ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇರ್ಫಾನ್ ಪಠಾಣ್ ಟ್ವೀಟ್‌ಗೆ ಅಮಿತ್ ಮಿಶ್ರಾ ಉತ್ತರ: ಸಂವಿಧಾನವನ್ನ ಪಾಲಿಸಿದ್ರೆ ಭಾರತ ಸುಂದರ ದೇಶವಾಗಲಿದೆ' ಎಂದ ಸ್ಪಿನ್ನರ್‌

Irfan pathan and Amit mishra

ಭಾರತದ ಮಾಜಿ ಕ್ರಿಕೆಟ್ ಇರ್ಫಾನ್ ಪಠಾಣ್ ಟ್ವೀಟ್‌ಗೆ ಅಮಿತ್ ಮಿಶ್ರಾ ಸಖತ್ ಪ್ರತಿಕ್ರಿಯೆ ನೀಡಿದ್ದು, ಭಾರತವು ಸುಂದರ ದೇಶವಾಗಬೇಕಾದ್ರೆ, ಮೊದಲು ಸಂವಿಧಾನವನ್ನ ಎಲ್ಲರೂ ಪಾಲಿಸಬೇಕು ಎಂದಿದ್ದಾರೆ.

ಭಾರತದಲ್ಲಿ ಕೆಲವೆಡೆ ಕೋಮು-ಸೌಹಾರ್ದತೆ ಕೆಡುವುವ ಪ್ರಯತ್ನ ನಡೆಯುತ್ತಿದ್ದು, ಸಾಮಾಜಿಕ ಶಾಂತಿಗೆ ಭಂಗ ಎದುರಾಗಿದೆ ಎಂಬುದು ಇರ್ಫಾನ್ ಪಠಾಣ್ ಟ್ವೀಟ್‌ ಹಿಂದಿನ ಉದ್ದೇಶದಂತಿದೆ. ಇತ್ತೀಚೆಗೆ ಭಾರತದಲ್ಲಿ ಹಲವೆಡೆ ಕೋಮು ಗಲಭೆಗಳು ನಡೆದಿರುವ ನಿದರ್ಶನಗಳನ್ನ ಆಧಾರವಾಗಿಟ್ಟುಕೊಂಡು ಇರ್ಫಾನ್ ಈ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೆ ಇಸ್ಲಾಂ ಧರ್ಮವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಯುವಕನೊಬ್ಬನ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಿಂದ ಕೆರಳಿದ ಒಂದು ಗುಂಪು, ಕರ್ನಾಟಕದ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.

'' ನನ್ನ ದೇಶ, ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಟ ದೇಶವಾಗುವ ಸಾಮರ್ಥ್ಯವನ್ನ ಹೊಂದಿದೆ. ಆದ್ರೆ...'' ಎಂದು ಟೀಂ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದರು. ಈ ಮೂಲಕ ಯಾವುದೋ ಒಂದು ವಿಚಾರದ ಕುರಿತಾಗಿ ಗೊಂದಲವನ್ನ ಟ್ವೀಟ್‌ ಮೂಲಕ ವ್ಯಕ್ತಪಡಿಸಿದ್ರು.

IPL 2022 : ರಿಕಿ ಪಾಂಟಿಂಗ್ ಕುಟುಂಬದ ಸದಸ್ಯರಿಗೆ ಕೋವಿಡ್, ರಾಜಸ್ತಾನ್ ವಿರುದ್ಧದ ಪಂದ್ಯದಿಂದ ಔಟ್IPL 2022 : ರಿಕಿ ಪಾಂಟಿಂಗ್ ಕುಟುಂಬದ ಸದಸ್ಯರಿಗೆ ಕೋವಿಡ್, ರಾಜಸ್ತಾನ್ ವಿರುದ್ಧದ ಪಂದ್ಯದಿಂದ ಔಟ್

ಇರ್ಫಾನ್ ಪಠಾಣ್‌ರ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆದ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ, ಸ್ಪಿನ್ನರ್ ಅಮಿತ್ ಮಿಶ್ರಾ, ಪಠಾಣ್ ಟ್ವೀಟ್ ಹೋಲುವಂತೆ ಬರೆದು ಆತನ ಮಾತನ್ನ ಮುಂದುವರಿಸಿದಂತೆ ಟ್ವೀಟ್ ಮಾಡಿದ್ದಾರೆ. ಇದು ಆತನಿಗೆ ಉತ್ತರ ನೀಡದಿದ್ದರೂ, ಪರೋಕ್ಷವಾಗಿ ಇರ್ಫಾನ್ ಪಠಾಣ್‌ಗೆ ತಿಳಿಸಿದಂತಿದೆ.

'' ನನ್ನ ದೇಶ, ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಟ ದೇಶವಾಗುವ ಸಾಮರ್ಥ್ಯವನ್ನ ಹೊಂದಿದೆ. ಆದ್ರೆ ನಮ್ಮಲ್ಲಿ ಕೆಲವರು ಅನುಸರಿಸಬೇಕಾದ ಮೊದಲ ಪುಸ್ತಕ ಸಂವಿಧಾನ ಎಂದು ಅರಿತುಕೊಂಡರೆ ಮಾತ್ರ'' ಎಂದು ಅಮಿತ್ ಮಿಶ್ರಾ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

Rishab Pant ಕಡೇ ಓವರ್ ನಲ್ಲಿ Cheater ಅನ್ನಿಸಿಕೊಂಡಿದ್ದೇಕೆ | Oneindia Kannada

ಅಮಿತ್ ಮಿಶ್ರಾ ಟ್ವೀಟ್‌ಗೆ ಶ್ಲಾಘನೆ ವ್ಯಕ್ತವಾಗಿದ್ದು, 87 ಸಾವಿರ ನೆಟ್ಟಿಗರು ಲೈಕ್ ಮಾಡಿದ್ದು, 19.3 ಸಾವಿರ ರೀ ಟ್ವೀಟ್ ಆಗಿದೆ.

Story first published: Saturday, April 23, 2022, 10:05 [IST]
Other articles published on Apr 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X