ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅದು ಕ್ರಿಕೆಟ್‌ನ ನಿರ್ಧಾರ ಅಲ್ಲವೇ ಅಲ್ಲ: ಎಸ್‌ಆರ್‌ಹೆಚ್ ತಂಡದಿಂದ ವಾರ್ನರ್ ಹೊರಗಿಟ್ಟ ಬಗ್ಗೆ ಕೋಚ್ ಪ್ರತಿಕ್ರಿಯೆ

SRH assistant coach Brad Haddin said Dropping David Warner in IPL 2021 was bad decision

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಡೇವಿಡ್ ವಾರ್ನರ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಟೂರ್ನಿಯಲ್ಲಿ ಮಿಂಚುಹರಿಸಿದ್ದಾರೆ. ವಾರ್ನರ್ ಅವರ ಅದ್ಭುತ ಆಟದಿಂದಾಗಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಅಲ್ಲದೆ ಈ ವಿಶ್ವಕಪ್‌ನ ಸರಣಿ ಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದಾರೆ ಡೇವಿಡ್ ವಾರ್ನರ್. ಈ ಮೂಲಕ ತನ್ನ ಫಾರ್ಮ್ ಬಗ್ಗೆ ಮಾತನಾಡಿದ್ದವರಿಗೆ ಆಸಿಸ್ ದಾಂಡಿಗ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ.

ಡೇವಿಡ್ ವಾರ್ನರ್ ಅವರ ಸಾಮರ್ಥ್ಯ ಎಂತಾದ್ದು ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿದ್ದರೂ ಈ ಬಾರಿಯ ಟಿ20 ವುಶ್ವಕಪ್‌ನಲ್ಲಿ ವಾರ್ನರ್ ಮೇಲೆ ಹೆಚ್ಚಿನ ನಿರೀಕ್ಷೆಗಳು ಇರಲಿಲ್ಲ. ಅದಕ್ಕೆ ಕಾರಣ ಅವರ ಫಾರ್ಮ್. ಟಿ20 ವುಶ್ವಕಪ್‌ಗೂ ಹಿಂದೆ ನಡೆದಿದ್ದ ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ನಾಯಕತ್ವದಿಂದ ಕೆಳಗಿಳಿದು ಬಳಿಕ ಅಂತಿಮ 15ರ ತಂಡದಿಂದಲೂ ವಾರ್ನರ್ ಹೊರಗುಳಿದಿದ್ದರು. ಆದರೆ ಈ ಸಂದರ್ಭದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಡೇವಿಡ್ ವಾರ್ನರ್‌ಅನ್ನು ನಡಸಿಕೊಂಡ ರೀತಿಗೆ ಅಭಿಮಾನಿಗಳು ತೀವ್ರ ಟೀಕೆಯನ್ನು ವ್ಯಕ್ತಪಡಿಸಿದ್ದರು.

ಡ್ರೆಸ್ಸಿಂಗ್ ರೂಂನಲ್ಲಿ ಆಸ್ಟ್ರೇಲಿಯಾದ ಸಂಭ್ರಮಾಚರಣೆ ಅಸಹ್ಯ ಹುಟ್ಟಿಸುವಂತಿತ್ತು: ಶೋಯೆಬ್ ಅಕ್ತರ್ಡ್ರೆಸ್ಸಿಂಗ್ ರೂಂನಲ್ಲಿ ಆಸ್ಟ್ರೇಲಿಯಾದ ಸಂಭ್ರಮಾಚರಣೆ ಅಸಹ್ಯ ಹುಟ್ಟಿಸುವಂತಿತ್ತು: ಶೋಯೆಬ್ ಅಕ್ತರ್

ಆದರೆ ಇದೀಗ ವಾರ್ನರ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಈ ಸಂದರ್ಭದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹಾಯಕ ಕೋಚ್ ಬ್ರಾಡ್ ಹ್ಯಾಡಿನ್ ವಾರ್ನರ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅದೊಂದು ಉತ್ತಮವಾದ ನಿರ್ಧಾರವಲ್ಲ

ಅದೊಂದು ಉತ್ತಮವಾದ ನಿರ್ಧಾರವಲ್ಲ

ಸನ್‌ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಅವರು ಫಾರ್ಮ್‌ನಲ್ಲಿ ಇಲ್ಲ ಎಂಬ ಕಾರಣದಿಂದಾಗಿ ಆಡುವ ಬಳಗದಿಂದ ಹೊರಗಿಟ್ಟ ನಿರ್ಧಾರ ಉತ್ತಮವಾದ ನಿರ್ಧಾರವಲ್ಲ ಎಂದಿದ್ದಾರೆ ಬ್ರಾಡ್ ಹ್ಯಾಡಿನ್. ಡೇವಿಡ್ ವಾರ್ನರ್ ಭಾರತದಲ್ಲಿ ನಡೆದ ಐಪಿಎಲ್‌ನ ಮೊದಲ ಚರಣದ ಪಂದ್ಯಗಳ ಸಂದರ್ಭದಲ್ಲಿ ಮೊದಲಿಗೆ ನಾಯಕತ್ವವನ್ನು ಕಸಿದುಕೊಳ್ಳಲಾಗಿತ್ತು. ಎರಡನೇ ಚರಣದಲ್ಲಿ ಆಡುವ ಬಳಗದಿಂದಲೂ ವಾರ್ನರ್ ಹೊರಬಿದ್ದಿದ್ದರು.

ಅವರು ಫಾರ್ಮ್‌ ಕಳೆದುಕೊಂಡಿರಲಿಲ್ಲ

ಅವರು ಫಾರ್ಮ್‌ ಕಳೆದುಕೊಂಡಿರಲಿಲ್ಲ

ಇನ್ನು ಈ ಸಂದರ್ಭದಲ್ಲಿ ಬ್ರಾಡ್ ಹ್ಯಾಡಿನ್ ಡೇವಿಡ್ ಬಾರ್ನರ್ ಬಗ್ಗೆ ಮಾತನಾಡುತ್ತಾ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡುವ ಸಮಯದಲ್ಲಿ ಡೇಚಿಡ್ ವಾರ್ನರ್‌ಗೆ ಫಾರ್ಮ್‌ ಕೊರತೆಯಿರಲಿಲ್ಲ ಎಂದಿದ್ದಾರೆ. ಆದರೆ ಅವರಿಗೆ ಅಭ್ಯಾಸದ ಕೊರತೆಯನ್ನು ಅನುಭವಿಸುತ್ತಿದ್ದರು ಎಂದಿದ್ದಾರೆ. ಅಲ್ಲದೆ ಅವರನ್ನು ಆಡುವ ಬಳಗದಿಂದ ಹೊರಗಿಟ್ಟ ನಿರ್ಧಾರ ಸರಿಯಾದ ನಿರ್ಧಾರವಲ್ಲ ಎಂದು ಕೂಡ ಬ್ರಾಡ್ ಹ್ಯಾಡಿನ್ ವಿವರಿಸಿದ್ದಾರೆ.

ಅದು ಕ್ರಿಕೆಟ್‌ನ ನಿರ್ಧಾರವಲ್ಲ

ಅದು ಕ್ರಿಕೆಟ್‌ನ ನಿರ್ಧಾರವಲ್ಲ

ಮುಂದುವರಿದು ಮಾತನಾಡಿರುವ ಅವರು "ನಾನು ಒಂದು ಸಂಗತಿಯನ್ನು ಹೇಳಲು ಬಯಸುತ್ತೇನೆ. ಸನ್‌ರೈಸರ್ಸ್ ಹೈದರಾಬಾದ್ ತಮಡದ ಆಡುವ ಬಳಗದಿಂದ ಹೊರಗುಳಿದ ಆ ನಿರ್ಧಾರ ಕ್ರಿಕೆಟ್‌ನ ನಿರ್ಧಾರವಲ್ಲ. ನಿಮಗೆ ಒಂದು ವಿಚಾರ ಅರ್ಥವಾಗಿರಬಹುದು ಡೇವಿಡ್ ವಾರ್ನರ್ ಫಾರ್ಮ್‌ ಕಳೆದುಕೊಂಡಿರಲಿಲ್ಲ. ಅವರು ಮ್ಯಾಚ್ ಅಭ್ಯಾಸದ ಕೊರತೆ ಅನುಭವಿಸುತ್ತಿದ್ದರು. ಅವರು ಸುದೀರ್ಘ ವಾದ ವಿಶ್ರಾಂತಿ ಪಡೆದಿದ್ದರು. ಆತ ಬಾಂಗ್ಲಾದೇಶ ಅಥವಾ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿರಲಿಲ್ಲ. ಆತ ಉತ್ತಮವಾಗಿ ಆಡುವಂತೆ ಕಾಣಿಸಿದ್ದರು. ಚೆಂಡನ್ನು ಕೂಡ ಉತ್ತಮವಾಗಿ ಬಾರಿಸುತ್ತಿದ್ದರು. ಆದರೆ ಸಮದರ್ಭಗಳು ಯಾರ ನಿತಂತ್ರಣದಲ್ಲಿಯೂ ಇರಲಿಲ್ಲ" ಎಂದು ಖಾಸಗಿ ಸಂವಾದದಲ್ಲಿ ಭಾಗಿಯಾಗಿದ್ದ ಬ್ರಾಡ್ ಹ್ಯಾಡಿನ್ ಹೇಳಿಕೊಂಡಿದ್ದಾರೆ.

ಅವರಿಗೆ ಕೆಲ ಸಮಯ ನೀಡಬೇಕಿತ್ತು

ಅವರಿಗೆ ಕೆಲ ಸಮಯ ನೀಡಬೇಕಿತ್ತು

ಇನ್ನು ಈ ಸಂದರ್ಭದಲ್ಲಿ ಡೇವಿಡ್ ವಾರ್ನರ್ ತಮ್ಮ ಬ್ಯಾಟಿಂಗ್ ಲಯವನ್ನು ಕಂಡುಕೊಳ್ಳಲು ಕೆಲ ಪಂದ್ಯದ ಸಮಯವನ್ನು ನೀಡಬೇಕಿತ್ತು ಎಂದಿದ್ದಾರೆ. "ಆತ ಫಾರ್ಮ್ ಕಳೆದುಕೊಂಡಿರಲಿಲ್ಲ. ಹೀಗಾಗಿ ಆತನಿಗೆ ಅಗತ್ಯವಿದ್ದದ್ದು ಪಂದ್ಯದ ಸಮಯ. ಆಟದ ಲಯವನ್ನು ಮರಳಿ ಗಳಿಸಲು ಅಂಗಳದಲಲ್ಇ ಕೆಲ ಸಮಯವನ್ನು ಅವರು ಕಳೆಯಬೇಕಿತ್ತು. ಈ ಟೂರ್ನಮೆಂಟ್ ಆರಂಭವಾಗುತ್ತುದ್ದಂತೆಯೇ ಆತನ ಪ್ರದರ್ಶನವನ್ನು ನೀಡು ಕಂಡಿದ್ದೀರಿ. ಆತ ತನ್ನ ಬ್ಯಾಟಿಂಗ್‌ನಲ್ಲಿ ಸ್ವಲ್ಪ ಲಯ ಪಡೆದುಕೊಂಡರೂ ಆತನ ಬ್ಯಾಟಿಂಗ್ ನೋಡಲು ಅದ್ಭುತವಾಗಿರುತ್ತದೆ" ಎಂದಿದ್ದಾರೆ ಬ್ರಾಡ್ ಹ್ಯಾಡಿನ್.

Story first published: Tuesday, November 16, 2021, 15:59 [IST]
Other articles published on Nov 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X