ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ದಾಖಲೆ ಸರಿದೂಗಿಸಿದ ಲಂಕಾ ನಾಯಕ ದಸುನ್ ಶನಕಾ

Sri Lanka captain Dasun Shanaka equals MS Dhoni’s record against Pakistan

ಲಾಹೋರ್, ಅಕ್ಟೋಬರ್ 10: ಶ್ರೀಲಂಕಾದ ಟಿ20ಐ ನಾಯಕ ದಸುನ್ ಶನಕಾ, ಎಂಎಸ್ ಧೋನಿ ಮತ್ತು ಮೈಕಲ್ ಕ್ಲಾರ್ಕ್ ಹೆಸರಿನ ದಾಖಲೆಯೊಂದನ್ನು ಸರಿದೂಗಿಸಿಕೊಂಡಿದ್ದಾರೆ. ಲಾಹೋರ್‌ನಲ್ಲಿ ಮುಕ್ತಾಯಗೊಂಡ ಶ್ರೀಲಂಕಾ-ಪಾಕಿಸ್ತಾನ ನಡುವಿನ 3ನೇ ಟಿ20 ಪಂದ್ಯದ ಜಯದೊಂದಿಗೆ ಶನಕಾ ಈ ಅಪರೂಪದ ದಾಖಲೆಗೆ ಕಾರಣರಾಗಿದ್ದಾರೆ.

80 ವರ್ಷಗಳ ಹಿಂದಿನ ಅನಗತ್ಯ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್!80 ವರ್ಷಗಳ ಹಿಂದಿನ ಅನಗತ್ಯ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್!

ನಾಯಕರಾಗಿದ್ದು ಆಡಿದ ಮೊದಲ ಮೂರೂ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಜಯ ಗಳಿಸಿದ್ದಕ್ಕಾಗಿ ಶನಕಾ ಅವರು ಎಂಎಸ್ ಧೋನಿ ಮತ್ತು ಮೈಕಲ್ ಕ್ಲಾರ್ಕ್ ದಾಖಲೆ ಸಾಲಿನಲ್ಲಿ ಸೇರಿಸಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧ ಆಡಿದ ಮೊದಲ 3 ಟಿ20 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ 3ನೇ ನಾಯಕನಾಗಿ ದಸುನ್ ಶನಕಾ ಗುರುತಿಸಿಕೊಂಡಿದ್ದಾರೆ.

ಅಜರುದ್ದೀನ್ ಮಗನ ಜತೆ ಸಾನಿಯಾ ಮಿರ್ಜಾ ತಂಗಿ ಮದುವೆಅಜರುದ್ದೀನ್ ಮಗನ ಜತೆ ಸಾನಿಯಾ ಮಿರ್ಜಾ ತಂಗಿ ಮದುವೆ

ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನು 2-0ಯಿಂದ ಸೋತಿತ್ತು. ಆದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ನಂ.1 ಸ್ಥಾನದಲ್ಲಿರುವ ಪಾಕಿಸ್ತಾನವನ್ನು ಟಿ20 ಸರಣಿಯ ಮೂರೂ ಪಂದ್ಯಗಳಲ್ಲಿ ಸೋಲಿಸಿ ಲಂಕಾ ಪಾರಮ್ಯ ಮೆರೆದಿದೆ.

ಪಾಂಡ್ಯ 'ಬ್ಯಾಟಿಂಗ್' ಟ್ವೀಟ್ ಗೆ ಸರಿಯಾದ 'ಯಾರ್ಕರ್' ಹಾಕಿದ ಜಹೀರ್ಪಾಂಡ್ಯ 'ಬ್ಯಾಟಿಂಗ್' ಟ್ವೀಟ್ ಗೆ ಸರಿಯಾದ 'ಯಾರ್ಕರ್' ಹಾಕಿದ ಜಹೀರ್

ಲಸಿತ್ ಮಾಲಿಂಕಾ ಪಾಕ್‌ಗೆ ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದರಿಂದ ಟಿ20ಐ ತಂಡಕ್ಕೆ ನಾಯಕನಾಗಿ ಶನಕಾ ಆಯ್ಕೆಯಾಗಿದ್ದರು. ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ನಿರಾಕರಿಸಿದ 10 ಶ್ರೀಲಂಕಾ ಆಟಗಾರರಲ್ಲಿ ಏಕದಿನ ತಂಡದ ದಿಮುತ್ ಕರುಣರತ್ನೆ ಕೂಡ ಸೇರಿದ್ದಾರೆ.

Story first published: Thursday, October 10, 2019, 15:31 [IST]
Other articles published on Oct 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X