ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಲೋಕದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಹೆಸರಿನಲ್ಲಿರುವ ವಿಶೇಷ ದಾಖಲೆಗಳಿವು!

Special Achievements Of Kannadiga Kl Rahul In Cricket

ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ಪಾಲಿನ ಆಪತ್ಭಾಂಧವ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೆ.ಎಲ್ ರಾಹುಲ್ ಟೀಮ್ ಇಂಡಿಯಾದ ಪ್ರಮುಖ ಅಸ್ತ್ರವಾಗಿದೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರಾಹುಲ್‌ ಈಗ ಅಗ್ರ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿ ಯಶಸ್ವಿಯಾಗಿದ್ದಾರೆ.

ಮಂಗಳೂರು ಮೂಲದ ಕೆಎಲ್ ರಾಹುಲ್ ಸದ್ಯ ಎಲ್ಲಾ ಕ್ರಮಾಂಕದಲ್ಲೂ ಆಡಿ ಸೈ ಎನಿಸಿಕೊಂಡಿದ್ದಾರೆ. ಬ್ಯಾಟ್ಸ್‌ಮನ್‌ ಆಗಿದ್ದ ರಾಹುಲ್ ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಆಗಿಯೂ ಮಿಂಚಿದ್ದಾರೆ. ಈ ಮೂಲಕ ನಾಯಕ ತನ್ನ ಮೇಲಿಟ್ಟ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ನೆಚ್ಚಿನ ಆಟಗಾರನಾಗಿದ್ದಾರೆ ಕೆ.ಎಲ್ ರಾಹುಲ್

'ಯುಎಇ ಸುರಕ್ಷಿತವಲ್ಲ, ಐಪಿಎಲ್‌ಅನ್ನು ಭಾರತದಲ್ಲೇ ಆಯೋಜಿಸಿ''ಯುಎಇ ಸುರಕ್ಷಿತವಲ್ಲ, ಐಪಿಎಲ್‌ಅನ್ನು ಭಾರತದಲ್ಲೇ ಆಯೋಜಿಸಿ'

ಕರ್ನಾಟಕದ ಹೆಮ್ಮೆಯ ಆಟಗಾರ ಕೆ.ಎಲ್ ರಾಹುಲ್ ಅಂತಾರಾಷ್ಟ್ರೀಯ ದೇಶೀಯ ಹಾಗೂ ಐಪಿಎಲ್‌ನಲ್ಲಿ ದಾಖಲಿಸಿದ ಕೆಲ ವಿಶೇಷ ಸಾಧನೆಗಳು ನಿಮಗಾಗಿ..

ಐಪಿಎಲ್‌ನಲ್ಲಿ ವೇಗದ ಅರ್ಧ ಶತಕ

ಐಪಿಎಲ್‌ನಲ್ಲಿ ವೇಗದ ಅರ್ಧ ಶತಕ

ಐಪಿಎಲ್‌ನಲ್ಲಿ ವೇಗದ ಅರ್ಧ ಶತಕವನ್ನು ದಾಖಲಿಸಿರುವ ದಾಖಲೆ ಕೆ.ಎಲ್ ರಾಹುಲ್ ಹೆಸರಿನಲ್ಲಿದೆ. ಕಿಂಗ್ಸ್‌ ಇಲವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸುವ ರಾಹುಲ್ 2018ರ ಐಪಿಎಲ್ ಆವೃತ್ತಿಯಲ್ಲಿ ಈ ದಾಖಲೆಯನ್ನು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ರಾಹುಲ್ ಮಾಡಿದ್ದಾರೆ. ಈ ದಾಖಲೆಯ ಅರ್ಧ ಶತಕ ಕೇವಲ 14 ಎಸೆತಗಳಲ್ಲಿ ಮೂಡಿಬಂದಿದೆ. ಆರು ಬೌಂಡರಿ ಮತ್ತು ನಾಲ್ಕು ಭರ್ಜರಿ ಸಿಕ್ಸರ್‌ನೊಂದಿಗೆ ಈ ದಾಖಲೆಯನ್ನು ಮಾಡಿದ್ದಾರೆ ರಾಹುಲ್.

3 ಮಾದರಿಯಲ್ಲಿ ಶತಕ ಗಳಿಸಿದ ಹೆಗ್ಗಳಿಕೆ

3 ಮಾದರಿಯಲ್ಲಿ ಶತಕ ಗಳಿಸಿದ ಹೆಗ್ಗಳಿಕೆ

ಟೀಮ್ ಇಂಡಿಯಾದಲ್ಲಿ ಮೂರೂ ಮಾದರಿಯಲ್ಲಿ ಶತಕವನ್ನು ಗಳಿಸಿದ ಮೂರೇ ಆಟಗಾರರಲ್ಲಿ ಕೆಎಲ್ ರಾಹುಲ್ ಕೂಡ ಒಬ್ಬರು. ಕೆಎಲ್ ರಾಹುಲ್ ಏಕದಿನ ಟೆಸ್ಟ್ ಶತಕದ ಜೊತೆಗೆ ಟಿ20 ಕ್ರಿಕೆಟ್‌ನಲ್ಲೂ ಶತಕವನ್ನು ದಾಖಲಿಸಿದ್ದಾರೆ. ಈ ಸಾಧನೆಯನ್ನು ಮಾಡಿರುವ ಇನ್ನಿಬ್ಬರು ಆಟಗಾರರು ಅಂದರೆ ಸುರೇಶ್ ರೈನಾ ಮತ್ತು ರೋಹಿತ್ ಶರ್ಮಾ ಮಾತ್ರ.

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಅವಳಿ ಶತಕ

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಅವಳಿ ಶತಕ

ದುಲೀಪ್ ಟ್ರೋಫಿಯಲ್ಲಿ ದಕ್ಷಿಣ ವಿಭಾಗವನ್ನು ಪ್ರತಿನಿಧಿಸುವ ಕೆಎಲ್ ರಾಹುಲ್ 2014ರ ಫೈನಲ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕವನ್ನು ದಾಖಲಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 185 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 130ರನ್ ಗಳಿಸಿದ್ದರು. ದುರದೃಷ್ಟವಶಾತ್ ಈ ಪಂದ್ಯವನ್ನು ದಕ್ಷಿಣ ವಿಭಾಗ 9 ರನ್‌ಗಳಿಂದ ಸೋಲು ಕಂಡಿತ್ತು.

ವಿರಾಟ್ ದಾಖಲೆ ಮುರಿದ ಕೆ.ಎಲ್

ವಿರಾಟ್ ದಾಖಲೆ ಮುರಿದ ಕೆ.ಎಲ್

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆಯನ್ನು ಕೆಎಲ್ ರಾಹುಲ್ ಮುರಿದಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ದ ನಡೆದ ಟಿ20 ಸರಣಿಯಲ್ಲಿ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದರು ರಾಹುಲ್. ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಈ ದಾಖಲೆಯನ್ನು ತನ್ನ ಹೆಸರಿಗೆ ರಾಹುಲ್ ಬರೆದುಕೊಂಡಿದ್ದಾರೆ.

ದೇಸಿ ಕ್ರಿಕೆಟ್‌ ಸೀಸನ್‌ನಲ್ಲಿ 1000ರನ್

ದೇಸಿ ಕ್ರಿಕೆಟ್‌ ಸೀಸನ್‌ನಲ್ಲಿ 1000ರನ್

2013ರ ರೆಡ್‌ಬುಲ್ ಕ್ಯಾಂಪಸ್ ಕ್ರಿಕೆಟ್ ಟೂರ್ನಿಯಲ್ಲಿ ರಾಹುಲ್ ಅದ್ಭುತ ಪ್ರದರ್ಶನದೊಂದಿಗೆ ಟಾಪ್ ಸ್ಕೋರರ್ ಆಗಿದ್ದರು. ಇದೇ ವರ್ಷ ಕೆಎಲ್ ರಾಹುಲ್ ಆರ್‌ಸಿಬಿ ತಂಡದ ಮೂಲಕ ಮೊದಲ ಬಾರಿಗೆ ಐಪಿಎಲ್‌ಗೆ ಪದಾರ್ಪಣೆಯನ್ನೂ ಮಾಡಿದ್ದರು. ಬಳಿಕ ಇದೇ ವರ್ಷ ರಣಜಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಕರ್ನಾಟಕ ತಂಡದ ಪರವಾಗಿ ಕೆಎಲ್ ರಾಹುಲ್ 1033ರನ್‌ಗಳಿಸಿದ್ದರು. ಈ ಮೂಲಕ ಕೆಎಲ್ ರಾಹುಲ್ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

Story first published: Monday, August 3, 2020, 9:55 [IST]
Other articles published on Aug 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X