ತಂಡದ ಮುಖ್ಯ ಕೋಚ್ ಆಗಿರುವ ರವಿಶಾಸ್ತ್ರಿ ಕೂಡಾ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಸಾಕಷ್ಟು ದೊಡ್ಡ ಮಟ್ಟದಲ್ಲಿಯೇ ಹರಿದಾಡುತ್ತಿದೆ. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ರವಿಶಾಸ್ತ್ರಿ ಕೋಚ್ ಸ್ಥಾನದಿಂದ ಕೆಳಗಿಳಿಯಲಿದ್ದು ನೂತನ ಕೋಚ್ ಟೀಮ್ ಇಂಡಿಯಾಗೆ ಆಯ್ಕೆಯಾಗಲಿದ್ದಾರೆ ಎಂಬ ಚರ್ಚೆಗಳು ಹೆಚ್ಚಾಗುತ್ತಿದ್ದಂತೆಯೇ ಭಾರತ ತಂಡದ ಮುಂದಿನ ಕೋಚ್ ಯಾರಾಗಲಿದ್ದಾರೆ ಎನ್ನುವ ಚರ್ಚೆಗಳೂ ಗರಿಗೆದರಿದವು. ಇದೀಗ ಈ ಚರ್ಚೆಯ ಕುರಿತಾಗಿ ಸೌತ್ ಆಫ್ರಿಕಾದ ಮಾಜಿ ಕ್ರಿಕೆಟಿಗ ಲ್ಯಾನ್ಸ್ ಕ್ಲೂಸ್ನರ್ ಮಾತನಾಡಿದ್ದು ತಾವು ಟೀಮ್ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಿಸಲು ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ವಿಶ್ವದ ಅತ್ಯುತ್ತಮ ಕ್ರಿಕೆಟ್ ತಂಡಕ್ಕೆ ಕೋಚ್ ಆಗುವುದು ಹೆಮ್ಮೆಯ ವಿಷಯ ಎಂದ ಲ್ಯಾನ್ಸ್ ಕ್ಲೂಸ್ನರ್

ವಿಶ್ವದ ಅತ್ಯುತ್ತಮ ಕ್ರಿಕೆಟ್ ತಂಡಕ್ಕೆ ಕೋಚ್ ಆಗುವುದು ಹೆಮ್ಮೆಯ ವಿಷಯ ಎಂದ ಲ್ಯಾನ್ಸ್ ಕ್ಲೂಸ್ನರ್


ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಮಾಜಿ ಸೌತ್ ಆಫ್ರಿಕಾ ಕ್ರಿಕೆಟಿಗ ಲ್ಯಾನ್ಸ್ ಕ್ಲೂಸ್ನರ್ ರವಿಶಾಸ್ತ್ರಿ ಬಳಿಕ ಭಾರತ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಸಂದರ್ಶನದಲ್ಲಿ ಭಾರತ ತಂಡದ ಕೋಚ್ ಆಗುವ ಅವಕಾಶ ಬಂದಾಗ ನೀವು ಸ್ವೀಕರಿಸುತ್ತೀರಾ ಎಂಬ ಪ್ರಶ್ನೆ ಎದುರಾದಾಗ 'ಅಂತಹ ಅವಕಾಶ ಬಂದರೆ ಯಾವುದೇ ಕಾರಣಕ್ಕೂ ಒಲ್ಲೆ ಎನ್ನಲಾರೆ. ವಿಶ್ವ ಕ್ರಿಕೆಟ್‍ನ ಅತ್ಯುತ್ತಮ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸುವುದು ನನ್ನ ಸೌಭಾಗ್ಯ' ಎಂದು ಲ್ಯಾನ್ಸ್ ಕ್ಲೂಸ್ನರ್ ಉತ್ತರಿಸಿದರು.

ಲ್ಯಾನ್ಸ್ ಕ್ಲೂಸ್ನರ್ ಸದ್ಯ ಏನು ಮಾಡುತ್ತಿದ್ದಾರೆ?

ಲ್ಯಾನ್ಸ್ ಕ್ಲೂಸ್ನರ್ ಸದ್ಯ ಏನು ಮಾಡುತ್ತಿದ್ದಾರೆ?

ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಆಟಗಾರನಾಗಿದ್ದ ಲ್ಯಾನ್ಸ್ ಕ್ಲೂಸ್ನರ್ 2019ರ ಸೆಪ್ಟೆಂಬರ್ ತಿಂಗಳಿನಿಂದ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕೆಲ ಫ್ರಾಂಚೈಸಿ ಕ್ರಿಕೆಟ್ ಲೀಗ್‌ನಲ್ಲಿ ಕೋಚ್ ಆಗಿ ಕಾರ್ಯ ನಿರ್ವಹಿಸಿರುವ ಅನುಭವವನ್ನು ಕ್ಲೂಸ್ನರ್ ಹೊಂದಿದ್ದಾರೆ. ಇನ್ನು 2010ರ ಸಮಯದಲ್ಲಿ ಲ್ಯಾನ್ಸ್ ಕ್ಲೂಸ್ನರ್ ಅವರಿಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ತಮ್ಮ ತಂಡಕ್ಕೆ ಬೌಲಿಂಗ್ ಕೋಚ್ ಆಗುವ ಆಹ್ವಾನವನ್ನು ನೀಡಿತ್ತು. ಆದರೆ ಈ ಆಹ್ವಾನವನ್ನು ವೈಯಕ್ತಿಕ ಕಾರಣಗಳಿಂದಾಗಿ ಲ್ಯಾನ್ಸ್ ಕ್ಲೂಸ್ನರ್ ನಿರಾಕರಿಸಿದ್ದರು.

ವಿರಾಟ್ ಎದೆಯಲ್ಲಿ ಎರಡು ನೋವು:ಕಣ್ಣೀರು ಹಾಕಿದ ವಿಡಿಯೋ ವೈರಲ್ | Oneindia Kannada
ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‍ನಲ್ಲಿ ಲ್ಯಾನ್ಸ್ ಕ್ಲುಸ್ನರ್ ಬಾರಿಸಿರುವ ರನ್ ಮತ್ತು ಪಡೆದಿರುವ ವಿಕೆಟ್‍ಗಳ ವಿವರ

ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‍ನಲ್ಲಿ ಲ್ಯಾನ್ಸ್ ಕ್ಲುಸ್ನರ್ ಬಾರಿಸಿರುವ ರನ್ ಮತ್ತು ಪಡೆದಿರುವ ವಿಕೆಟ್‍ಗಳ ವಿವರ

1996ರಿಂದ 2004ರವರೆಗೆ ದಕ್ಷಿಣ ಆಫ್ರಿಕಾ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಆಲ್ ರೌಂಡರ್ ಆಟಗಾರನಾಗಿ ಲ್ಯಾನ್ಸ್ ಕ್ಲುಸ್ನರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ದಕ್ಷಿಣ ಆಫ್ರಿಕಾದ ಪರ 49 ಟೆಸ್ಟ್ ಪಂದ್ಯಗಳನ್ನಾಡಿರುವ ಲ್ಯಾನ್ಸ್ ಕ್ಲೂಸ್ನರ್ 80 ವಿಕೆಟ್ ಪಡೆದಿದ್ದಾರೆ ಮತ್ತು 1906 ರನ್ ಕಲೆಹಾಕಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಪರ 171 ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿರುವ ಲ್ಯಾನ್ಸ್ ಕ್ಲೂಸ್ನರ್ 192 ವಿಕೆಟ್ ಪಡೆದಿದ್ದು, 3576 ರನ್ ಕಲೆಹಾಕಿದ್ದಾರೆ.

Story first published: Monday, October 11, 2021, 18:36 [IST]
Other articles published on Oct 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X