ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019 ಆತಿಥ್ಯದ ಬಗ್ಗೆ ಊಹಾಪೋಹ, ವೇಳಾಪಟ್ಟಿ ವೈರಲ್!

Speculation on Indian Premier League 2019 venue hots up

ನವದೆಹಲಿ, ಜನವರಿ 3: ಭಾರತದ ಮಹಾನ್ ಕ್ರಿಕೆಟ್ ಹಬ್ಬವಾದ ಇಂಡಿಯನ್ ಪ್ರೀಮಿಯರ್ ಲೀಗ್‌ 2019 (ಐಪಿಎಲ್) ವೇಳಾಪಟ್ಟಿ ಮತ್ತು ಆತಿಥ್ಯದ ಬಗ್ಗೆ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಿಸಿಸಿಐಯು ಐಪಿಎಲ್ ಅಧಿಕೃತ ಪಟ್ಟಿ ಪ್ರಟಿಸಿಲ್ಲ. ಆದರೆ ಜಾಲತಾಣಗಳಲ್ಲಿ ಈಗಾಗಲೇ ವೇಳಾಪಟ್ಟಿ ಕಾಣಸಿಗುತ್ತಿದೆ!

ಮೋರೆ, ಶ್ರೇಯಸ್ ದಾಳಿಗೆ ಛತ್ತೀಸ್ ಗಢ ತತ್ತರ: ಕರ್ನಾಟಕಕ್ಕೆ ಭರ್ಜರಿ ಜಯಮೋರೆ, ಶ್ರೇಯಸ್ ದಾಳಿಗೆ ಛತ್ತೀಸ್ ಗಢ ತತ್ತರ: ಕರ್ನಾಟಕಕ್ಕೆ ಭರ್ಜರಿ ಜಯ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೇಳಾ ಪಟ್ಟಿಯ ಪ್ರಕಾರ ಐಪಿಎಲ್ 12ನೇ ಆವೃತ್ತಿ ಭಾರತದಲ್ಲಿ ನಡೆಯುತ್ತಿಲ್ಲ. ಬದಲಿಗೆ ಈ ಅದ್ದೂರಿ ಕ್ರಿಕೆಟ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯಲಿದೆ.

ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೇಳೆಪಟ್ಟಿಗೆ ರೆಕ್ಕೆಪುಕ್ಕ ಬೆಳೆಯುತ್ತಲೇ ಇರುವುದಕ್ಕೆ ಒಂದು ಕಾರಣವಿದೆ. ಅದೇನೆಂದರೆ ಲೋಕ ಸಭಾ ಚುನಾವಣೆ ಮತ್ತು ಐಪಿಎಲ್ 2018ರ ಮುಖಾಮುಖಿ. ಎರಡೂ ಪ್ರಮುಖ ಸ್ಪರ್ಧೆಗಳು ನಡೆಯೋದು ಮಾರ್ಚ್-ಏಪ್ರಿಲ್ ನಡುವೆಯೇ ಎನ್ನುತ್ತಿವೆ ಮೂಲಗಳು.

ಸದ್ಯ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೇಳಾಪಟ್ಟಿಯ ಪ್ರಕಾರ 2019ರ ಮಾರ್ಚ್ 29ರಂದು ದುಬೈನಲ್ಲಿ ಆರಂಭಗೊಳ್ಳುವ ಐಪಿಎಲ್ ಮೇ 19ರಂದು ದುಬೈನಲ್ಲೇ ಫೈನಲ್‌ನೊಂದಿಗೆ ಅಂತ್ಯ ಹಾಡಲಿದೆ. ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ.

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಬಿಸಿಸಿಐ ಈ ಮೊದಲು ಐಪಿಎಲ್ ಅನ್ನು ವಿದೇಶದಲ್ಲಿ ನಡೆಸಿರುವ ಉದಾಹರಣೆಗಳೂ ಇವೆ. 2009ರಂದು ಸೌತ್ ಆಫ್ರಿಕಾದಲ್ಲಿ ಮತ್ತು 2014ರಲ್ಲಿ ಐಪಿಎಲ್ ಟೂರ್ನಿ ಯುಎಇಯಲ್ಲಿ ನಡೆಸಲಾಗಿತ್ತು.

ಭಾರತದಲ್ಲೇ ನಡೆಸುವುದಾದರೆ ಚುನಾವಣೆ ಸಂದರ್ಭ ಟೂರ್ನಿಯ ವೇಳಾಪಟ್ಟಿಗೆ ತೊಂದರೆ ಆಗುವ ಸಂಭವ ಇದ್ದೇ ಇದೆ. ಅದರಲ್ಲೂ ಪಕ್ಕಾ ಹಣದ ಹೊಳೆ ಹರಿಸುವ ಟೂರ್ನಿಯಾಗಿರುವುದರಿಂದ ಈ ಬಾರಿ ಐಪಿಎಲ್ ವಿದೇಶದಲ್ಲೇ ನಡೆದರೂ ಅಚ್ಚರಿಯಿಲ್ಲ. ಬಿಸಿಸಿಐ ಕೂಡ ಇದೇ ನೆಲೆಯಲ್ಲೇ ಯೋಚಿಸುತ್ತಿದೆ ಎನ್ನಲಾಗುತ್ತಿದೆ.

Story first published: Thursday, January 3, 2019, 12:57 [IST]
Other articles published on Jan 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X