ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆನ್‌ಫೀಲ್ಡ್ ಪ್ರದರ್ಶನ ಹೊರತು ಕ್ರೀಡೆ ಮತ್ತೇನೂ ಗುರುತಿಸಲಾರದು: ಸಚಿನ್

Sport does not recognise anything other than on-field performance, says Sachin Tendulkar

ಮುಂಬೈ: ಮೈದಾನದಲ್ಲಿ ಕ್ರೀಡಾಪಟುವೊಬ್ಬನ ಪ್ರದರ್ಶನವನ್ನು ಮಾತ್ರ ಕ್ರೀಡೆ ಗುರುತಿಸುತ್ತದೆಯೇ ಹೊರತು ಬೇರೇನನ್ನೂ ಗುರುತಿಸಲಾರದು ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಐಪಿಎಲ್ ಫ್ರಾಂಚೈಸಿ ಸೇರಿಕೊಂಡ ಚರ್ಚೆಗೆ ಸಂಬಂಧಿಸಿ ಸಚಿನ್ ಈ ಹೇಳಿಕೆ ನೀಡಿದ್ದಾರೆ.

ವಿಜಯ್ ಹಜಾರೆ ಟ್ರೋಫಿ: ಕೇರಳ ವೇಗಿ ಶ್ರೀಶಾಂತ್ ಅಪರೂಪದ ದಾಖಲೆವಿಜಯ್ ಹಜಾರೆ ಟ್ರೋಫಿ: ಕೇರಳ ವೇಗಿ ಶ್ರೀಶಾಂತ್ ಅಪರೂಪದ ದಾಖಲೆ

ಇತ್ತೀಚೆಗೆ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪಾಲಾಗಿದ್ದರು. ಎಂಐ ಅರ್ಜುನ್ ಅವರನ್ನು ಮೂಲಬೆಲೆ 20 ಲಕ್ಷ ರೂ.ಗೆ ಖರೀದಿಸಿತ್ತು. ಸಚಿನ್ ಕೀರ್ತಿಗಾಗಿ ಮುಂಬೈ ಫ್ರಾಂಚೈಸಿ ಅರ್ಜುನ್ ಅವರನ್ನು ಖರೀದಿಸಿದೆ ಹೊರತು ಪ್ರತಿಭೆಯ ಕಾರಣಕ್ಕೆ ಅಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿರುವ ಸಚಿನ್, 2013ರಲ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ಅದಕ್ಕೂ ಮುನ್ನ ಸಚಿನ್ ಮುಂಬೈ ಇಂಡಿಯನ್ಸ್ ಪರ ಆಡಿದ್ದಷ್ಟೇ ಅಲ್ಲ, ನಾಯಕತ್ವ ಕೂಡ ವಹಿಸಿದ್ದರು. ಇದೇ ಕಾರಣಕ್ಕೆ ಅರ್ಜುನ್ ಮುಂಬೈಗೆ ಸೇರಿಕೊಂಡಿದ್ದು ಚರ್ಚೆಗೀಡು ಮಾಡಿದೆ. ಆದರೆ ಸಚಿನ್ ಇದಕ್ಕೆ ತಿರುಗೇಟು ನೀಡಿದ್ದಾರೆ.

ಭಾರತ vs ಇಂಗ್ಲೆಂಡ್: ವಿಶ್ವದಾಖಲೆ ಸನಿಹದಲ್ಲಿದ್ದಾರೆ ವಿರಾಟ್ ಕೊಹ್ಲಿ!ಭಾರತ vs ಇಂಗ್ಲೆಂಡ್: ವಿಶ್ವದಾಖಲೆ ಸನಿಹದಲ್ಲಿದ್ದಾರೆ ವಿರಾಟ್ ಕೊಹ್ಲಿ!

'ನಾವು ಒಮ್ಮೆ ಡ್ರೆಸ್ಸಿಂಗ್ ರೂಮ್‌ಗೆ ಪ್ರವೇಶಿಸಿದರೆ ನೀವು ದೇಶದ ಯಾವ ಮೂಲೆಯಿಂದ ಬಂದಿದ್ದೀರಿ, ನಿಮ್ಮ ಜಾತಿ, ಆಸ್ತಿ ಯಾವುದೂ ಲೆಕ್ಕಕ್ಕಿಲ್ಲ. ಅಲ್ಲಿ ಎಲ್ಲಾ ಒಂದೇ. ಮೈದಾನದಲ್ಲಿ ಕ್ರೀಡಾಪಟುವಿನ ಪ್ರದರ್ಶನವನ್ನಷ್ಟೇ ಕ್ರೀಡೆ ಗುರುತಿಸುತ್ತದೆಯೇ ಹೊರತು ಬೇರೇನೂ ಅಲ್ಲ,' ಎಂದು ಸಚಿನ್ ಹೇಳಿದ್ದಾರೆ.

Story first published: Tuesday, February 23, 2021, 13:23 [IST]
Other articles published on Feb 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X