ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ವಿಶ್ವಕಪ್‌ 2022ರಿಂದ 2023ಕ್ಕೆ ಮುಂದೂಡಿಕೆ: ದ.ಆಫ್ರಿಕಾದಲ್ಲಿ ಆಯೋಜನೆ

South African edition of the Womens T20 World Cup postponed to 2023

ಐಸಿಸಿ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. 2022ಕ್ಕೆ ನಡೆಯಬೇಕಿದ್ದ ಮಹಿಳಾ ಟಿ20 ವಿಶ್ವಕಪ್‌ಅನ್ನು 2023ಕ್ಕೆ ನಡೆಸಲು ಐಸಿಸಿ ತೀರ್ಮಾನಿಸಿದೆ. ಈ ಟೂರ್ನಿ ದಕ್ಷಿಣ ಆಫ್ರಕಾದಲ್ಲಿ ನಡೆಯಲಿದ್ದು 2023ರ ಫೆಬ್ರವರಿಯಲ್ಲಿ ಆಯೋಜನೆಯಾಗಲಿದೆ.

2022ರಲ್ಲಿನ ಬಿಡುವಿಲ್ಲದ ಕ್ರಿಕೆಟ್ ಕೂಟಗಳಿಂದ ಆಟಗಾರ ಒತ್ತಡವನ್ನು ನಿರ್ವಹಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗುರುವಾರ ಪ್ರಕಟಿಸಿದೆ. ಕೆಲ ಪ್ರಮುಖ ಕ್ರಿಕೆಟ್ ಕೂಟಗಳು 2022ರಲ್ಲಿ ನಡೆಯಲಿದೆ.

ತಂಡದಲ್ಲಿ ಸ್ಥಾನ ಭದ್ರಪಡಿಸಬೇಕಾದರೆ ಆಸ್ಟ್ರೇಲಿಯಾದಲ್ಲಿ ಆತ ರನ್ ಗಳಿಸಬೇಕು: ಹರ್ಭಜನ್ ಸಿಂಗ್ತಂಡದಲ್ಲಿ ಸ್ಥಾನ ಭದ್ರಪಡಿಸಬೇಕಾದರೆ ಆಸ್ಟ್ರೇಲಿಯಾದಲ್ಲಿ ಆತ ರನ್ ಗಳಿಸಬೇಕು: ಹರ್ಭಜನ್ ಸಿಂಗ್

2021ರಲ್ಲಿ ನಡೆಯಬೇಕಿದ್ದ 50 ಓವರ್‌ಗಳ ಮಹಿಳಾ ವಿಶ್ವಕಪ್‌ಅನ್ನು 2022ಕ್ಕೆ ಕಳೆದ ಆಗಸ್ಟ್ ತಿಂಗಳಿನಲ್ಲಿ ಮುಂದೂಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಟಿ20 ವಿಶ್ವಕಪ್ ಕೂಡ ಅದೇ ವರ್ಷ ನಡೆಸುವುದು ಸಾಕಷ್ಟು ಚರ್ಚೆಗೆ ಕಾರಣವಾಗಲಿದೆ. ಇದಲ್ಲದೆ 2022ರಲ್ಲಿ ನಡೆಯುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಮಹಿಳಾ ಕ್ರಿಕೆಟ್ ತಂಡಗಳು ಪಾಲ್ಗೊಳ್ಳಲಿದೆ.

ಟಿ20 ವಿಶ್ವಕಪ್ ಮುಂದೂಡುವ ಬಗ್ಗೆ ಐಸಿಸಿ ಪ್ರಕಟಣೆಯನ್ನು ಹೊರಡಿಸಿದೆ. "ಐಸಿಸಿ ಮಹಿಳಾ ಟಿ20 ವಿಶ್ವಕಪ್ ಈಗ ನಿಗದಿಯಾಗಿರುವ ಪ್ರಕಾರ 2022ರ ಬದಲಾಗಿ 2023ರ ಫೆಬ್ರವರಿ ತಿಂಗಳ 9-26ನೇ ತಾರಿಕಿನ ಮದ್ಯೆ ನಡೆಯಲಿದೆ ಎಂಬುದನ್ನು ಮಂಡಳಿ ಖಚಿತಪಡಿಸುತ್ತದೆ" ಎಂದು ಈ ಪ್ರಕಟಣೆಯಲ್ಲಿ ತಿಳಿಸಿದೆ.

Story first published: Friday, November 20, 2020, 17:30 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X