ರಾಷ್ಟ್ರೀಯ ಒಪ್ಪಂದದ ಆಟಗಾರರ ಪಟ್ಟಿ ಪ್ರಕಟಿಸಿದ ಶ್ರೀಲಂಕಾ ಕ್ರಿಕೆಟ್

ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಶುಕ್ರವಾರ (ಆಗಸ್ಟ್ 20) ರಾಷ್ಟ್ರೀಯ ಒಪ್ಪಂದದಲ್ಲಿರುವ ಆಟಗಾರರ ಪಟ್ಟಿ ಪ್ರಕಟಿಸಿದೆ. ಈ ನೂತನ ಒಪ್ಪಂದ ಆಗಸ್ಟ್ 1ರಿಂದ ಚಾಲ್ತಿಗೊಳ್ಳಲಿದೆ. ಈಗಿರುವ ಈ ಒಪ್ಪಂದ ಮುಂದಿನ ಐದು ತಿಂಗಳ ಕಾಲ ಇರಲಿದೆ. ಡಿಸೆಂಬರ್‌ 31ಕ್ಕೆ ಹೊಸ ಒಪ್ಪಂದ ಕೊನೆಗೊಳ್ಳಲಿದೆ.

IPL 2021 2ನೇ ಹಂತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿIPL 2021 2ನೇ ಹಂತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ

"ತಾಂತ್ರಿಕ ಸಲಹಾ ಸಮಿತಿ ಮತ್ತು ಶ್ರೀಲಂಕಾ ಕ್ರಿಕೆಟ್‌ ರೂಪಿಸಿರುವ ನೂತನ ಒಪ್ಪಂದ ಸಹಿ ಹಾಕಿದ ಆಟಗಾರರಿಗೆ ಅನ್ವಯವಾಗಲಿದೆ. ಹಿಂದಿನ ಒಪ್ಪಂದಗಳಿಗಿಂತ ಈ ಒಪ್ಪಂದ ಬದಲಾಗಿರಲಿದೆ," ಎಂದು ಶ್ರೀಲಂಕಾ ಕ್ರಿಕೆಟ್ ಪ್ರಕಟಣೆಯ ಮೂಲಕ ತಿಳಿಸಿದೆ.

ನೂತನ ಒಪ್ಪಂದ ಪ್ರಕಾರ ಫಿಟ್ನೆಸ್, ಲೀಡರ್‌ಶಿಪ್‌/ಅನುಭವ, ವೃತ್ತಿಪರತೆ/ನಡತೆ, ಭವಿಷ್ಯ/ಹೊಂದಾಣಿಕೆ ಈ ನಾಲ್ಕು ಮಾನದಂಡಗಳ ಆಧಾರದಲ್ಲಿ ಆಟಗಾರರನ್ನು ವಿಂಗಡಿಸಲಾಗುತ್ತದೆ. ಈ ಮಾನದಂಡದ ಆಧಾರದಲ್ಲಿ ಆಯ್ಕೆ ನಡೆಯುತ್ತದೆ. ಒಪ್ಪಂದದ ಆಫರ್ ನೀಡಿದ್ದವರಲ್ಲಿ ಏಂಜಲೋ ಮ್ಯಾಥ್ಯೂಸ್ ಒಪ್ಪಂದಕ್ಕೆ ನಿರಾಕರಿಸಿದ್ದಾರೆ. ಇನ್ನು ದನುಷ್ಕ ಗುಣತಿಲಕ, ನಿರೋಶ ಡಿಕ್ವೆಲ್ಲ, ಕುಸಾಲ್ ಮೆಂಡಿಸ್ ಸದ್ಯ ನಿಷೇಧದಲ್ಲಿದ್ದಾರೆ.

ತಶಾ ಸಾತ್ವಿಕ್ ಜೊತೆ ಜಂಟಿ ಜೀವನಕ್ಕೆ ಕಾಲಿರಿಸಿದ ಸಂದೀಪ್ ಶರ್ಮಾತಶಾ ಸಾತ್ವಿಕ್ ಜೊತೆ ಜಂಟಿ ಜೀವನಕ್ಕೆ ಕಾಲಿರಿಸಿದ ಸಂದೀಪ್ ಶರ್ಮಾ

ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಗೆ ಎಂಟ್ರಿಕೊಟ್ಟ ತಾಲಿಬಾನ್ ಉಗ್ರರು | Oneindia Kannada

ಶ್ರೀಲಂಕಾ ರಾಷ್ಟ್ರೀಯ ಒಪ್ಪಂದದ ಆಟಗಾರರ ಪಟ್ಟಿ
ಧನಂಜಯ ಡಿ ಸಿಲ್ವನ್, ಕುಸಾಲ್ ಪೆರೇರಾ, ದಿಮುತ್ ಕರುಣರತ್ನೆ, ಸುರಂಗ ಲಕ್ಮಲ್, ದಾಸುನ್ ಶನಕ, ವಾನಿಂದು ಹಸರಂಗ, ಲಸಿತ್ ಎಂಬುಲ್ದೇನಿಯ, ಪಾತುಮ್ ನಿಸ್ಸಂಕ, ಲಹಿರು ತಿರಿಮನ್ನೆ, ದುಷ್ಮಂತ ಚಮೀರಾ, ದಿನೇಶ್ ಚಾಂಡಿಮಾಲ್, ಲಕ್ಷನ್ ಸಂದಕನ್, ವಿಶ್ವ ಫೆರ್ನಾಂಡೊ, ಓಷಾಡಾ ಫೆರ್ನಾಂಡೊ, ರಮೇಶ್ ಮೆಂಡಿಸ್, ಕುಮಾರ, ಅಶೆನ್ ಬಂಡಾರ ಮತ್ತು ಅಕಿಲ ದನಂಜಯ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 4 - October 18 2021, 07:30 PM
ಶ್ರೀಲಂಕಾ
Namibia
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, August 20, 2021, 18:52 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X