ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಗ್ಪುರದಲ್ಲಿ 25 ವರ್ಷ ಹಳೆ ದಾಖಲೆ ಮುರಿದ ಭಾರತ

By Mahesh

ನಾಗ್ಪುರ, ನ.26: ಟೀಂ ಇಂಡಿಯಾದ ಸ್ಪಿನ್ ತ್ರಿವಳಿಗಳ ದಾಳಿಗೆ ಸಿಲುಕಿ ದಕ್ಷಿಣ ಆಫ್ರಿಕಾ ತಂಡ ಅತ್ಯಂತ ಕಳಪೆ ಮೊತ್ತಕ್ಕೆ ಕುಸಿದಿರುವುದು ದಾಖಲೆಯಾಗಿದೆ. ದಕ್ಷಿಣ ಆಫ್ರಿಕಾವನ್ನು 79ರನ್ ಗಳ ಮೊತ್ತಕ್ಕೆ ನಿಯಂತ್ರಿಸಿದ ಭಾರತದ ಸ್ಪಿನ್ನರ್ಸ್ ಇಲ್ಲಿನ ವಿಸಿಎ ಸ್ಟೇಡಿಯಂನಲ್ಲಿ 25 ವರ್ಷ ಹಳೆ ದಾಖಲೆಯನ್ನು ಮುರಿದಿದ್ದಾರೆ.

| ಫೋಟೋ ಗ್ಯಾಲರಿ

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ 2ನೇ ದಿನವಾದ ಗುರುವಾರ (ನವೆಂಬರ್ 26) ಭಾರತ ಪರ ಆರ್ ಅಶ್ವಿನ್, ರವೀಂದ್ರ ಜಡೇಜ ಹಾಗೂ ಅಮಿತ್ ಮಿಶ್ರಾ ಅವರು ಎಲ್ಲಾ 10 ವಿಕೆಟ್ ಗಳನ್ನು ಹಂಚಿಕೊಂಡು 33.1 ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾವನ್ನು 79ಸ್ಕೋರಿಗೆ ನಿಯಂತ್ರಿಸಿದರು. ಈ ಮೂಲಕ ಅತಿಥೇಯ ತಂಡಕ್ಕೆ 136ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಿಕ್ಕಿದೆ.[ರವಿ-ಚಂದ್ರರ ದಾಳಿಗೆ ನಲುಗಿದ ಆಫ್ರಿಕಾ 79ಕ್ಕೆ ಆಲೌಟ್]

Spin-powered India shatter 25-year-old record in Nagpur; South Africa 79 all out

ಇದು ಭಾರತದ ನೆಲದಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಗಳಿಸಿರುವ ಅತ್ಯಂತ ಕಳಪೆ ಮೊತ್ತವಾಗಿದೆ. ಈ ಮುಂಚೆ ಚಂದಿಗಢದಲ್ಲಿ ಭಾರತ ವಿರುದ್ಧ ಶ್ರೀಲಂಕಾ 82ರನ್ ಗೆ ಆಲೌಟ್ ಆಗಿತ್ತು.

ಟೆಸ್ಟ್ ವೃತ್ತಿ ಬದುಕಿನಲ್ಲಿ 14ನೇ ಬಾರಿಗೆ 5 ವಿಕೆಟ್ ಪಡೆದ ಆರ್ ಅಶ್ವಿನ್ ಅವರು 5/32 ಗಳಿಸಿದರೆ, ಜಡೇಜ 4/33 ಹಾಗೂ ಕೇವಲ ಮೂರು ಓವರ್ ಬೌಲ್ ಮಾಡಿದ ಮಿಶ್ರಾ ಅವರು ಉಳಿದ ಇನ್ನೊಂದು ವಿಕೆಟ್ ಪಡೆದರು.

ಮೊದಲ ದಿನದ ಅಂತ್ಯಕ್ಕೆ 11/2 ಸ್ಕೋರ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ 2ನೇ ದಿನದಲ್ಲಿ 23.1 ಓವರ್ ಗಳಲ್ಲೇ 8 ವಿಕೆಟ್ ಕಳೆದುಕೊಂಡು 68ರನ್ ಮಾತ್ರ ಸೇರಿಸಿತು. [ಮೊದಲ ದಿನದ ರಿಪೋರ್ಟ್]

ಭಾರತ ವಿರುದ್ಧ ಟಾಪ್ 10 ಅತ್ಯಂತ ಕಡಿಮೆ ಮೊತ್ತದ ಟೆಸ್ಟ್ ಸ್ಕೋರ್ ಗಳು:
* 79- ದಕ್ಷಿಣ ಆಫ್ರಿಕಾ, ನಾಗ್ಪುರ, 2015
* 82- ಶ್ರೀಲಂಕಾ, ಚಂದೀಗಢ, 1990
* 83- ಆಸ್ಟ್ರೇಲಿಯಾ, ಮೆಲ್ಬೋರ್ನ್, 1981.
* 84- ದಕ್ಷಿಣ ಆಫ್ರಿಕಾ, ಜೋಹಾನ್ಸ್ ಬರ್ಗ್, 2006.
* 91- ಬಾಂಗ್ಲಾದೇಶ, ಢಾಕಾ, 2000
* 93- ಆಸ್ಟ್ರೇಲಿಯಾ, ಮುಂಬೈ, 2004.
* 94- ನ್ಯೂಜಿಲೆಂಡ್, ಹ್ಯಾಮಿಲ್ಟನ್, 2002.
* 100- ನ್ಯೂಜಿಲೆಂಡ್, ವೆಲ್ಲಿಂಗ್ಟನ್, 1981.
* 101 - ಇಂಗ್ಲೆಂಡ್, ಲಂಡನ್ (ದಿ ಓವಲ್), 1971.
* 101- ನ್ಯೂಜಿಲೆಂಡ್, ಆಕ್ಲೆಂಡ್, 1968.

( ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X