ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾವನ್ನ ಕ್ಲೀನ್‌ ಸ್ವೀಪ್ ಮಾಡಿದ ದ.ಆಫ್ರಿಕಾ: 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆಲುವು

South africa

ಪೋರ್ಟ್ ಎಲಿಜಬೆತ್‌ನ ಸೈಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲೂ ಅಬ್ಬರದ ಬೌಲಿಂಗ್ ದಾಳಿ ನಡೆಸಿದ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶವನ್ನ 2-0 ಅಂತರದಲ್ಲಿ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್ ಮಾಡಿದೆ.

RCB vs CSK Preview: ಪ್ರಿವ್ಯೂ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್, ಹವಾಮಾನ ವರದಿRCB vs CSK Preview: ಪ್ರಿವ್ಯೂ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್, ಹವಾಮಾನ ವರದಿ

ದಕ್ಷಿಣ ಆಫ್ರಿಕಾದ ಪ್ರಮುಖ ಸ್ಪಿನ್ನರ್ ಕೇಶವ್ ಮಹಾರಾಜ ಸ್ಪಿನ್ ದಾಳಿಗೆ ತತ್ತರಿಸಿ ಹೋದ ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 80 ರನ್‌ಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದ್ದು, ಡೀನ್ ಎಲ್ಗರ್ ನೇತೃತ್ವದ ಹರಿಣಗಳು 332ರನ್‌ಗಳ ಅಮೋಘ ಗೆಲುವು ಸಾಧಿಸಿದ್ದಾರೆ. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ 12 ಓವರ್ ಬೌಲಿಂಗ್‌ ಮಾಡಿ 3 ಮೇಡನ್ ಓವರ್ ಸಹಿತ 40ರನ್‌ಗೆ 7 ವಿಕೆಟ್ ಕಬಳಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದ. ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ನಷ್ಟಕ್ಕೆ 453 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 217ರನ್‌ಗಳಿಗೆ ಸರ್ವಪತನಗೊಂಡಿತು.

236ರನ್‌ಗಳ ಮುನ್ನಡೆ ಸಾಧಿಸಿದ ದಕ್ಷಿಣ ಆಫ್ರಿಕಾ ಪಡೆಯು ದ್ವಿತೀಯ ಇನ್ನಿಂಗ್ಸ್‌ ನಲ್ಲಿ 6 ವಿಕೆಟ್ ಕಳೆದುಕೊಂಡು 176ರನ್‌ಗೆ ಡಿಕ್ಲೇರ್ ಮಾಡಿಕೊಂಡಿತು. ತೈಜುಲ್ ಇಸ್ಲಾಂ 3, ಮೆಹೆದಿ ಹಸನ್ 2, ಖಲೀಲ್ ಅಹ್ಮದ್ 1 ವಿಕೆಟ್ ಕಬಳಿಸಿದರು.

413ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಎದುರಾಳಿಯ ಇಬ್ಬರು ಸ್ಪಿನ್ನರ್‌ಗಳ ದಾಳಿಗೆ ನೆಲಕಚ್ಚಿ ಹೋಯಿತು. ಕೇಶವ್ ಮಹಾರಾಜ್ 12 ಓವರ್‌ಗೆ 7 ವಿಕೆಟ್ ಕಬಳಿಸಿದ್ರೆ, ಸಿಮೊನ್ ಹಾರ್ಮರ್ 3 ವಿಕೆಟ್ ತಮ್ಮದಾಗಿಸಿಕೊಂಡು ಬಾಂಗ್ಲಾದೇಶ ಇನ್ನಿಂಗ್ಸ್‌ಗೆ ಮುಕ್ತಾಯ ಹಾಡಿದ್ರು.

Umran Malik ಈ ಸರಣಿಯ ಅತ್ಯಂತ ವೇಗದ ಬೌಲರ್ | Oneindia Kannda

ಬಾಂಗ್ಲಾ ಪರ ಮೂವರು ಆಟಗಾರರಷ್ಟೇ ಎರಡಂಕಿ ದಾಟಿದ್ದು, ತಮೀಮ್ ಇಕ್ಬಾಲ್ 13, ಲಿಟ್ಟನ್ ದಾಸ್ 27, ಮೆಹಿದಿ ಹಸನ್ 20ರನ್‌ಗಳಿಸಿದ್ದೇ ಹೆಚ್ಚು. ಅಂತಿಮವಾಗಿ ಬಾಂಗ್ಲಾ ಎರಡು ಟೆಸ್ಟ ಪಂದ್ಯಗಳಲ್ಲಿ ಮುಗ್ಗರಿಸಿದೆ.

Story first published: Monday, April 11, 2022, 19:06 [IST]
Other articles published on Apr 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X