ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SA vs ENG 1s ODI: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ದುಬಾರಿ ಕಮ್‌ಬ್ಯಾಕ್!

South Africa vs England: Jofra Archer expensive on comeback, get 1 wicket for 81 runs

ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದುಮೊದಲಿಗೆ ಬ್ಯಾಟಿಂಗ್ ನಡೆಸಿರುವ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಬೃಹತ್ ಮೊತ್ತವನ್ನು ಕಲೆ ಹಾಕಿದೆ. ವಾನ್‌ಡರ್ ಡುಸೆನ್ ಅವರ ಭರ್ಜರಿ ಬ್ಯಾಟಿಂಗ್‌ನ ನೆರವಿನಿಂದಾಗಿ ದಕ್ಷಿಣ ಆಫ್ರಿಕಾ ತಂಡ ಈ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 298 ರನ್‌ಗಳನ್ನು ಗಳಿಸಿದೆ.

ಈ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿರುವ ಇಂಗ್ಲೆಂಡ್ ತಂಡದ ವೇಗಿ ಜೋಫ್ರ ಆರ್ಚರ್ ಭಾರೀ ನಿರಾಸೆ ಮೂಡಿಸಿದ್ದಾರೆ. ಸಾಕಷ್ಟು ನಿರೀಕಲ್ಷೆ ಮುಡಿಸಿದ್ದ ಆರ್ಚರ್ ಈ ಪಂದ್ಯದಲ್ಲಿ ಇಂಗ್ಲೆಂಡ್ ಪಾಲಿಗೆ ದುಬಾರ್ ಬೌಲರ್ ಎನಿಸಿಕೊಂಡರು. 10 ಓವರ್‌ಗಳ ತಮ್ಮ ಸಂಪೂರ್ಣ ಬೌಲಿಂಗ್ ಕೋಟಾದಲ್ಲಿ ಬರೊಬ್ಬರಿ 81 ರನ್‌ಗಳನ್ನು ನೀಡುವ ಮೂಲಕ ತಮ್ಮ ಮೇಲಿಟ್ಟಿದ್ದ ನಿರೀಕ್ಷೆ ಹುಸಿಗೊಳಿಸಿದ್ದಾರೆ. 8.1ರ ಎಕಾನಮಿಯಲ್ಲಿ ಬೌಲಿಂಗ್ ನಡೆಸಿ ಜೋಫ್ರ ಕೇವಲ ಒಂದು ವಿಕೆಟ್ ಮಾತ್ರವೇ ಗಳಿಸಲು ಯಶಸ್ವಿಯಾದರು.

U-19 Women's World Cup 2023: ಭಾರತ vs ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ಟಾಸ್ ವರದಿU-19 Women's World Cup 2023: ಭಾರತ vs ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ಟಾಸ್ ವರದಿ

ಇಂಗ್ಲೆಂಡ್ ಪರವಾಗಿ ಈ ಪಂದ್ಯದಲ್ಲಿ ಸ್ಯಾಮ್ ಕರನ್ ಅದ್ಭುತ ಬೌಲಿಂಗ್ ದಾಳಿ ನಡೆಸಿ ಮಿಂಚಿದ್ದಾರೆ. 9 ಓವರ್‌ಗಳ ಬೌಲಿಂಗ್ ನಡೆಸಿದ ಸ್ಯಾಮ್ ಕರನ್ 35 ರನ್‌ಗಳನ್ನು ನೀಡಿ 3 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಜೋಫ್ರ ಆರ್ಚರ್, ಮೊಯೀನ್ ಅಲಿ, ಆದಿಲ್ ರಶೀದ್ ಹಾಗೂ ಒಲಿ ಸ್ಟೋನ್ ತಲಾ 1 ವಿಕೆಟ್ ಸಂಪಾದಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ತಂಡದ ಪರವಾಗಿ ಬ್ಯಾಟಿಂಗ್‌ನ್ಲಲಿ ಮಿಂಚಿದ್ದು ವಾನ್‌ಡರ್ ಡುಸೆನ್. 117 ಎಸೆತಗಳನ್ನು ಎದುರಿಸಿದ ಡುಸೆನ್ 111 ರನ್‌ಗಳಿಸಿ ಔಟಾದರು. ಉಳಿದಂತೆ ಡೇವಿಡ್ ಮಿಲ್ಲರ್ 53 ರನ್‌ಗಳನ್ನು ಗಳಿಸಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ 298 ರನ್‌ಗಳನ್ನು ಗಳಿಸಿದೆ.

Axar Patel Marriage: ಚಿತ್ರಗಳು: ಮೇಹಾ ಪಟೇಲ್ ಕೈಹಿಡಿದ ಭಾರತೀಯ ಕ್ರಿಕೆಟಿಗ ಅಕ್ಷರ್ ಪಟೇಲ್Axar Patel Marriage: ಚಿತ್ರಗಳು: ಮೇಹಾ ಪಟೇಲ್ ಕೈಹಿಡಿದ ಭಾರತೀಯ ಕ್ರಿಕೆಟಿಗ ಅಕ್ಷರ್ ಪಟೇಲ್

ಇತ್ತಂಡಗಳ ಆಡುವ ಬಳಗ

ದಕ್ಷಿಣ ಆಫ್ರಿಕಾ ಆಡುವ ಬಳಗ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಸಿಸಂಡಾ ಮಗಾಲಾ, ಕಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ
ಬೆಂಚ್: ಜನ್ನೆಮನ್ ಮಲನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ

ಇಂಗ್ಲೆಂಡ್: ಜೇಸನ್ ರಾಯ್, ಡೇವಿಡ್ ಮಲನ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಜೋಫ್ರಾ ಆರ್ಚರ್, ಓಲಿ ಸ್ಟೋನ್
ಬೆಂಚ್: ಕ್ರಿಸ್ ವೋಕ್ಸ್, ರೀಸ್ ಟೋಪ್ಲಿ, ಫಿಲಿಪ್ ಸಾಲ್ಟ್

Story first published: Friday, January 27, 2023, 22:07 [IST]
Other articles published on Jan 27, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X