ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಳ್ಳಾಟದಲ್ಲಿ ಭಾಗಿ: ಕ್ರಿಕೆಟಿಗ ನಾಸಿರ್ ಜೆಮ್‌ಷೆಡ್‌ಗೆ 10 ವರ್ಷ ನಿಷೇಧ

spot fixing row: Nasir Jemshed banned for 10 years by pcb

ಕರಾಚಿ, ಆಗಸ್ಟ್ 18: ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆಪಾದನೆ ಹೊತ್ತಿದ್ದ ಆರಂಭಿಕ ಬ್ಯಾಟ್ಸ್‌ಮನ್ ನಾಸಿರ್ ಜೆಮ್‌ಷೆಡ್ ಮೇಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹತ್ತು ವರ್ಷಗಳ ನಿಷೇಧ ಹೇರಿದೆ.

2016-17ನೇ ಸಾಲಿನ ಪಿಸಿಎಲ್ ಟೂರ್ನಿಯ ವೇಳೆ ನಾಸಿರ್, ಸ್ಪಾಟ್ ಫಿಕ್ಸಿಂಗ್ ಅವ್ಯವಹಾರದಲ್ಲಿ ಭಾಗಿಯಾಗಿರುವುದು ದೃಢಪಟ್ಟಿರುವುದರಿಂದ ಪಿಸಿಬಿಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಈ ಶಿಕ್ಷೆ ವಿಧಿಸಿದೆ.

ಕೆಪಿಎಲ್: ಬಳ್ಳಾರಿ ಟಸ್ಕರ್ಸ್ ವಿರುದ್ಧ ಉತ್ತಪ್ಪ ಪಡೆಗೆ ರೋಚಕ ಗೆಲುವು ಕೆಪಿಎಲ್: ಬಳ್ಳಾರಿ ಟಸ್ಕರ್ಸ್ ವಿರುದ್ಧ ಉತ್ತಪ್ಪ ಪಡೆಗೆ ರೋಚಕ ಗೆಲುವು

ಭ್ರಷ್ಟಾಚಾರ ನಿಗ್ರಹ ಸಂಹಿತೆಯ ಏಳು ನಿಯಮಗಳಲ್ಲಿ ಐದನ್ನು ನಾಸಿರ್ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರನ್ನು ಕ್ರಿಕೆಟ್‌ನ ಯಾವುದೇ ಮಾದರಿಯ ಆಟದಲ್ಲಿ ಆಡುವುದನ್ನು ಸಂಪೂರ್ಣವಾಗಿ ನಿಷೇಧಿಸುವುದರ ಜತೆಗೆ ಜೀವನಪರ್ಯಂತ ಪಾಕಿಸ್ತಾನ ಕ್ರಿಕೆಟ್‌ನ ಯಾವುದೇ ಆಡಳಿತ ಸ್ಥಾನ ಪಡೆದುಕೊಳ್ಳುವುದರಿಂದಲೂ ಅನರ್ಹಗೊಳಿಸಲಾಗಿದೆ.

ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬುಕ್ಕಿಗಳ ಪರವಾಗಿ ಆಟಗಾರರನ್ನು ಸಂಪರ್ಕಿಸುವಲ್ಲಿ ನಾಸಿರ್ ಪ್ರಮುಖ ಪಾತ್ರ ವಹಿಸಿದ್ದರಿಂದ ಅವರೇ ಮುಖ್ಯ ಆರೋಪಿಯಾಗಿದ್ದರು ಎಂದು ಪಿಸಿಬಿ ಹೇಳಿದೆ.

ಟ್ರೆಂಟ್ ಬ್ರಿಡ್ಜ್‌ನಲ್ಲಿ ಮೂರನೇ ಟೆಸ್ಟ್: ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ ಟ್ರೆಂಟ್ ಬ್ರಿಡ್ಜ್‌ನಲ್ಲಿ ಮೂರನೇ ಟೆಸ್ಟ್: ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

ಹತ್ತು ವರ್ಷದ ನಿಷೇಧದ ಬಳಿಕ ಮತ್ತೆ ಮರಳಿದರೂ ಕ್ರಿಕೆಟ್‌ನ ಯಾವುದೇ ಆಡಳಿತಾತ್ಮಕ ಕಾರ್ಯದಲ್ಲಿ ಅವರು ಪಾಲ್ಗೊಳ್ಳುವಂತಿಲ್ಲ. ಅವರನ್ನು ಕ್ರಿಕೆಟ್‌ನಿಂದಲೇ ದೂರವಿಡಲಾಗುವುದು. ಭ್ರಷ್ಟಾಚಾರ ವಿರೋಧಿ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಇರುವ ಪಟ್ಟಿಯಲ್ಲಿ ನಾಸಿರ್ ಹೆಸರನ್ನು ಸಹ ಸೇರಿಸಲಾಗುವುದು. ಇವರಿಂದ ದೂರ ಇರುವಂತೆ ಆಟಗಾರರಿಗೆ ಸೂಚಿಸಲಾಗುವುದು ಎಂದು ಪಿಸಿಬಿ ತಿಳಿಸಿದೆ.

ಯುಎಇಗೆ ಏಷ್ಯಾ ಕಪ್ ಆತಿಥ್ಯ ಹಸ್ತಾಂತರಿಸಿದ ಬಿಸಿಸಿಐಯುಎಇಗೆ ಏಷ್ಯಾ ಕಪ್ ಆತಿಥ್ಯ ಹಸ್ತಾಂತರಿಸಿದ ಬಿಸಿಸಿಐ

ಪಿಎಸ್‌ಎಲ್‌ನ ಎರಡನೆಯ ಆವೃತ್ತಿಯಲ್ಲಿ ಮೋಸದಾಟದಲ್ಲಿ ಭಾಗಿಯಾದ ಆರೋಪದಲ್ಲಿ ಕಫೆದ ಫೆಬ್ರುವರಿಯಲ್ಲಿ ರಾಷ್ಟ್ರೀಯ ಅಪರಾಧ ಸಂಸ್ಥೆಯಿಮದ ಬಂಧನಕ್ಕೆ ಒಳಗಾಗಿದ್ದ ನಾಸಿರ್, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಇಂಗ್ಲೆಂಡ್‌ನಲ್ಲಿ ಇದ್ದಾರೆ.

Story first published: Saturday, August 18, 2018, 15:09 [IST]
Other articles published on Aug 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X