ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ಯಾಮರೂನ್ ಗ್ರೀನ್‌ ತಲೆಗೆ ಬಡಿದ ಚೆಂಡು: ಸಿರಾಜ್ ಕ್ರೀಡಾಸ್ಪೂರ್ತಿಗೆ ನೆಟ್ಟಿಗರ ಪ್ರಶಂಸೆ: ವಿಡಿಯೋ

Spirit of Cricket: Siraj lauded for his sportsmanship on Day 1 of Tour Match

ಆಸ್ಟ್ರೇಲಿಯಾ ಎ ಮತ್ತು ಭಾರತ ಎ ತಂಡ ಇಂದು ಎರಡನೇ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದಿದೆ. ಸಿಡ್ನಿಯಲ್ಲಿ ಎರಡನೇ ಅಭ್ಯಾಸ ಪಂದ್ಯ ಅಹರ್ನಿಶಿಯಾಗಿ ನಡೆಯುತ್ತಿದ್ದು ಭಾರತ ಎ ತಂಡ ಮೊದಲಿಗೆ ಬ್ಯಾಟಿಂಗ್ ಮಾಡಿದೆ. ಭಾರತದ ಬ್ಯಾಟಿಂಗ್‌ನ ಅಂತ್ಯದ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ತಲೆಗೆ ಚೆಂಡು ಬಡಿಯಿತು. ಈ ಸಂದರ್ಭದಲ್ಲಿ ಭಾರತದ ವೇಗಿ ಸಿರಾಜ್ ಮನವೀಯವಾಗಿ ತೋರಿದ ಪ್ರತಿಕ್ರಿಯೆ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ.

ಭಾರತ ಎ ತಂಡ 9 ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮುಂದುವರಿಸಿತ್ತು. ಅಂತಿಮ ವಿಕೆಟ್‌ಗೆ ಇಬ್ಬರು ವೇಗಿಗಳಾದ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭಾರತೀಯ ಬ್ಯಾಟಿಂಗ್‌ಗೆ ಬಲ ತುಂಬಿದರು.

ಸಿಕ್ಸ್‌ ಚಚ್ಚಿ ಅರ್ಧ ಶತಕ ಪೂರೈಸಿದ ಜಸ್‌ಪ್ರೀತ್‌ ಬೂಮ್ರಾ: ವಿಡಿಯೋಸಿಕ್ಸ್‌ ಚಚ್ಚಿ ಅರ್ಧ ಶತಕ ಪೂರೈಸಿದ ಜಸ್‌ಪ್ರೀತ್‌ ಬೂಮ್ರಾ: ವಿಡಿಯೋ

ಬೂಮ್ರಾ ಬಾರಿಸಿದ ಚೆಂಡು

44ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಕಣಕ್ಕಿಳಿದಿದ್ದರು. ಈ ಓವರ್‌ನ ಮೊದಲ ಎಸೆತದಲ್ಲಿ ಬೂಮ್ರಾ ವೇಗವಾಗಿ ಚೆಂಡನ್ನು ಬಾರಿಸಿದರು. ಅದು ನೇರವಾಗಿ ಬೌಲಿಂಗ್ ಮಾಡುತ್ತಿದ್ದ ಗ್ರೀನ್ ತಲೆಗೆ ಬಡಿದಿತ್ತು. ತಕ್ಷಣವೇ ಗ್ರೀನ್ ಕುಸಿದು ಬಿದ್ದರಾದರೂ ಕೂಡಲೇ ಸಾವರಿಸಿಕೊಂಡರು.

ಅರೆಕ್ಷಣವೂ ಯೋಚಿಸದ ಸಿರಾಜ್

ಆದರೆ ಈ ಸಂದರ್ಭದಲ್ಲಿ ನಾನ್‌ಸ್ಟ್ರೈಕ್ ತುದಿಯಲ್ಲಿ ನಿಂತಿದ್ದ ಮೊಹಮ್ಮದ್ ಸಿರಾಜ್ ಆ ಕ್ಷಣದಲ್ಲಿ ಸ್ಪಂದಿಸಿದ ರೀತಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರೀನ್ ಮುಖಕ್ಕೆ ಚೆಂಡು ಬರಿಯಿತು ಎಂದು ಅರಿತ ತಕ್ಷಣವೇ ಸಿರಾಜ್ ಒಂದರೆಕ್ಷಣವೂ ಯೋಚಿಸದೆ ಬ್ಯಾಟ್ ಎಸೆದು ಗ್ರೀನ್ ಅತ್ತ ಓಡುತ್ತಾ ಧಾವಿಸಿದರು. ತಕ್ಷಣವೇ ಗ್ರೀನ್ ಅವರನ್ನು ಪರೀಕ್ಷಿಸಿದರು. ಅದಾದ ಬಳಿಕವೇ ಆಸ್ಟ್ರೇಲಿಯಾ ಆಟಗಾರರು ಗ್ರೀನ್ ಅವರತ್ತ ತೆರಳಿ ಫಿಸಿಯೋವನ್ನು ಅಂಗಳಕ್ಕೆ ಕರೆಸಿದರು.

ಮೆಚ್ಚುಗೆಗೆ ಪಾತ್ರವಾಯಿತು ಸಿರಾಜ್ ವರ್ತನೆ

ಸಿರಾಜ್ ಅವರು ಈ ವರ್ತನೆ ಕ್ರಿಕೆಟ್ ಪಂಡಿತರು ಹಾಗೂ ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಭಾರತದ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬೂಮ್ರಾ ಅಂತಿಮ ವಿಕೆಟ್‌ಗೆ 71 ರನ್‌ಗಳ ಜೊತೆಯಾಟವನ್ನು ನೀಡಿ ಮಿಂಚಿದರು. ಬೂಮ್ರಾ 55 ರನ್ ಬಾರಿಸಿ ಅಜೇಯವಾಗುಳಿದರೆ ಸಿರಾಜ್ 22 ರನ್‌ಗಳ ಕೊಡುಗೆ ನೀಡಿದರು.

ಟೂರ್ನಿಯ ಆರಂಭದಲ್ಲೇ ಸಿರಾಜ್‌ಗೆ ಆಘಾತ

ಟೂರ್ನಿಯ ಆರಂಭದಲ್ಲೇ ಸಿರಾಜ್‌ಗೆ ಆಘಾತ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ಜೊತೆಗೆ ಆಸ್ಟ್ರೇಲಿಯಾಗೆ ಹಾರಿದ್ದ ಮೊಹಮ್ಮದ್ ಸಿರಾಜ್ ಈ ಪ್ರವಾಸದ ಸಂದರ್ಭದಲ್ಲಿ ದೊಡ್ಡ ಆಘಾತಕ್ಕೆ ಒಳಗಾಗಿದ್ದರು. ತಮ್ಮ ತಂದೆಯನ್ನು ಸಿರಾಜ್ ಈ ಪ್ರವಾಸದ ಆರಂಬದಲ್ಲಿ ಕಳೆದುಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ಸಿರಾಜ್ ತವರಿಗೆ ಮರಳದೆ ತಂಡದ ಜೊತೆಗಿದ್ದು ತಂದೆಯ ಕನಸನ್ನು ಈಡೇರಿಸುವ ನಿರ್ಧಾರವನ್ನು ಮಾಡಿದ್ದರು. ಇದು ಕೂಡ ಕ್ರೀಡಾ ಪ್ರೇಮಿಗಳಲ್ಲಿ ಸಿರಾಜ್ ಬಗ್ಗೆ ಮತ್ತಷ್ಟು ಗೌರವ ಭಾವನೆ ಮೂಡುವಂತೆ ಮಾಡಿತ್ತು. ಇದೀಗ ಸಿರಾಜ್ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Story first published: Saturday, December 12, 2020, 10:18 [IST]
Other articles published on Dec 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X