ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧದ ಏಕದಿನ, ಟಿ20ಐಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

South Africa team announced without trio for ODI, T20I series in Sri Lanka

ಕೇಪ್‌ಟೌನ್: ಮುಂದಿನ ತಿಂಗಳು ನಡೆಯಲಿರುವ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ20ಐಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದೆ. ಶ್ರೀಲಂಕಾಕ್ಕೆ ಪ್ರವಾಸ ಹೋಗಲಿರುವ ದಕ್ಷಿಣ ಆಫ್ರಿಕಾ ತಂಡ ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿ ಆಡಲಿದೆ. ಈ ಬಾರಿ ದಕ್ಷಿಣ ಆಫ್ರಿಕಾ ಏಕದಿನ ತಂಡದಲ್ಲಿ ಪ್ರಮುಖ ಮೂವರು ಆಟಗಾರರು ಬೇರೆ ಬೇರೆ ಕಾರಣಗಳಿಂದಾಗಿ ತಂಡದಲ್ಲಿ ಆಡುತ್ತಿಲ್ಲ. ಗುರುವಾರ (ಆಗಸ್ಟ್ 12) ಪ್ರಕಟಿತ ದಕ್ಷಿಣ ಆಫ್ರಿಕಾ ಏಕದಿನ ತಂಡದಲ್ಲಿ ಮೂವರೂ ಕಾಣಿಸಿಕೊಂಡಿಲ್ಲ.

ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಹೆಚ್ಚು ಪಂದ್ಯ ಗೆದ್ದಿರುವರಾರು ಗೊತ್ತಾ?ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಹೆಚ್ಚು ಪಂದ್ಯ ಗೆದ್ದಿರುವರಾರು ಗೊತ್ತಾ?

ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20ಐ ವಿಶ್ವಕಪ್‌ ವೇಳೆ ತಂಡಕ್ಕೆ ಬಲ ತುಂಬಲಿರುವ ಮೂವರು ಆಟಗಾರರು ಟಿ20ಐ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ ಟಿ20ಐ ಸರಣಿ ವೇಳೆಗೆ ಗಾಯಕ್ಕೀಡಾಗಿರುವ ಆಟಗಾರರು ಕೂಡ ತಂಡದ ಪರ ಕಣಕ್ಕಿಳಿಯುವ ನಿರೀಕ್ಷೆಯಿದೆ.

ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಮೂವರು ಆಟಗಾರರು
ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಸರಣಿ ಸೆಪ್ಟೆಂಬರ್‌ 2ರಿಂದ ಸೆಪ್ಟೆಂಬರ್‌ 7ರ ವರೆಗೆ ನಡೆಯಲಿದೆ. ಅದಾಗಿ ಸೆಪ್ಟೆಂಬರ್‌ 10ರಿಂದ ಸೆಪ್ಟೆಂಬರ್‌ 14ರ ವರೆಗೆ ಮೂರು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ. ಏಕದಿನ ಸರಣಿಗೆ ಮಿಸ್ ಆಗಿರುವ ಆಟಗಾರರೆಂದರೆ ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್ ಮತ್ತು ಲುಂಗಿ ಸಾನಿ ಎನ್‌ಗಿಡಿ. ಕ್ವಿಂಟನ್ ಡಿ ಕಾಕ್ ವಿಶ್ರಾಂತಿ ಪಡೆದಿದ್ದರೆ, ಮಿಲ್ಲರ್ ಹ್ಯಾಮ್‌ಟ್ರಿಂಗ್‌ ಗಾಯಕ್ಕೀಡಾಗಿದ್ದಾರೆ. ತಂಡದ ವೇಗಿ ಲುಂಗಿ ಎನ್‌ಗಿಡಿ ವೈಯಕ್ತಿಕ ಕಾರಣದಿಂದ ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. ಆಲ್ ರೌಂಡರ್ ಡ್ವೇನ್ ಪ್ರಿಟೋರಿಸ್ ತಂಡಕ್ಕೆ ವಾಪಸ್ಸಾಗಿದ್ದಾರೆ. ಏಕದಿನ ಮತ್ತು ಟಿ20ಐ ಎರಡೂ ತಂಡಗಳಲ್ಲಿ ಪ್ರಿಟೋರಿಯಸ್ ಕಾಣಿಸಿಕೊಂಡಿದ್ದಾರೆ.

ಭಾರತ vs ಇಂಗ್ಲೆಂಡ್: ಶತಕದ ಸಮೀಪದಲ್ಲಿ ಎಡವಿದ ಹಿಟ್‌ಮ್ಯಾನ್ ರೋಹಿತ್ಭಾರತ vs ಇಂಗ್ಲೆಂಡ್: ಶತಕದ ಸಮೀಪದಲ್ಲಿ ಎಡವಿದ ಹಿಟ್‌ಮ್ಯಾನ್ ರೋಹಿತ್

ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ಪ್ರವಾಸ ಸರಣಿಯಲ್ಲಿ ಡ್ವೇನ್ ಪ್ರಿಟೋರಿಯಸ್ ಆಡಿರಲಿಲ್ಲ

ಈಚಿನ ತಿಂಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ಪ್ರವಾಸ ಸರಣಿಯಲ್ಲಿ ಡ್ವೇನ್ ಪ್ರಿಟೋರಿಯಸ್ ಆಡಿರಲಿಲ್ಲ. ಗಾಯಕ್ಕೀಡಾಗಿದ್ದರಿಂದ ಆ ಸರಣಿಗಳಿಂದ ಪ್ರಿಟೋರಿಯಸ್ ಹೊರಗುಳಿಸಿದ್ದರು. ಟಿ20 ವಿಶ್ವ ಚಾಂಪಿಯನ್ಸ್ ವೆಸ್ಟ್‌ ಇಂಡೀಸ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿಯ ವೇಳೆ ತೆಂಬ ಬವುಮಾ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಈ ಬಾರಿಯೂ ಏಕದಿನ ಮತ್ತು ಟಿ20ಐ ಸರಣಿಗೆ ತೆಂಬ ಬವುಮಾ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ. ಮುಂಬರಲಿರುವ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಪ್ರಮುಖ ಆಟಗಾರ ಕ್ವಿಂಟನ್ ಡಿ ಕಾಕ್‌ಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಅಕ್ಟೋಬರ್‌ನಿಂದ ನವೆಂಬರ್‌ ವರೆಗೆ ಟಿ20 ವಿಶ್ವಕಪ್‌ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಯಲ್ಲಿ ನಡೆಯಲಿದೆ. ಅಸಲಿಗೆ ಈ ಪ್ರತಿಷ್ಠಿತ ಟೂರ್ನಿ ಭಾರತದಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್-19 ಭೀತಿಯ ಕಾರಣದಿಂದಾಗಿ ಯುಎಇಗೆ ಸ್ಥಳಾಂತರಗೊಂಡಿದೆ.

ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಆಸೆ ವ್ಯಕ್ತಪಡಿಸಿದ ರವೀಂದ್ರ ಜಡೇಜಾಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಆಸೆ ವ್ಯಕ್ತಪಡಿಸಿದ ರವೀಂದ್ರ ಜಡೇಜಾ

ಮೂರು ಪಂದ್ಯಗಳ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ
ತೆಂಬಾ ಬಾವುಮಾ (ನಾಯಕ), ಜೂನಿಯರ್ ಡಾಲಾ, ಬ್ಯೂರನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಜಾರ್ಜ್ ಲಿಂಡೆ, ಜನ್ನೆಮನ್ ಮಲಾನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಮ್, ವಿಯಾನ್ ಮುಲ್ಡರ್, ಅನ್ರಿಚ್ ನಾರ್ಟ್ಜೆ, ಆಂಡಿಲೆ ಫೆಹ್ಲುಕ್‌ವೇಯೊ, ದ್ವೇನ್ ಪ್ರೆಟೊರಿಯಸ್, ಕಾಗಿಸೊ ರಬಾಡ, ರೇಬೊರಿಯೊಸ್, , ರಾಸ್ಸಿ ವ್ಯಾನ್ ಡೆರ್ ಡಸೆನ್, ಕೈಲ್ ವೆರ್ರಿನ್, ಲಿಜಾಡ್ ವಿಲಿಯಮ್ಸ್.

Virat Kohli ಪದೇ ಪದೇ ತಾಳ್ಮೆ ಕಳೆದುಕೊಳ್ಳಲು ಕಾರಣವೇನು | Oneindia Kannada

ಮೂರು ಪಂದ್ಯಗಳ ಟಿ20ಐ ಸರಣಿಗೆ ಸೌತ್ ಆಫ್ರಿಕಾ ಟೀಮ್
ಟೆಂಬಾ ಬಾವುಮಾ (ಕ್ಯಾಪ್ಟನ್), ಕ್ವಿಂಟನ್ ಡಿ ಕಾಕ್, ಜಾರ್ನ್ ಫೋರ್ಟುಯಿನ್, ಬ್ಯೂರಾನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಸಿಸಂದಾ ಮ್ಯಾಗಲಾ, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಲುಂಗಿ ನಾಗಿಡಿ, ಅನ್ರಿಚ್ ನಾರ್ಜಿಯೊರೆಸ್ ಡಿ, ರಬಾಡಾ, ತಬ್ರೈಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡಸೆನ್, ಲಿಜಾಡ್ ವಿಲಿಯಮ್ಸ್.

Story first published: Friday, August 13, 2021, 0:58 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X