ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ಫೈನಲ್ ಸೌಥಾಂಪ್ಟನ್‌ಗೆ ಸ್ಥಳಾಂತರವಾಗಿರುವುದನ್ನು ಖಚಿತಪಡಿಸಿದ ಐಸಿಸಿ

Southampton is venue for World Test Championship final, ICC confirms

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಎರಡು ಅಂತಿಮ ತಂಡಗಳು ಯಾವುದು ಎಂಬುದು ಈಗ ಅಂತಿಮವಾಗಿದೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಈ ಪ್ರತಿಷ್ಟಿತ ಟೂರ್ನಿಯ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದೆ. ಆದರೆ ಈ ಫೈನಲ್ ಪಂದ್ಯ ನಡೆಯಬೇಕಿದ್ದ ತಾಣ ಈಗ ಬದಲಾವಣೆಯಾಗಿದೆ. ಈ ಬಗ್ಗೆ ಸ್ವತಃ ಐಸಿಸಿ ಖಚಿತವಾಗಿ ಮಾಹಿತಿಯನ್ನು ನೀಡಿದೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯ ಇಂಗ್ಲೆಂಡ್‌ನ ಐಸಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಆ ಪಂದ್ಯವನ್ನು ಸೌಥಾಂಪ್ಟನ್‌ನ ಏಜಸ್‌ಬೌಲ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದೆ. ಈ ಬಗ್ಗೆ ಈ ಹಿಂದೆಯೇ ಮಾಹಿತಿಗಳು ಹರಿದಾಡಿದ್ದು ಈಗ ಸ್ವತಃ ಐಸಿಸಿ ಈ ಬಗ್ಗೆ ಖಚಿತಪಡಿಸಿದೆ.

ವಿರಾಟ್ ಕೊಹ್ಲಿ ಪಡೆ ಸೇರಿಕೊಳ್ಳಲಿದ್ದಾರೆ ಯುವ ಸ್ಪಿನ್ನರ್ ರಾಹುಲ್ ಚಾಹರ್ವಿರಾಟ್ ಕೊಹ್ಲಿ ಪಡೆ ಸೇರಿಕೊಳ್ಳಲಿದ್ದಾರೆ ಯುವ ಸ್ಪಿನ್ನರ್ ರಾಹುಲ್ ಚಾಹರ್

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಪರಿಣಾಮವನ್ನು ಕಡಿಮೆ ಮಾಡುವ ಸಲುವಾಗಿ ಲಾರ್ಡ್ಸ್ ಅಂಗಳದಿಂದ ಸೌಥಾಂಪ್ಟನ್‌ಗೆ ಈ ಮಹತ್ವದ ಪಂದ್ಯವನ್ನು ಸ್ಥಳಾಂತರಿಸುವ ನಿರ್ಧಾರ ಮಾಡಲಾಗಿದೆ ಎಂದು ಐಸಿಸಿಯ ಆಡಳುತ ಮಂಡಳಿ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಂಗಳವಾರ 'ಇಂಡಿಯಾ ಟುಡೇ' ಜೊತೆ ಮಾತನಾಡುತ್ತಾ ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿದ್ದರು. ಇದೀಗ ಸ್ವತಃ ಐಸಿಸಿ ಈ ಮಾಹಿತಿಯನ್ನು ಖಚಿತಪಡಿಸಿ ಅಧಿಕೃತ ಹೇಳಿಕೆಯನ್ನು ನೀಡಿದೆ.

ಐಪಿಎಲ್: ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆಯಿಂದ ಅಭ್ಯಾಸ ಆರಂಭಐಪಿಎಲ್: ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆಯಿಂದ ಅಭ್ಯಾಸ ಆರಂಭ

"ಹೌದು, ಫೈನಲ್ ನಡೆಯುವ ಸ್ಥಳ ಸೌಥಾಂಪ್ಟನ್. ಇದು ಬಹಳ ಹಿಂದೆಯೇ ನಿರ್ಧಾರವಾಗಿತ್ತು. ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಈ ಕ್ರೀಡಾಂಗಣದಲ್ಲಿಯೇ ಸಂಪೂರ್ಣ ಮುಚ್ಚಿದ ಹೋಟೆಲ್ ಸೌಲಭ್ಯವಿದೆ" ಎಂದು ಗಂಗೂಲಿ ಮಾಹಿತಿಯನ್ನು ನೀಡಿದ್ದರು. ಭಾರತ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಗೆದ್ದು ಈ ಪ್ರತಿಷ್ಟಿತ ಟೂರ್ನಿಯ ಫೈನಲ್ ಹಂತಕ್ಕೇರಿದೆ. ಐಪಿಎಲ್ 2021ರ ಆವೃತ್ತಿ ಮುಕ್ತಾವಾಗುತ್ತಿದ್ದಂತೆಯೇ ಭಾರತ ಜೂನ್ ಮೊದಲ ವಾರದಲ್ಲಿ ಇಂಗ್ಲೆಂಡ್‌ಗೆ ಹಾರಲಿದೆ.

Story first published: Wednesday, March 10, 2021, 19:54 [IST]
Other articles published on Mar 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X