ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ

Spectator At India Vs Australia Women’s T20 World Cup Final Diagnosed With Covid-19

ವಿಶ್ವಾದ್ಯಂತ ಆತಂಕವನ್ನು ಸೃಷ್ಟಿಸಿರುವ ಕೊರೊನಾ ವೈರಸ್ ಕ್ರೀಡಾ ಲೋಕದ ಮೇಲೂ ಭಾರೀ ಸಂಚಲನವನ್ನು ಸೃಷ್ಟಿಸಿದೆ. ಒಂದೆಡೆ ಒಲಿಂಪಿಕ್ಸ್ ತೂಗುಯ್ಯಾಲೆಯಲ್ಲಿದ್ದರೆ ಮತ್ತೊಂದೆಡೆ ಐಪಿಎಲ್ ಕೂಡ ನಡೆಯುತ್ತಾ ಇಲ್ವಾ ಅನ್ನುವ ಸಂದಿಗ್ಧತೆಯ ಮಧ್ಯೆಯೇ ಇದೆ. ಈ ಮಧ್ಯೆ ಕ್ರಿಕೆಟ್ ಅಂಗಳದಲ್ಲಿ ಆತಂಕ ಪಡುವ ಸುದ್ದಿಯೊಂದು ವರದಿಯಾಗಿದೆ.

ಮೊನ್ನೆಯಷ್ಟೇ ಮಹಿಳಾ ವಿಶ್ವಕಪ್‌ ಅಂತ್ಯವಾಗಿದ್ದು ಫೈನಲ್ ಪಂದ್ಯದಲ್ಲಿ ಭಾಗಿಯಾಗಿದ್ದ ಓರ್ವ ಪ್ರೇಕ್ಷಕನಿಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ಇದು ಅಂದು ಕ್ರಿಕೆಟ್ ವೀಕ್ಷಣೆಗೆ ಬಂದಿದ್ದ ಸಾವಿರಾರು ಪ್ರೇಕ್ಷಕರನ್ನು ಆತಂಕಕ್ಕೆ ದೂಡಿದೆ.

ಕೊರೊನಾ ವೈರಸ್ ಭೀತಿ : ವಿಶ್ವ XI vs ಏಷ್ಯಾ XI ಪಂದ್ಯ ಮುಂದೂಡಿಕೆಕೊರೊನಾ ವೈರಸ್ ಭೀತಿ : ವಿಶ್ವ XI vs ಏಷ್ಯಾ XI ಪಂದ್ಯ ಮುಂದೂಡಿಕೆ

ಆದರೆ ಈ ಬಗ್ಗೆ ಆರೋಗ್ಯ ಮತ್ತು ಮಾನವ ಸೇವೆ ವಿಭಾಗ ಸ್ಪಷ್ಟನೆಯೊಂದನ್ನು ನೀಡಿದ್ದು ಸ್ವಲ್ಪ ಮಟ್ಟಿನ ಆತಂಕ ಕಡಿಮೆಯಾಗುವಂತೆ ಮಾಡಿದೆ. ಪತ್ತೆಯಾಗಿರುವ ಕೊರೊನಾ ವೈರಸ್‌ಅನ್ನು ಹರಡುವ ಅಪಾಯ ಕಡಿಮೆಯಿರುವ ವಿಭಾಗ ಎಂದು ವಿಭಜಿಸಲಾಗಿದೆ. ಹೀಗಾಗಿ ಇತರ ಪ್ರೇಕ್ಷಕರು ಮತ್ತು ಮೈದಾನದ ಸಿಬ್ಬಂದಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದಿದ್ದಾರೆ.

ಕಳೆದ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಮಹಿಳಾ ವಿಶ್ವಕಪ್‌ನ ಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯಕ್ಕಾಗಿ ಮೈದಾನದಲ್ಲಿ 86,174 ಜನರು ಎಂ.ಸಿ.ಜಿಯಲ್ಲಿ ಪಾಲ್ಗೊಂಡಿದ್ದರು. ಮಹಿಳಾ ಕ್ರಿಕೆಟ್‌ನಲ್ಲಿ ಇಷ್ಟೊಂದು ವೀಕ್ಷಕರು ಪಾಲ್ಗೊಂಡಿರುವುದು ದಾಖಲೆಯಾಗಿದೆ.

ಖಾಲಿ ಮೈದಾನದಲ್ಲಿ ಭಾರತ vs ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ!ಖಾಲಿ ಮೈದಾನದಲ್ಲಿ ಭಾರತ vs ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ!

ಭಾರತದ ವನಿತೆಯರ ತಂಡ ಮತ್ತು ಆಸ್ಟ್ರೇಲಿಯಾ ತಂಡ ಫೈನಲ್‌ನಲ್ಲಿ ಕಾದಾಟವನ್ನು ನಡೆಸಿತ್ತು. ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನವನ್ನು ನೀಡಿದ ಭಾರತದ ಮಹಿಳಾ ತಂಡದ ಮೇಲೆ ಸಾಕಷ್ಟು ನಿರೀಕ್ಷೆಯಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಎಡವಿದ ಭಾರತ ತಂಡ ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

Story first published: Thursday, March 12, 2020, 14:45 [IST]
Other articles published on Mar 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X