ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸನ್‌ರೈಸರ್ಸ್ ಮುನ್ನಡೆಸಲಿದ್ದಾರೆ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಕೋಚ್!

SRH appoint England’s World Cup winning coach Trevor Bayliss as head coach

ಹೈದರಾಬಾದ್, ಜುಲೈ 18: ಈ ಬಾರಿಯ ಐಸಿಸಿ ವಿಶ್ವಕಪ್‌ನಲ್ಲಿ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿದ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಟ್ರೇವರ್ ಬೇಲಿಸ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌(ಐಪಿಎಲ್‌)ನ ಮಾಜಿ ಚಾಂಪಿಯನ್ ತಂಡ ಸನ್ ರೈಸರ್ಸ್ ಹೈದರಾಬಾದ್‌ಗೆ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಆಯ್ಕೆಯಾಗುವ ವಿಶ್ವಾಸದಲ್ಲಿ ಮನೀಶ್‌ ಪಾಂಡೆವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಆಯ್ಕೆಯಾಗುವ ವಿಶ್ವಾಸದಲ್ಲಿ ಮನೀಶ್‌ ಪಾಂಡೆ

ಎಸ್‌ಆರ್‌ಎಚ್‌ಗೆ ಟ್ರೇವರ್ ಬೇಲಿಸ್ ಮುಖ್ಯಕೋಚ್ ಆಯ್ಕೆಯಾಗಿರುವ ವಿಚಾರವನ್ನು ಗುರುವಾರ (ಜುಲೈ 18) ಹೈದರಾಬಾದ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಖಾತರಿಪಡಿಸಿದೆ. ಇಲ್ಲಿಗೆ ಆಸ್ಟ್ರೇಲಿಯನ್ ಕೋಚ್ ಟಾಮ್ ಮೂಡಿಯೊಂದಿಗಿನ ಎಸ್‌ಆರ್‌ಎಚ್ ಒಪ್ಪಂದ ಅಂತ್ಯಗೊಂಡಂತಾಗಿದೆ.

ಟೀಮ್ ಇಂಡಿಯಾದ ಇಬ್ಬರು ಅದ್ಭುತ ಪ್ರತಿಭೆಗಳ ಹೆಸರಿಸಿದ ತೆಂಡೂಲ್ಕರ್ಟೀಮ್ ಇಂಡಿಯಾದ ಇಬ್ಬರು ಅದ್ಭುತ ಪ್ರತಿಭೆಗಳ ಹೆಸರಿಸಿದ ತೆಂಡೂಲ್ಕರ್

ಟಾಮ್ ಮೂಡಿ ತರಬೇತಿಯಡಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 2016ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಮೂಡಿ ಒಟ್ಟಾರೆ 7 ವರ್ಷಗಳ ದೀರ್ಘಕಾಲ ಹೈದರಾಬಾದ್ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಟ್ರೇವರ್, ಮತ್ತೆ ಕೆಕೆಆರ್‌ನಲ್ಲೇ ಮುಂದುವರೆಯಲಿದ್ದಾರೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿತ್ತಾದರೂ ಬೇಲಿಸ್ ಅವರನ್ನು ಎಸ್‌ಆರ್‌ಎಚ್ ತನ್ನ ತೆಕ್ಕೆತೆ ತೆಗೆದುಕೊಂಡಿದೆ.

'ಬಹಳ ಎಚ್ಚರಿಕೆಯಿಂದ ಪರಿಗಣಿಸಿದ ನಂತರ, ಸನ್‌ರೈಸರ್ಸ್ ಫ್ರಾಂಚೈಸಿ ಹೆಡ್ ಕೋಚಿಂಗ್ ನಿಟ್ಟಿನಲ್ಲಿ ಹೊಸ ದಿಕ್ಕಿನತ್ತ ಸಾಗಲು ನಿರ್ಧರಿಸಿದೆ. ಈ ಮೂಲಕ ಟಾಮ್ ಮೂಡಿ ಅವರ ಸೇವೆ ಕೊನೆಗೊಳ್ಳುತ್ತಿದೆ,' ಎಂದು ಎಸ್‌ಆರ್‌ಎಚ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

ವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾಗೆ ಪೃಥ್ವಿ ಅಲಭ್ಯ ಸಾಧ್ಯತೆವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾಗೆ ಪೃಥ್ವಿ ಅಲಭ್ಯ ಸಾಧ್ಯತೆ

'ಟ್ರೇವರ್ ಈಗಾಗಲೇ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಜೊತೆಗಿದ್ದು 2 ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಜೊತೆಗೆ ಸಿಡ್ನಿ ಸಿಕ್ಸರ್ಸ್ ನೊಂದಿಗೆ ಬಿಗ್ ಬ್ಯಾಷ್ ಲೀಗ್ ಮತ್ತು ಚಾಂಪಿಯನ್ಸ್ ಟ್ರೋಫಿ ಕೂಡ ಜಯಿಸಿದ್ದಾರೆ. ಯಶಸ್ಸಿನ ದಾಖಲೆಗಳ ಮೂಲಕ ಅವರು ವಿಜೇತರಾಗಿ ಗುರುತಿಸಿಕೊಂಡಿದ್ದಾರೆ. ಇನ್ಮುಂದೆ ಟ್ರೇವರ್ ಅವರು ಸನ್ ರೈಸರ್ಸ್ ಹೈದರಾಬಾದ್ ಮುನ್ನಡೆಸಲಿದ್ದಾರೆ,' ಎಂದು ಎಸ್‌ಆರ್‌ಎಚ್ ಮಾಹಿತಿ ನೀಡಿದೆ.

Story first published: Friday, July 19, 2019, 10:40 [IST]
Other articles published on Jul 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X