ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನಗೆ ಸ್ಫೂರ್ತಿ ತುಂಬಿದ್ದು ದ್ರಾವಿಡ್ ಹಿತ ವಚನ : ಹನುಮ ವಿಹಾರಿ

By Mahesh

ಲಂಡನ್, ಸೆಪ್ಟೆಂಬರ್ 10: ಟೀಂ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಹನುಮ ವಿಹಾರಿ ಅವರು ತಮ್ಮ ಮೊದಲ ಪಂದ್ಯದ ಯಶಸ್ಸನ್ನು ತಮ್ಮ ಗುರು ರಾಹುಲ್ ದ್ರಾವಿಡ್ ಅವರಿಗೆ ಅರ್ಪಿಸಿದ್ದಾರೆ.

ಚೊಚ್ಚಲ ಪಂದ್ಯದಲ್ಲೆ ಅರ್ಧಶತಕ ಬಾರಿಸಿದ ಭಾರತದ 26ನೇ ಆಟಗಾರ ಎನಿಸಿಕೊಂಡ ಹನುಮ ವಿಹಾರಿ, ಅರ್ಧಶತಕ ಗಳಿಸಲು ಬೇಕಾದ ಮನಸ್ಥಿತಿಯನ್ನು ಪಡೆಯಲು ಒಂದು ಫೋನ್ ಕಾಲ್ ಕಾರಣವಾಯಿತು ಎಂದು ವಿವರಿಸಿದ್ದಾರೆ.

ಇಂಗ್ಲೆಂಡಿನ ವೇಗದ ಬೌಲರ್ ಗಳನ್ನು ಎದುರಿಸಲು ಬೇಕಾದ ಮನೋಸ್ಥೈರ್ಯವನ್ನು ರಾಹುಲ್ ದ್ರಾವಿಡ್ ಅವರು ತುಂಬಿದರು. ಹೀಗಾಗಿ, ನಾನು ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಯಿತು ಎಂದಿದ್ದಾರೆ.

ಕೊನೇ ಕ್ಷಣದಲ್ಲಿ ಸಿಕ್ಸ್ ಚಚ್ಚಿ ಭಾರತದೆದುರು ಪಾಕ್ ಗೆಲ್ಲಿಸಿದ್ದರು ಅಫ್ರಿದಿ! ಕೊನೇ ಕ್ಷಣದಲ್ಲಿ ಸಿಕ್ಸ್ ಚಚ್ಚಿ ಭಾರತದೆದುರು ಪಾಕ್ ಗೆಲ್ಲಿಸಿದ್ದರು ಅಫ್ರಿದಿ!

ವಿಹಾರಿ ಅವರು 56ರನ್ ಗಳಿಸಿದ್ದಲ್ಲದೆ, ರವೀಂದ್ರ ಜಡೇಜ ಜತೆಗೂಡಿ 77ರನ್ ಗಳ ಮಹತ್ವದ ಜೊತೆಯಾಟ ಸಾಧಿಸಿದರು. ರವೀಂದ್ರ ಜಡೇಜ ಅವರು 86 ರನ್ ಗಳಿಸಿ ಅಜೇಯರಾಗಿ ಉಳಿದರು. ದಿನದ ಅಂತ್ಯಕ್ಕೆ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 292ರನ್ ಗಳಿಸಿತು. ಮತ್ತೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, 154ರನ್ ಮುನ್ನಡೆ ಸಾಧಿಸಿದೆ.

ಚೊಚ್ಚಲ ಪಂದ್ಯದ ಹಿಂದಿನ ದಿನ ಕರೆ ಮಾಡಿದ್ದೆ

ಚೊಚ್ಚಲ ಪಂದ್ಯದ ಹಿಂದಿನ ದಿನ ಕರೆ ಮಾಡಿದ್ದೆ

ಇಂಗ್ಲೆಂಡ್ ವಿರುದ್ಧ ಹಾಗೂ ನನ್ನ ಟೆಸ್ಟ್ ಬದುಕಿನ ಮೊದಲ ಪಂದ್ಯವಾಡುವುದಕ್ಕೂ ಮುನ್ನ ದಿನದಂದು ರಾಹುಲ್ ದ್ರಾವಿಡ್ ಅವರಿಗೆ ಕರೆ ಮಾಡಿ ಕೆಲ ನಿಮಿಷಗಳ ಕಾಲ ಮಾತನಾಡಿದೆ. ದಿಗ್ಗಜರ ಹಿತ ನುಡಿ ಹಾಗೂ ಸಲಹೆಯಿಂದ ನನ್ನ ಬ್ಯಾಟಿಂಗ್ ಸುಧಾರಿಸಿತು ನನ್ನ ಉತ್ತಮ ಪ್ರದರ್ಶನಕ್ಕೆ ಕಾರಣವಾಯಿತು ಎಂದು ವಿಹಾರಿ ಹೇಳಿದ್ದಾರೆ. ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಇಂಡಿಯಾ ಎ ಕೋಚ್ ಆಗಿದ್ದು, ವಿಹಾರಿ ಅವರು ಅವರ ವಿದ್ಯಾರ್ಥಿಯಾಗಿದ್ದಾರೆ.

ಬಿಸಿಸಿಐಗೆ ಛೀಮಾರಿ, ಮಯಾಂಕ್ ತಂಡದಲ್ಲಿ ಏಕಿಲ್ಲ? ಹರ್ಭಜನ್ ಪ್ರಶ್ನೆ

ದ್ರಾವಿಡ್ ನಿಜಕ್ಕೂ ಅಂಥದ್ದೇನು ಹೇಳಿದರು

ನಿನ್ನಲ್ಲಿ ಪ್ರತಿಭೆಯಿದೆ. ಈ ಸಮಯಕ್ಕೆ ನಿನಗೆ ಅದನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಸಿಕ್ಕಿದೆ. ತಾಳ್ಮೆಯಿಂದ ಪ್ರತಿ ಎಸೆತವನ್ನು ಎದುರಿಸು, ಕ್ರೀಸ್ ನಲ್ಲಿರುವಷ್ಟು ಕಾಲ ಎಂಜಾಯ್ ಮಾಡು ಎಂದರು. ಇಂಡಿಯಾ ಎ ದಲ್ಲಿದ್ದಾಗಲೂ ಅವರ ಸಲಹೆ ನನಗೆ ಸಹಕಾರಿಯಾಗಿತ್ತು. ಈಗಲೂ ನನಗೆ ಸಹಕಾರಿಯಾಯಿತು ಎಂದಿದ್ದಾರೆ.

ಆದರೆ, ಕಣಕ್ಕಿಳಿದ ಮೇಲೆ ಆತಂಕಗೊಂಡೆ

ಕ್ರೀಸ್ ನಲ್ಲಿದ್ದಾಗ ಕೆಲ ಕಾಲ ಆತಂಕಗೊಂಡಿದ್ದೆ, ಆದರೆ, ದ್ರಾವಿಡ್ ಅವರ ಮಾತುಗಳು ಕಿವಿಯಲ್ಲಿ ಗುಂಯ್ ಗುಟ್ಟುತ್ತಲ್ಲಿತ್ತು. ಜತೆಗೆ ಜಡೇಜ ಅವರು ಕೂಡಾ ಸ್ಫೂರ್ತಿ ತುಂಬಿದರು. 990 ವಿಕೆಟ್ ಗಳನ್ನು ಹಂಚಿಕೊಂಡಿರುವ ಇಂಗ್ಲೆಂಡಿನ ಶ್ರೇಷ್ಠ ಬೌಲರ್ ಗಳ ಎದುರು ಆಡಿದ ಅನುಭವ ಸಿಕ್ಕಿತು. ನಾಯಕ ವಿರಾಟ್ ಕೊಹ್ಲಿ ಅವರಿದ್ದ ಕಡೆ ನೆಗಟಿವ್ ಚಿಂತನೆಗೆ ಅವಕಾಶವೇ ಇರುವುದಿಲ್ಲ. ಹೋರಾಟದ ಮನೋಭಾವ ತಾನಾಗೇ ಬಂದು ಬಿಡುತ್ತದೆ ಎಂದರು.

ಇದು ನನ್ನ ಕನಸಿನ ಆರಂಭ

ತಂಡಕ್ಕೆ ಆಯ್ಕೆಯಾದ ಬಗ್ಗೆ ಕುಟುಂಬಕ್ಕೆ ಮೊದಲು ತಿಳಿಸಿದೆ. ಎಲ್ಲರೂ ಸಂತಸ ಪಟ್ಟರು. ದೇಶಕ್ಕಾಗಿ ಟೆಸ್ಟ್ ಆಡುವುದು ಎಲ್ಲರ ಕನಸಾಗಿರುತ್ತದೆ. ಮೊದಲ ಪಂದ್ಯದಲ್ಲಿ 50ರನ್ ಗಳಿಸಿದ್ದು ತೃಪ್ತಿ ನೀಡಿದೆ. ಇದು ಕನಸಿನ ಆರಂಭ ಎಂದು 24 ವರ್ಷ ವಯಸ್ಸಿನ ವಿಹಾರಿ ಹೇಳಿದರು.

2013 ಹಾಗೂ 2015ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ, ಆದರೆ, ಅವಕಾಶಕ್ಕಾಗಿ ಕಾದಿದ್ದಕ್ಕೂ ಈಗ ಸೂಕ್ತ ವೇದಿಕೆ ಸಿಕ್ಕಿದೆ. ಸಿಕ್ಕ ಅವಕಾಶವನ್ನು ವಿಹಾರಿ ಸದುಪಯೋಗ ಪಡಿಸಿಕೊಂಡಿದ್ದಾರೆ.

Story first published: Monday, September 10, 2018, 14:03 [IST]
Other articles published on Sep 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X