ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ವಿರುದ್ಧದ ಒಡಿಐ ಸರಣಿಗೆ ಲಂಕಾ ತಂಡದಲ್ಲಿ ಭಾರಿ ಸರ್ಜರಿ!

Sri Lanka drop Niroshan Dickwella, recall Akila Dananjaya for Bangladesh ODIs

ಕೊಲಂಬೊ, ಜುಲೈ 25: ವಿಶ್ವಕಪ್‌ ವೈಫಲ್ಯದ ಬಳಿಕ ಏಕದಿನ ಕ್ರಿಕೆಟ್‌ ತಂಡವನ್ನು ಬಲಿಷ್ಠ ಪಡಿಸುವ ಕಡೆಗೆ ಮಹತ್ವದ ಹೆಜ್ಜೆಯಿಟ್ಟಿರುವ ಶ್ರೀಲಂಕಾ ತಂಡ, ಇದೇ ಶುಕ್ರವಾರ ಆರಂಭವಾಗಲಿರುವ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಗೆ ತನ್ನ ತಂಡದಲ್ಲಿ ಭಾರಿ ಸರ್ಜರಿಯನ್ನೇ ಮಾಡಿದೆ.

ತಂಡದ ಪ್ರಮುಖ ಆಟಗಾರರಾಗಿದ್ದ ನಿರೋಶಾನ್‌ ಡಿಕ್ವೆಲ್ಲಾ ಮತ್ತು ಧನುಷ್ಕಾ ಗುಣತಿಲಕ ಸೇರಿದಂತೆ ಪ್ರಮುಖ ಐದು ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಶ್ರೀಲಂಕಾ ತಂಡ ಪ್ರಕಟಿಸಿರುವ ಅಂತಿಮ 17 ಆಟಗಾರರ ಪಟ್ಟಿಯಲ್ಲಿ ಅಮಿಲಾ ಅಪೊನ್ಸೊ, ಲಕ್ಷಣ್‌ ಸಂದಕನ್‌ ಮತ್ತು ಲಾಹಿರು ಮಧುಸಂಕ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಟೀಮ್‌ ಇಂಡಿಯಾ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ದಿಗ್ಗಜಟೀಮ್‌ ಇಂಡಿಯಾ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ದಿಗ್ಗಜ

ಇದೇ ವೇಳೆ ಅನುಭವಿ ಲೆಗ್‌ಸ್ಪಿನ್ನರ್‌ ಅಖಿಲ ಧನಂಜಯ ಅವರನ್ನು ತಂಡಕ್ಕೆ ಮರಳಿ ಕರೆತರಲಾಗಿದ್ದು, ಅವರೊಟ್ಟಿಗೆ ಶೆಹಾನ್‌ ಜಯಸೂರ್ಯ, ವಹಿಂದು ಹಸರಂಗ, ಲಾಹಿರು ಕುಮಾರ ಮತ್ತು ದಸುನ್‌ ಶನಕ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.

ಪಾಕಿಸ್ತಾನ ಕ್ರಿಕೆಟಿಗನ ರಾಸಲೀಲೆಗಳು ಟ್ವಿಟರ್‌ನಲ್ಲಿ ಹರಾಜು!ಪಾಕಿಸ್ತಾನ ಕ್ರಿಕೆಟಿಗನ ರಾಸಲೀಲೆಗಳು ಟ್ವಿಟರ್‌ನಲ್ಲಿ ಹರಾಜು!

ಶ್ರೀಲಂಕಾ ತಂಡ ಬಾಂಗ್ಲಾ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದು, ಎಲ್ಲಾ ಪಂದ್ಯಗಳು (ಜುಲೈ 26, 28, 31) ಇಲ್ಲಿನ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದ್ದು, ದಿಮುತ್‌ ಕರುಣಾರತ್ನೆ ತಂಡವನ್ನು ಮುನ್ನಡೆಸಲಿದ್ದಾರೆ.

ಮಾಲಿಂಗಗೆ ವಿದಾಯದ ಪಂದ್ಯ

ಮಾಲಿಂಗಗೆ ವಿದಾಯದ ಪಂದ್ಯ

ಬಾಂಗ್ಲಾದೇಶ ವಿರುದ್ಧದ ಸರಣಿಯ ಮೊದಲ ಪಂದ್ಯ ಶ್ರೀಲಂಕಾದ ಅನುಭವಿ ವೇಗದ ಬೌಲರ್‌ ಲಸಿತ್‌ ಮಾಲಿಂಗ ಅವರ ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನ ಅಂತಿಮ ಪಂದ್ಯವಾಗಿದೆ. ಈ ಪಂದ್ಯದ ಮೂಲಕ ಮಾಲಿಂಗ ಒಡಿಐ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವ ಸಂಗತಿಯನ್ನು ನಾಯಕ ಕರುಣಾರತ್ನೆ ಈಗಾಗಲೇ ಖಾತ್ರಿ ಪಡಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮಾಲಿಂಗ್‌ ವೃತ್ತಿ ಬದುಕು ಮುಂದುವರಿಸುವ ಕಡೆಗೆ ಎದುರು ನೋಡುತ್ತಿದ್ದಾರೆ. ಸರಣಿಯ ಅಂತಿಮ ಎರಡು ಪಂದ್ಯಗಳಲ್ಲಿ ಮಾಲಿಂಗ ಸ್ಥಾನದಲ್ಲಿ ದಸುನ್‌ ಶನಕ ಕಣಕ್ಕಿಳಿಯಲಿದ್ದಾರೆ.

ಏಕದಿನ ಸರಣಿಗೆ ಶ್ರೀಲಂಕಾ ತಂಡ

ಏಕದಿನ ಸರಣಿಗೆ ಶ್ರೀಲಂಕಾ ತಂಡ

ದಿಮುತ್‌ ಕರುಣಾರತ್ನೆ (ನಾಯಕ), ಕುಶಲ್‌ ಪೆರೆರಾ, ಅವಿಷ್ಕ ಫರ್ನಾಂಡೊ, ಕುಶಲ್‌ ಮೆಂಡಿಸ್‌, ಏಂಜಲೊ ಮ್ಯಾಥ್ಯೂಸ್‌, ಲಾಹಿರು ತಿರಿಮನ್ನೆ, ಶೆಹಾನ್‌ ಜಯಸೂರ್ಯ, ಧನಂಜಯ ಡಿ'ಸಿಲ್ವಾ, ವಹಿಂದು ಹಸರಂಗ, ಅಖಿಲ ಧನಂಜಯ, ಲಸಿತ್‌ ಮಾಲಿಂಗ(ಮೊದಲ ಪಂದ್ಯಕ್ಕೆ), ನುವಾನ್‌ ಪ್ರದೀಪ್‌, ಲಾಹಿರು ಕುಮಾರ, ತಿಸಾರ ಪೆರೆರಾ,ಇಸುರು ಉದನಾ, ಕಸುನ್‌ ರಂಜಿತಾ, ದಸುನ್‌ ಶನಕ (2 ಮತ್ತು 3ನೇ ಪಂದ್ಯಕ್ಕೆ).

ಬಾಂಗ್ಲಾದೇಶ ತಂಡ

ಬಾಂಗ್ಲಾದೇಶ ತಂಡ

ಮಶ್ರಫೆ ಮೊರ್ತಾಝ (ನಾಯಕ), ತಮಿಮ್‌ ಇಕ್ಬಾಲ್‌, ಸೌಮ್ಯ ಸರ್ಕಾರ್‌, ಮುಷ್ಫಿಕರ್‌ ರಹೀಮ್‌, ಮಹ್ಮುದುಲ್ಲಾ ರಿಯಾದ್‌, ಮೊಹಮ್ಮದ್‌ ಮಿಥುನ್‌, ಮೊಸಾದೆಕ್‌ ಹುಸೇನ್‌, ಸಬ್ಬೀರ್‌ ರೆಹಮಾನ್‌, ರುಬೆಲ್‌ ಹುಸೇನ್‌, ಮುಸ್ತಾಫಿಝುರ್‌ ರೆಹಮಾನ್‌, ಅನಾಮುಲ್‌ ಹಕ್‌, ಮೆಹ್ದಿ ಹಸನ್‌ ಮಿರಾಝ್‌, ಮೊಹಮ್ಮದ್‌ ಸೈಫುದ್ದೀನ್‌ ಮತ್ತು ತೈಜುಲ್‌ ಇಸ್ಲಾಮ್‌.

ಲಸಿತ್‌ ಏಕದಿನ ಕ್ರಿಕೆಟ್‌ ಸಾಧನೆ

ಲಸಿತ್‌ ಏಕದಿನ ಕ್ರಿಕೆಟ್‌ ಸಾಧನೆ

225 ಪಂದ್ಯ
335 ವಿಕೆಟ್‌
6/38 ಶ್ರೇಷ್ಠ ಸಾಧನೆ
29.02 ಸರಾಸರಿ
5.36 ಎಕಾನಮಿ
32.4 ಸ್ಟ್ರೈಕ್‌ ರೇಟ್‌

Story first published: Thursday, July 25, 2019, 15:39 [IST]
Other articles published on Jul 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X