ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA 2022: ಐಪಿಎಲ್‌ ಹರಾಜಿನ ಬಗ್ಗೆ ಯೋಚಿಸುತ್ತಿಲ್ಲ ಎಂದ ದಕ್ಷಿಣ ಆಫ್ರಿಕಾ ಬ್ಯಾಟರ್

South African batter Rilee Rossouw About IPL Auction After His Maiden T20I Century

ಚೊಚ್ಚಲ ಟಿ20 ಶತಕದ ನಂತರ ಐಪಿಎಲ್ ಹರಾಜಿನ ಬಗ್ಗೆ ಯೋಚಿಸುತ್ತಿಲ್ಲ ಎಂದು ದಕ್ಷಿಣ ಆಫ್ರಿಕಾದ ಬ್ಯಾಟರ್ ರಿಲೀ ರೊಸೊವ್ ಬಹಿರಂಗಪಡಿಸಿದ್ದಾರೆ. ಹಿಂದಿನ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆಗಿದ್ದರಿಂದ ಹೊರಬರುವುದು ನನ್ನ ಆದ್ಯತೆಯಾಗಿದೆ ಎಂದು ರೊಸೊವ್ ಹೇಳಿದ್ದಾರೆ.

ಇಂದೋರ್‌ನಲ್ಲಿ ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ರೊಸೊವ್ ತಮ್ಮ ಮೊದಲನೇ ಶತಕ ಗಳಿಸಿದರು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಐದನೇ ಆಟಗಾರರಾದರು.

Ind vs SA t20 : ಆತನಿಂದ ನನ್ನ ಬ್ಯಾಟಿಂಗ್ ಕ್ರಮಾಂಕ ಅಪಾಯದಲ್ಲಿದೆ ಎಂದು ಸೂರ್ಯಕುಮಾರ್ ಯಾದವ್Ind vs SA t20 : ಆತನಿಂದ ನನ್ನ ಬ್ಯಾಟಿಂಗ್ ಕ್ರಮಾಂಕ ಅಪಾಯದಲ್ಲಿದೆ ಎಂದು ಸೂರ್ಯಕುಮಾರ್ ಯಾದವ್

ಎಡಗೈ ಬ್ಯಾಟರ್ 48 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗಿ ಉಳಿದರು, ದಕ್ಷಿಣ ಆಫ್ರಿಕಾ 227 ರನ್ ಗಳಿಸಿತು. ಪ್ರವಾಸಿಗಳು ಭಾರತವನ್ನು 178 ರನ್‌ಗಳಿಗೆ ಆಲೌಟ್ ಮಾಡಿ ಸಮಾಧಾನಕರ ಗೆಲುವನ್ನು ಪಡೆದರು. 49 ರನ್‌ಗಳ ಗೆಲುವಿನ ನಂತರ ಮಾತನಾಡಿದ ರೊಸೊವ್, ಐಪಿಎಲ್ ಹರಾಜಿನಲ್ಲಿ ಏನಾಗುತ್ತದೆ ಎಂಬುದು ತನ್ನ ನಿಯಂತ್ರಣದಲ್ಲಿಲ್ಲ ಎಂದು ಹೇಳಿದ್ದಾರೆ.

"ಹರಾಜು ನನ್ನ ನಿಯಂತ್ರಣದಲ್ಲಿಲ್ಲ. ಅದು ನನ್ನ ಮನಸ್ಸಿನಲ್ಲಿಯೂ ಇರಲಿಲ್ಲ. ನಾನು ಒಂದೊಳ್ಳೆ ಇನ್ನಿಂಗ್ಸ್ ಆಡಬೇಕಿತ್ತು, ಈ ಪಂದ್ಯದಲ್ಲಿ ಅದು ಉತ್ತಮವಾಗಿ ಆಯಿತು" ಎಂದು ಅವರು ಹೇಳಿದ್ದಾರೆ.

ಭಾರತದ ಪರಿಸ್ಥಿತಿಗಳಿಗೆ ಹೊಂದಿಕೊಂಡಿದ್ದೇವೆ

ಭಾರತದ ಪರಿಸ್ಥಿತಿಗಳಿಗೆ ಹೊಂದಿಕೊಂಡಿದ್ದೇವೆ

ಭಾರತ ವಿರುದ್ಧದ ಟಿ20 ಸರಣಿಯ ಕಲಿಕೆಯ ಬಗ್ಗೆ ಕೇಳಿದಾಗ, ರೊಸೊವ್, ಪ್ರತಿ ಪಂದ್ಯದಲ್ಲೂ ಉತ್ತಮವಾಗಿ ಹೊಂದಿಕೊಳ್ಳುವ ಮೂಲಕ ಸುಧಾರಿಸಿದ್ದೇನೆ ಎಂದು ಹೇಳಿದ್ದಾರೆ.

"ಮೊದಲ ಪಂದ್ಯದಲ್ಲಿ, ಭಾರತವು ನಿಜವಾಗಿಯೂ ಚೆಂಡನ್ನು ಹೇಗೆ ಸ್ವಿಂಗ್ ಮಾಡಿತು ಎಂಬುದರ ಕುರಿತು ನಾವು ಆಘಾತಕ್ಕೊಳಗಾಗಿದ್ದೇವೆ. ನಾವು ದೀರ್ಘವಾಗಿ ಚರ್ಚೆ ಮಾಡಿದೆವು ಮತ್ತು ಮುಂದಿನ ಎರಡು ಪಂದ್ಯಗಳನ್ನು ನಾವು ಹೇಗೆ ಆಡಬೇಕು ಎನ್ನುವುದರ ಕುರಿತು ಯೋಚಿಸಿದೆವು. ಎರಡನೇ ಪಂದ್ಯದಲ್ಲಿ ನಾವು ಹೆಚ್ಚು ಕಲಿತಿದ್ದೇವೆ ಮತ್ತು ಮೂರನೇ ಪಂದ್ಯದಲ್ಲಿ ನಾವು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಒಟ್ಟಾಗಿ ಪ್ರದರ್ಶನ ನೀಡಲು ಸಾಧ್ಯವಾಯಿತು." ಎಂದು ಅವರು ಹೇಳಿದರು.

ಟಿ20 ವಿಶ್ವಕಪ್ 2022: ಕುಲದೀಪ್ ಸೇನ್ ಸೇರಿ ಮೂವರು ಭಾರತಕ್ಕೆ ನೆಟ್ ಬೌಲರ್ ಆಗಿ ಆಯ್ಕೆ

ಐಪಿಎಲ್‌ನಲ್ಲಿ ಆಡಿರುವ ರೊಸೊವ್

ಐಪಿಎಲ್‌ನಲ್ಲಿ ಆಡಿರುವ ರೊಸೊವ್

ರಿಲೀ ರೊಸೊವ್ 2014 ಮತ್ತು 2015 ರಲ್ಲಿ ಐಪಿಎಲ್‌ನ ಭಾಗವಾಗಿದ್ದನು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅವರನ್ನು ಆಡಿಸಲಾಗಿತ್ತು. ಆದರೂ, ಅವರು ಕೇವಲ 5 ಪಂದ್ಯಗಳನ್ನಾಡಿದ್ದರು, 10.60 ಸರಾಸರಿಯಲ್ಲಿ 53 ರನ್ ಗಳಿಸಿದರು.

ಅದಾದ ನಂತರ ಅವರನ್ನು ಕೊಳ್ಳಲು ಯಾವುದೇ ಫ್ರಾಂಚೈಸಿಗಳು ಆಸಕ್ತಿ ತೋರಿಸಲಿಲ್ಲ. ಈ ಬಾರಿ ಡಿಸೆಂಬರ್ ತಿಂಗಳಿನಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದ್ದು, ರಿಲೀ ರೊಸೋವ್ ಅವರನ್ನು ಯಾವುದಾದರೈ ಫ್ರಾಂಚೈಸಿಗಳು ಕೊಳ್ಳಲು ಆಸಕ್ತಿ ತೋರುವ ಸಾಧ್ಯತೆ ಇದೆ.

ಟೆಂಬಾ ಬವುಮಾ ಬೆಂಬಲಕ್ಕೆ ನಿಂತ ರೊಸೊವ್

ಟೆಂಬಾ ಬವುಮಾ ಬೆಂಬಲಕ್ಕೆ ನಿಂತ ರೊಸೊವ್

ತಮ್ಮ ಕಳಪೆ ಫಾರ್ಮ್‌ನಿಂದಾಗಿ ಟೀಕೆಗೆ ಗುರಿಯಾಗಿರುವ ಟೆಂಬಾ ಬವುಮಾಗೆ ರಿಲೀ ರೊಸೊವ್ ಬೆಂಬಲ ನೀಡಿದ್ದಾರೆ. ಒಂದು ಒಳ್ಳೆ ಇನ್ನಿಂಗ್ಸ್ ಬಂದರೆ ಅವರ ಮೇಲಿನ ಟೀಕೆಗಳಿಗೆ ಅಂತ್ಯ ಬೀಳಲಿದೆ ಎಂದು ಅವರು ಸಮರ್ಥನೆ ನೀಡಿದ್ದಾರೆ.

"ಅವರ ಫಾರ್ಮ್ ತಂಡದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಅದರ ಬಗ್ಗೆ ಮಾತನಾಡಿದ್ದೇವೆ. ಯಾರಾದರೂ ಉತ್ತಮವಾಗಿ ಇನ್ನಿಂಗ್ಸ್ ಆಡಿದರೆ, ಅವರ ಮೇಲಿನ ಹೊರೆ ಕಡಿಮೆಯಾಗುತ್ತದೆ. ಒಂದು ಒಳ್ಳೆಯ ಇನ್ನಿಂಗ್ಸ್ ಬಂದರೆ ಎಲ್ಲ ಸರಿಹೋಗುತ್ತದೆ. ಅವರು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.

ನಾವು ಒಂದು ತಂಡವಾಗಿ ಅವರೊಂದಿಗೆ ಇರಬೇಕು. ಪ್ರತಿಯೊಬ್ಬ ವೃತ್ತಿಪರನು ಇದರ ಮೂಲಕ ಹೋಗುತ್ತಾನೆ ಮತ್ತು ಅದು ಅವನನ್ನು, ಅವನ ಸಾಮರ್ಥ್ಯವನ್ನು ಬೆಂಬಲಿಸುತ್ತದೆ. ಬವುಮಾ ನಾಯಕತ್ವ ನಿಜವಾಗಿಯೂ ಉತ್ತಮವಾಗಿದೆ ಎಂದು ಹೇಳಿದರು.

ಲಕ್ನೋದಲ್ಲಿ ಗುರುವಾರ (ಅಕ್ಟೋಬರ್ 6) ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಭಾರತವನ್ನು ಎದುರಿಸಲಿದೆ.

Story first published: Wednesday, October 5, 2022, 21:08 [IST]
Other articles published on Oct 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X