ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊನೆಗೂ ಪಾಕಿಸ್ತಾನ ತೊರೆದ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಇಮ್ರಾನ್ ತಾಹೀರ್

South African leg-spinner Imran Tahir leaves Pakistan after four months

ಕರಾಚಿ, ಜುಲೈ 28: ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್ ಕೊನೆಗೂ ಪಾಕಿಸ್ತಾನ ತೊರೆದಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಪಾಕಿಸ್ತಾನಕ್ಕೆ ಬಂದಿದ್ದ ತಾಹೀರ್ ಕೊರೊನಾವೈರಸ್‌ನಿಂದಾಗಿ ಪ್ರಯಾಣ ನಿರ್ಬಂಧವಿದ್ದಿದ್ದರಿಂದ ನಾಲ್ಕು ತಿಂಗಳ ಕಾಲ ಪಾಕಿಸ್ತಾನದಲ್ಲೇ ಸಿಕ್ಕಿಹಾಕಿಕೊಂಡಿದ್ದರು.

ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!

ಪಾಕಿಸ್ತಾನದ ಲಾಹೋರ್‌ನಲ್ಲಿ ಜನಿಸಿರುವ 41ರ ಹರೆಯದ ಇಮ್ರಾನ್ ತಾಹೀರ್, ಭಾನುವಾರ (ಜುಲೈ 26) ಪಾಕಿಸ್ತಾನದಿಂದ ಸೀದಾ ವೆಸ್ಟ್ ಇಂಡೀಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿರುವುದರಿಂದ ತಾಹೀರ್ ಕೆರಿಬಿಯನ್ ನಾಡಿಗೆ ತಲುಪಿದ್ದಾರೆ.

'ಅವನ ಕ್ರಿಕೆಟ್ ಎಲ್ಲೀವರೆಗೆ ಹೋಗುತ್ತೆ ನೋಡೋಣ': ರೋಹಿತ್ ಟೆಸ್ಟ್ ಭವಿಷ್ಯಕ್ಕೆ ಗಂಭೀರ್ ಹೇಳಿಕೆ'ಅವನ ಕ್ರಿಕೆಟ್ ಎಲ್ಲೀವರೆಗೆ ಹೋಗುತ್ತೆ ನೋಡೋಣ': ರೋಹಿತ್ ಟೆಸ್ಟ್ ಭವಿಷ್ಯಕ್ಕೆ ಗಂಭೀರ್ ಹೇಳಿಕೆ

ಪಾಕಿಸ್ತಾನ ಸೂಪರ್ ಲೀಗ್‌ಗಾಗಿ ಪಾಕಿಸ್ತಾನಕ್ಕೆ ಬಂದಿದ್ದ ತಾಹೀರ್ ಲಾಹೋರ್‌ನಲ್ಲೇ ಸಿಲುಕಿಕೊಂಡಿದ್ದರು. ಕೊರೊನಾ ಭೀತಿ ಆವರಿಸಲಾರಂಭಿಸಿದಾಗ ಚಾಲನೆಯಲ್ಲಿದ್ದ ಪಿಎಸ್‌ಎಲ್ ಆ ಬಳಿಕ ನಿಲುಗಡೆಯಾಗಿತ್ತು. ಈಗ ಅಲ್ಲಿನ ಸರ್ಕಾರ ಪ್ರಯಾಣ ನಿರ್ಬಂಧವನ್ನು ಕೊಂಚ ಸಡಿಲಿಕೆ ಮಾಡಿರುವುದರಿಂದ ತಾಹೀರ್ ವೆಸ್ಟ್ ಇಂಡೀಸ್‌ಗೆ ತೆರಳಿದ್ದಾರೆ.

2019ರ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಸ್ವಾರಸ್ಯಕರ ಕಾರಣ ಹೇಳಿದ ಚೋಪ್ರಾ2019ರ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಸ್ವಾರಸ್ಯಕರ ಕಾರಣ ಹೇಳಿದ ಚೋಪ್ರಾ

ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮುನ್ನ ತಾಹೀರ್, ಪಾಕಿಸ್ತಾನ ಅಂಡರ್-19 ಕ್ರಿಕೆಟ್ ತಂಡ, ಪಾಕಿಸ್ತಾನ 'ಎ' ತಂಡದ ಪರ ಆಡಿದ್ದರು. 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ತಾಹೀರ್, ಈಗ ವಿದೇಶಿ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಆಗಸ್ಟ್ 18ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ.

Story first published: Tuesday, July 28, 2020, 17:01 [IST]
Other articles published on Jul 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X