ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ಯಾದವ್ ವಿಕೆಟ್‌ಗೆ ಸಂಭ್ರಮಾಚರಿಸಿ ಟ್ರೋಲಿಗೀಡಾದ ಶ್ರೀಲಂಕಾ ಆಟಗಾರರು: ವಿಡಿಯೋ

Sri Lanka players celebrate Suryakumar Yadavs wicket after DRS shows not out, get trolled
ಸೂರ್ಯಕುಮಾರ್ ಯಾದವ್ ಅವರ DRS ಶ್ರೀಲಂಕಾ ಆಟಗಾರರಿಗೆ ಅರ್ಥವಾಗಲಿಲ್ಲ | Oneindia Kannada

ಕೊಲಂಬೋ: ಕೊಲಂಬೋದಲ್ಲಿರುವ ಆರ್‌ ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ (ಜುಲೈ 23) ನಡೆದ ಭಾರತ-ಶ್ರೀಲಂಕಾ ನಡುವಿನ ತೃತೀಯ ಮತ್ತು ಕೊನೇಯ ಏಕದಿನ ಪಂದ್ಯದ ವೇಳೆ ಲಂಕಾ ಆಟಗಾರರು ಟ್ರೋಲಿಗೀಡಾಗಿದ್ದಾರೆ. ಭಾರತೀಯ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ವಿಕೆಟ್‌ಗೆ ಸಂಭ್ರಮಾಚರಿಸಿ ಲಂಕಾ ಪ್ಲೇಯರ್ಸ್ ತಮಾಷೆಗೀಡಾಗಿದ್ದಾರೆ.

ಒಲಿಂಪಿಕ್ಸ್: ಭಾರತೀಯ ಅಥ್ಲೀಟ್‌ಗಳಿಗೆ ಶುಭಹಾರೈಸಿದ ದಿನೇಶ್ ಕಾರ್ತಿಕ್ಒಲಿಂಪಿಕ್ಸ್: ಭಾರತೀಯ ಅಥ್ಲೀಟ್‌ಗಳಿಗೆ ಶುಭಹಾರೈಸಿದ ದಿನೇಶ್ ಕಾರ್ತಿಕ್

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತದಿಂದ ಐದನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ಗೆ ಬಂದಿದ್ದರು. 23ನೇ ಓವರ್‌ನಲ್ಲಿ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ್ ಎಸೆತವನ್ನು ಯಾದವ್ ಮಿಸ್ ಮಾಡಿದರು. ಅದು ಯಾದವ್ ಪ್ಯಾಡ್‌ಗೆ ತಾಗಿ ಆಚೆ ಬಿದ್ದಿತ್ತು.

ಇಂಗ್ಲೆಂಡ್ ಪರ ಆಡಿದ ವಾಷಿಂಗ್ಟನ್ ಸುಂದರ್ ವಿಕೆಟ್ ಮುರಿದ ಮೊಹಮ್ಮದ್ ಸಿರಾಜ್: ವೀಡಿಯೋಇಂಗ್ಲೆಂಡ್ ಪರ ಆಡಿದ ವಾಷಿಂಗ್ಟನ್ ಸುಂದರ್ ವಿಕೆಟ್ ಮುರಿದ ಮೊಹಮ್ಮದ್ ಸಿರಾಜ್: ವೀಡಿಯೋ

ಆಗ ಯಾದವ್ ವಿಕೆಟ್‌ಗಾಗಿ ಶ್ರೀಲಂಕಾ ಆಟಗಾರರೆಲ್ಲ ಅಂಪೈರ್‌ಗೆ ಕೋರಿಕೊಂಡರು. ಆನ್ ಫೀಲ್ಡ್ ಅಂಪೈರ್ ಕುಮಾರ್ ಧರ್ಮಸೇನಾ ಅದಕ್ಕೆ ಔಟ್ ತೀರ್ಪು ನೀಡಿದರು. ಅಷ್ಟರಲ್ಲಾಗಲೇ ಲಂಕಾ ಆಟಗಾರರ ಸಂಭ್ರಮಾಚರಣೆ ಜೋರಾಗಿತ್ತು. ಆಚೆ ಸ್ಟ್ರೈಕ್‌ನಲ್ಲಿದ್ದ ಮನೀಶ್ ಪಾಂಡೆ ಅವರಲ್ಲಿ ಚರ್ಚಿಸಿದ ಯಾದವ್ ಡಿಸಿಶನ್ ರಿವ್ಯೂ ಸಿಸ್ಟಮ್ (ಡಿಆರ್‌ಎಸ್‌)ಗೆ ಕೋರಿಕೊಂಡರು.

ಡಿಆರ್‌ಎಸ್ ಪರಿಶೀಲನೆಯಲ್ಲಿ ಚೆಂಡು ಸ್ಟಂಪ್‌ಗೆ ತಾಗದೆ ಹೊರ ಜಿಗಿದಿದ್ದು ಕಾಣಿಸಿತ್ತು. ಔಟ್ ತೀರ್ಪು ವಾಪಸ್ ತೆಗೆದುಕೊಳ್ಳುವಂತೆ ಥರ್ಡ್ ಅಂಪೈರ್ ರವೀಂದ್ರ ವಿಮಲಾಸಿರಿ ಅವರು ಕುಮಾರ್‌ಗೆ ಕೋರಿಕೊಂಡರು. ಯಾದವ್ ಔಟ್ ತೀರ್ಪು ನಾಟ್ ಔಟ್ ಎಂದು ಬಂದಾಗ ಲಂಕಾ ಆಟಗಾರರು ಪೆಚ್ಚುಮೋರೆ ಹಾಕಬೇಕಾಯ್ತು. ಈ ವಿಡಿಯೋವನ್ನು ನೆಟ್ಟಿಗರು ಟ್ರೋಲ್‌ ಮಾಡಿ ಮಜಾ ತೆಗೆದುಕೊಳ್ಳುತ್ತಿದ್ದಾರೆ.

Story first published: Friday, July 23, 2021, 21:51 [IST]
Other articles published on Jul 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X