ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿಯಿಂದ 6 ವರ್ಷಗಳ ನಿಷೇಧಕ್ಕೆ ಗುರಿಯಾದ ಶ್ರೀಲಂಕಾ ಮಾಜಿ ಕ್ರಿಕೆಟಿಗ ನುವಾನ್ ಜೋಯ್ಸಾ

Sri Lankas Bowler Nuwan Zoysa banned 6 years for breaching ICC Anti Corruption Code

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ವೇಗಿ ನುವಾನ್ ಜೋಯ್ಸಾಗೆ ಎಲ್ಲಾ ರೀತಿಯ ಕ್ರಿಕೆಟ್ ಚಟುವಟಿಕೆಗಳಿಂದ ಐಸಿಸಿ 6 ವರ್ಷಗಳ ನಿಷೇಧ ಹೇರಿದೆ. ಐಸಿಸಿಯ ಭ್ರಷ್ಟಾಚಾರ ನಿಯಮವನ್ನು ಉಲ್ಲಂಘಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಐಸಿಸಿ ತೆಗೆದುಕೊಂಡಿದೆ. ಜೋಯ್ಸಾ ಕ್ರಿಕೆಟ್ ಪಂದ್ಯವನ್ನು ಪಿಕ್ಸಿಂಗ್‌ಗೆ ಪ್ರಯತ್ನಿಸಿರುವುದು ಸಾಬೀತಾಗಿದೆ.

ಈ ತಿಂಗಳ ಆರಂಭದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ಕೂಡ ಐಸಿಸಿಯಿಂದ 6 ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು. ಇದೀಗ ಶ್ರೀಲಂಕಾ ತಮಡದ ಮಾಜಿ ಕ್ರಿಕೆಟಿಗ ಕೂಡ ಇದೇ ಆರೋಪಕ್ಕೆ ಒಳಗಾಗಿ ಐಸಿಸಿಯಿಂದ ನಿಷೇಧಕ್ಕೆ ಒಳಗಾಗಿದ್ದಾರೆ.

ಆತ ನನ್ನ ಕಣ್ಣಲ್ಲಿ ನೀರು ತರಿಸಿದ: ಭಾರತೀಯನ ನೆನೆದ ಡೇಲ್ ಸ್ಟೇನ್ಆತ ನನ್ನ ಕಣ್ಣಲ್ಲಿ ನೀರು ತರಿಸಿದ: ಭಾರತೀಯನ ನೆನೆದ ಡೇಲ್ ಸ್ಟೇನ್

ನುವಾನ್ ಜೋಯ್ಸಾ ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು 95 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರೆ ಟೆಸ್ಟ್ ಮಾದರಿಯಲ್ಲಿ 30 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. 42ರ ಹರೆಯದ ಜೋಯ್ಸಾ 2007ರಲ್ಲಿ ಭಾರತದ ವಿರುದ್ಧ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದ್ದರು.

ಜೋಯ್ಸಾ ವಿರುದ್ಧ ಈ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿ ಮೂರು ವರ್ಷಗಳ ಹಿಂದೆ ಅಕ್ಟೋಬರ್ 31 2018ರಂದು ತಾತ್ಕಾಲಿಕ ನಿಷೇಧವನ್ನು ಹೇರಲಾಗಿತ್ತು.

2016ರಿಂದೀಚೆಗೆ ಐಸಿಸಿಯಿಂದ ನಿಷೇಧಕ್ಕೆ ಒಳಗಾದ ಶ್ರೀಲಂಕಾದ ನಾಲ್ಕನೇ ಕ್ರಿಕೆಟಿಗನಾಗಿದ್ದಾರೆ ಜೋಯ್ಸಾ. 2016ರಲ್ಲಿ ಶ್ರೀಲಂಕಾದ ಮಾಜಿ ಸ್ಪಿನ್ನರ್ ಜಯನಂದ ವರ್ಣವೀರ ಭಷ್ಟಾಚಾರ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. 2019ರಲ್ಲಿ ದಿಗ್ಗಜ ಕ್ರಿಕೆಟಿಗ ಸನತ್ ಜಯಸೂರ್ಯ ಐಸಿಸಿಯ ಭ್ರಷ್ಟಾಚಾರ ನಿಷೇಧ ಘಟಕಕ್ಕೆ ಸಹಕರಿಸದ ಕಾರಣಕ್ಕೆ ನಿಷೇಧ ಶಿಕ್ಷೆಗೆ ಒಳಗಾಗಿದ್ದರು. ಅದಾದ ಬಳಿಕ ಇತ್ತೀಚೆಗಷ್ಟೇ ಇನ್ನೋರ್ವ ಶ್ರೀಲಂಕಾ ಕ್ರಿಕೆಟಿಗ ದಿಲ್ಹರ ಲೋಕುಹೆಟ್ಟಿಗೆ ಕೂಡ 8 ವರ್ಷಗಳ ಕಠಿಣ ನಿಷೇಧ ಶಿಕ್ಷೆಗೆ ಒಳಗಾಗಿದ್ದಾರೆ.

Story first published: Wednesday, April 28, 2021, 14:30 [IST]
Other articles published on Apr 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X