ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ನಮ್ಮ ದೇಶದಲ್ಲಿ ಆಯೋಜಿಸಿ: ಶ್ರೀಲಂಕಾ ಕ್ರಿಕೆಟ್ ಅಫರ್

Sri Lanka Offer To Host Ipl After Bcci Postpones Indian Premier League

ಐಪಿಎಲ್ ಅನ್ನು ಬಿಸಿಸಿಐ ಮುಂದಿನ ಸೂಚನೆ ಬರುವವರೆಗೂ ಅನಿಷ್ಟಾವಧಿಗೆ ಮುಂದೂಡುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಮಧ್ಯೆ ಮತ್ತೊಂದು ದೇಶ ಐಪಿಎಲ್‌ಅನ್ನು ನಮ್ಮ ದೇಶದಲ್ಲಿ ಆಯೋಜನೆ ಮಾಡಿ ಎಂದು ಆಫರ್ ನೀಡಿದೆ. ಇದು ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಶ್ರೀಲಂಕಾ ಕ್ರಿಕೆಟ್ ತಮ್ಮ ದೇಶದಲ್ಲಿ ಐಪಿಎಲ್‌ನ್ನು ಆಯೋಜನೆ ಮಾಡಿ ಎಂಬ ಆಫರ್‌ಅನ್ನು ನೀಡಿದೆ. ಐಪಿಎಲ್ ಆಯೋಜನೆಗೆ ಸುರಕ್ಷಿತ ತಾಣ ಮತ್ತು ಸಮಯವನ್ನು ಹುಡುಕುತ್ತಿರುವ ಬಿಸಿಸಿಐ ಶ್ರೀಲಂಕಾ ಕ್ರಿಕೆಟ್ ನೀಡಿರುವ ಈ ಅಫರ್‌ನ್ನು ಯಾವ ರೀತಿ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ 'ಸುಲಭ' ಸೂತ್ರ ಬಿಚ್ಚಿಟ್ಟ ಶೋಯೆಬ್ ಅಖ್ತರ್ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ 'ಸುಲಭ' ಸೂತ್ರ ಬಿಚ್ಚಿಟ್ಟ ಶೋಯೆಬ್ ಅಖ್ತರ್

ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಮ್ಮಿ ಸಿಲ್ವ ಕೊಲಂಬೋದಲ್ಲಿ ಇಂದು ಮಾತನಾಡಿ ಈ ವಿಚಾರವನ್ನು ಹೇಳಿದ್ದಾರೆ. 'ಶ್ರೀಲಂಕಾ ಐಪಿಎಲ್ ಆಯೋಜನೆಗೆ ಪ್ರಶಸ್ತವಾದ ಸ್ಥಳ. ಭಾರತಕ್ಕಿಂತ ಮೊದಲು ಶ್ರೀಲಂಕಾದಲ್ಲಿ ಕೊರೊನಾ ವೈರಸ್ ಕಾಲ್ಕೀಳಲಿದೆ. ಹೀಗಾಗಿ ಈ ಅವಕಾಶವನ್ನು ಬಳಸಿಕೊಳ್ಳಬಹುದು' ಎಂದಿದ್ದಾರೆ.

ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಶೀಘ್ರದಲ್ಲೇ ಪತ್ರವನ್ನು ಬರೆಯುವುದಾಗಿ ಸಿಲ್ವ ಇಂದು ಹೇಳಿದ್ದಾರೆ. ಈ ಬಾರಿಯ ವಿಶ್ವಕಪ್‌ ಮುಂದೂಡಲ್ಪಟ್ಟರೆ ಆ ಸಮಯದಲ್ಲಿ ಐಪಿಎಲ್ ಆಯೋಜನೆ ಮಾಡುವ ಚಿಂತನೆಯನ್ನು ಬಿಸಿಸಿಐ ನಡೆಸುತ್ತಿದೆ.

ಕ್ರಿಕೆಟ್‌ನ ಅಪರೂಪದ ಕ್ಷಣ: ಮೈದಾನದಲ್ಲೇ ಕಣ್ಣೀರಿಟ್ಟ ಐದು ಭಾರತೀಯ ಕ್ರಿಕೆಟಿಗರು!ಕ್ರಿಕೆಟ್‌ನ ಅಪರೂಪದ ಕ್ಷಣ: ಮೈದಾನದಲ್ಲೇ ಕಣ್ಣೀರಿಟ್ಟ ಐದು ಭಾರತೀಯ ಕ್ರಿಕೆಟಿಗರು!

ಶ್ರೀಲಂಕಾದಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣದಲ್ಲಿವೆ. ಈವರೆಗೂ 237 ಪ್ರಕರಣಗಳು ಶ್ರೀಲಂಕಾದಲ್ಲಿ ಪತ್ತೆಯಾಗಿದ್ದು, ಏಳು ಜನ ಈ ಮಾರಣಾಂತಿಕ ವೈರಸ್‌ಗೆ ಶ್ರೀಲಂಕಾದಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. 63 ಜನ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ. ಆದಷ್ಟು ಶೀಘ್ರದಲ್ಲಿ ಕೊರೊನಾದಿಂದ ಸಂಪೂರ್ಣ ಮುಕ್ತವಾಗುವ ವಿ‍ಶ್ವಾಸದಲ್ಲಿ ಶ್ರೀಲಂಕಾ ಇದೆ

Story first published: Thursday, April 16, 2020, 18:48 [IST]
Other articles published on Apr 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X