IPL 2022: SRH ಬಯೋ-ಬಬಲ್ ತೊರೆದು ತವರಿಗೆ ತೆರಳಿದ ನಾಯಕ ಕೇನ್ ವಿಲಿಯಮ್ಸನ್

ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ನಾಯಕ ಕೇನ್ ವಿಲಿಯಮ್ಸನ್ ತಮ್ಮ ಎರಡನೇ ಮಗುವಿನ ಜನನಕ್ಕಾಗಿ ನ್ಯೂಜಿಲೆಂಡ್‌ಗೆ ಮರಳಲು ತಮ್ಮ ತಂಡದ ಬಯೋ ಬಬಲ್ ಅನ್ನು ತೊರೆದಿದ್ದಾರೆ ಎಂದು ಫ್ರಾಂಚೈಸ್ ಬುಧವಾರ ತಿಳಿಸಿದೆ.

"ನಮ್ಮ ನಾಯಕ ಕೇನ್ ವಿಲಿಯಮ್ಸನ್ ಅವರು ತಮ್ಮ ಕುಟುಂಬವನ್ನು ಶೀಘ್ರದಲ್ಲೇ ಸೇರಿಕೊಳ್ಳಲು ನ್ಯೂಜಿಲೆಂಡ್‌ಗೆ ಹಿಂತಿರುಗುತ್ತಿದ್ದಾರೆ. ಇಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಶಿಬಿರದಲ್ಲಿರುವ ಎಲ್ಲರೂ ಕೇನ್ ವಿಲಿಯಮ್ಸನ್ ಮತ್ತು ಅವರ ಪತ್ನಿಗೆ ಸುರಕ್ಷಿತ ಹೆರಿಗೆಯಾಗಲಿ ಮತ್ತು ತುಂಬಾ ಸಂತೋಷವನ್ನು ಬಯಸುತ್ತಾರೆ ಎಂದು," ಎಸ್ಆರ್‌ಎಚ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.

ಐಪಿಎಲ್ 2022ರ ಪ್ಲೇಆಫ್‌ಗೆ ಪ್ರವೇಶಿಸುವ ತಮ್ಮ ಭರವಸೆಯನ್ನು ಜೀವಂತವಾಗಿರಿಸಲು ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಅನ್ನು 3 ರನ್‌ಗಳ ಅಂತರದಿಂದ ಕೇನ್ ವಿಲಿಯಮ್ಸನ್ ನೇತೃತ್ವದ ತಂಡ ಗೆದ್ದ ಒಂದು ದಿನದ ನಂತರ ಈ ಪ್ರಕಟಣೆ ಬಂದಿದ್ದು, ಕೇನ್ ವಿಲಿಯಮ್ಸನ್ ಅವರ ಪತ್ನಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸ್ ಉಳಿಸಿಕೊಂಡ ನಂತರ ನ್ಯೂಜಿಲೆಂಡ್ ನಾಯಕ ಈ ಋತುವಿನಲ್ಲಿ ಎಸ್ಆರ್‌ಎಚ್‌ಗಾಗಿ 13 ಪಂದ್ಯಗಳನ್ನು ಆಡಿದ್ದಾರೆ, ಆದರೆ ಬ್ಯಾಟ್‌ನೊಂದಿಗೆ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. 93.51 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 216 ರನ್ ಗಳಿಸಿದ್ದಾರೆ.

ಗುಜರಾತ್ ವಿರುದ್ಧ RCB ಈ ಮಾಸ್ಟರ್ ಪ್ಲ್ಯಾನ್ ಮಾಡಿದ್ರೇನೇ ಪ್ಲೇ ಆಫ್ ಎಂಟ್ರಿ ಸುಲಭ | Oneindia Kannada

ಸನ್‌ರೈಸರ್ಸ್ ಹೈದರಾಬಾದ್ ಪ್ರಸ್ತುತ ಐಪಿಎಲ್ 2022 ಅಂಕಗಳ ಪಟ್ಟಿಯಲ್ಲಿ 13 ಪಂದ್ಯಗಳಿಂದ 12 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಮೇ 22ರ ಭಾನುವಾರದಂದು ಅವರು ತಮ್ಮ ಅಂತಿಮ ಲೀಗ್ ಹಂತದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, May 18, 2022, 12:09 [IST]
Other articles published on May 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X