ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಪಿಚ್‌ ಸರಿಯಿಲ್ಲ ಎಂದು ಐಸಿಸಿಗೆ ದೂರು ನೀಡಿದ ಲಂಕಾ!

ICC Worldcup 2019: ಐಸಿಸಿ ಮಾಡಿದ ತಪ್ಪೇನು ಗೊತ್ತಾ? | Oneindia Kannada
Sri Lanka complain to ICC about unfair pitches

ಲಂಡನ್‌, ಜೂನ್‌ 14: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ತಂಡಕ್ಕೆ ಈವರೆಗೆ ಲಭ್ಯವಾದ ಪಿಚ್‌ಗಳು ಒಂದೂ ಸರಿಯಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್‌ ತಂಡದ ಮ್ಯಾನೇಜರ್‌ ಅಶಾಂತ ಡಿ'ಮೆಲ್‌ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ ಅಭ್ಯಾಸಕ್ಕೆ ಬೇಕಾದ ಅನುಕೂಲ ಮತ್ತು ಉಳಿದುಕೊಳ್ಳುವ ವ್ಯವಸ್ಥೆ ಎಲ್ಲವೂ ಕಳಪೆಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

"ನಮ್ಮ ತಂಡ ಈವರೆಗೆ ಆಡಿರುವ ನಾಲ್ಕು ಪಂದ್ಯಗಳು ಕಾರ್ಡಿಫ್‌ ಮತ್ತು ಬ್ರಿಸ್ಟೋಲ್‌ನಲ್ಲಿ ನಡೆದಿದೆ. ಇಲ್ಲಿ ಐಸಿಸಿ ಗ್ರೀನ್‌ ಪಿಚ್‌ಗಳನ್ನು ನಿರ್ಮಿಸಿದೆ. ಆದರೆ, ಇದೇ ಕ್ರೀಡಾಂಗಣದಲ್ಲಿ ಬೇರೆ ತಂಡಗಳು ಆಡಿದ ಸಂದರ್ಭದಲ್ಲಿ ಹಸಿರಿನ ಸುಳಿವೇ ಇರಲಿಲ್ಲ. ಬದಲಾಗಿ ದೊಡ್ಡ ಮೊತ್ತ ದಾಖಲಿಸಲು ಅಗತ್ಯವಿದ್ದ ಪಿಚ್‌ನಂತಿತ್ತು,'' ಎಂದು ಡಿ'ಮಲ್‌ ಆರೋಪಿಸಿದ್ದಾರೆ.

ವಿಶ್ವಕಪ್‌: ಇಂಗ್ಲೆಂಡ್‌ ವಿರುದ್ಧ ಅಪರೂಪದ ದಾಖಲೆ ಬರೆದ ಕ್ರಿಸ್‌ ಗೇಲ್‌!ವಿಶ್ವಕಪ್‌: ಇಂಗ್ಲೆಂಡ್‌ ವಿರುದ್ಧ ಅಪರೂಪದ ದಾಖಲೆ ಬರೆದ ಕ್ರಿಸ್‌ ಗೇಲ್‌!

"ಆಸ್ಟ್ರೇಲಿಯಾ ವಿರುದ್ಧ ಶನಿವಾರ ನಡೆಯಲಿರುವ ಪಂದ್ಯಕ್ಕೂ ನಮಗೆ ಗ್ರೀನ್‌ ಪಿಚ್‌ ನೀಡಲಾಗಿದೆ. ನಾವೇನು ಹುಳಿ ದ್ರಾಕ್ಷಿ ಕುರಿತಾಗಿ ದೂರು ನೀಡುತ್ತಿಲ್ಲ. ಇದು ನಿಜಕ್ಕೂ ನ್ಯಾಯಸಮ್ಮತವಲ್ಲ. ಒಂದೊಂದು ತಂಡಗಳಿಗೂ ಒಂದೊಂದು ರೀತಿಯ ಪಿಚ್‌ಗಳನ್ನು ಐಸಿಸಿ ನಿರ್ಮಿಸುತ್ತಿದೆ,'' ಎಂದಿದ್ದಾರೆ.

ಶ್ರೀಲಂಕಾ ತಂಡ ಬ್ರಿಸ್ಟೋಲ್‌ನಲ್ಲಿ ಆಡಬೇಕಿದ್ದ ಈ ಹಿಂದಿನ ಎರಡೂ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದೆ. ಲಂಕಾ ತಂಡ ನ್ಯೂಜಿಲೆಂಡ್‌ ಎದುರು ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಿ ಮೊದಲ ಪಂದ್ಯದಲ್ಲೇ ಹೀನಾಯ ಸೋಲುಂಡಿತ್ತು. ಆದರೆ, ಅಫಘಾನಿಸ್ತಾನ ವಿರುದ್ಧ ಗೆದ್ದು ಜಯದ ಹಾದಿ ಕಂಡುಕೊಂಡಿದೆ.

ಕ್ರಿಕೆಟ್‌ನಲ್ಲಿ ಬಳಸಲಾಗುವ ಬೇಲ್ಸ್‌ ಬಗ್ಗೆ ನಿಮಗೆಷ್ಟು ತಿಳಿದಿದೆ?ಕ್ರಿಕೆಟ್‌ನಲ್ಲಿ ಬಳಸಲಾಗುವ ಬೇಲ್ಸ್‌ ಬಗ್ಗೆ ನಿಮಗೆಷ್ಟು ತಿಳಿದಿದೆ?

"ಕಾರ್ಡಿಫ್‌ನಲ್ಲಿ ನಮ್ಮ ತಂಡಕ್ಕೆ ನೀಡಲಾದ ಅಭ್ಯಾಸದ ವ್ಯವಸ್ಥೆ ಕೂಡ ತೀರಾ ಕಳಪೆಯಾಗಿತ್ತು. ಬ್ರಿಸ್ಟೋಲ್‌ನಲ್ಲಿ ನಮ್ಮ ತಂಡಕ್ಕೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದ ಹೋಟೆಲ್‌ನಲ್ಲಿ ಸ್ವಿಮಿಂಗ್‌ ಪೂಲ್‌ ಕೂಡ ಇರಲಿಲ್ಲ. ಇದು ಪ್ರತಿಯೊಂದು ತಂಡಕ್ಕೂ ಅತ್ಯಗತ್ಯದ ಸಂಗತಿ. ಅಭ್ಯಾಸ ಬಳಿಕ ವೇಗದ ಬೌಲರ್‌ಗಳಿಗೆ ತಮ್ಮ ಸ್ನಾಯುಗಳಿಗೆ ವಿಶ್ರಾಂತಿ ನೀಡಲು ಸ್ವಿಮಿಂಗ್‌ ಪೂಲ್‌ ಅತ್ಯಗತ್ಯ,'' ಎಂದು ಐಸಿಸಿ ವ್ಯವಸ್ಥೆಗಳ ಕುರಿತಾಗಿ ಡಿ'ಮೆಲ್‌ ಕಿಡಿ ಕಾರಿದ್ದಾರೆ.

"ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳಿಗೆ ನೀಡಲಾಗಿದ್ದ ಹೋಟೆಲ್‌ನಲ್ಲಿ ಈಜುಕೊಳವಿತ್ತು. ಈ ಎಲ್ಲಾ ದೂರುಗಳನ್ನು ಐಸಿಸಿಗೆ ಮುಟ್ಟಿಸಿದ್ದೇವೆ. ಏಕೆಂದರೆ ಟೂರ್ನಿಯಲ್ಲಿ ಇನ್ನು ಸಾಕಷ್ಟು ದಿನಗಳ ಕಾಲ ನಡೆಯಲಿದ್ದು, ಅಗತ್ಯದ ವ್ಯವಸ್ಥೆ ಬೇಕಿದೆ. ಐಸಿಸಿ ಉತ್ತರ ನೀಡುವ ವರೆಗೂ ದೂರು ರವಾನಿಸಲಿದ್ದೇವೆ,'' ಎಂದು ಹತಾಶೆ ವ್ಯಕ್ತ ಪಡಿಸಿದ್ದಾರೆ.

Story first published: Friday, June 14, 2019, 23:50 [IST]
Other articles published on Jun 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X