ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೆಲುವಿನೊಂದಿಗೆ ಅಂತಾರಾಷ್ಟ್ರೀಯ ಏಕದಿನ ಆಟ ಮುಗಿಸಿದ ಮಾಲಿಂಗ

Sri Lanka’s Lasith Malinga retires from ODI cricket

ಕೊಲಂಬೋ, ಜುಲೈ 27: ಶ್ರೀಲಂಕಾ ಕ್ರಿಕೆಟ್ ತಂಡ ವೇಗಿ ಲಸಿತ್ ಮಾಲಿಂಗ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಶುಕ್ರವಾರ (ಜುಲೈ 26) ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಜಯ ಗಳಿಸಿದ ಬಳಿಕ ಮಾಲಿಂಗ ತನ್ನ ಅಂತಿಮ ನಿಲುವು ಪ್ರಕಟಿಸಿದರು.

ಟೀಮ್ ಇಂಡಿಯಾ ಮುಖ್ಯ ಕೋಚ್‌ ಆಗಿ ರವಿ ಶಾಸ್ತ್ರಿಯೇ ಮುಂದುವರಿಕೆ!?ಟೀಮ್ ಇಂಡಿಯಾ ಮುಖ್ಯ ಕೋಚ್‌ ಆಗಿ ರವಿ ಶಾಸ್ತ್ರಿಯೇ ಮುಂದುವರಿಕೆ!?

ಶುಕ್ರವಾರ ತನ್ನ ವೃತ್ತಿ ಜೀವನದ ಕಡೆಯ ಏಕದಿನ ಪಂದ್ಯವನ್ನಾಡಿದ ಮಾಲಿಂಗ, 9.3 ಓವರ್‌ಗಳಲ್ಲಿ 38 ರನ್‌ ನೀಡಿ 3 ವಿಕೆಟ್ ಪಡೆದರು. 30 ಟೆಸ್ಟ್ ಪಂದ್ಯಗಳಲ್ಲಿ ಲಂಕಾ ಪ್ರತಿನಿಧಿಸಿರುವ ಲಸಿತ್, 101 ವಿಕೆಟ್ ಪಡೆದಿದ್ದಾರೆ. 226 ಏಕದಿನ ಪಂದ್ಯಗಳಲ್ಲಿ 28.94ರ ಸರಾಸರಿಯಂತೆ 338 ವಿಕೆಟ್ ಸಾಧನೆ ಹೊಂದಿದ್ದಾರೆ.

ಮೊಹಮ್ಮದ್ ಶಮಿಗೆ ವೀಸಾ ನಿರಾಕರಿಸಿದ ಯುಎಸ್, ನೆರವಿಗೆ ಬಂದ ಬಿಸಿಸಿಐ ಮೊಹಮ್ಮದ್ ಶಮಿಗೆ ವೀಸಾ ನಿರಾಕರಿಸಿದ ಯುಎಸ್, ನೆರವಿಗೆ ಬಂದ ಬಿಸಿಸಿಐ

ಒಟ್ಟು 73 ಟಿ20 ಪಂದ್ಯಗಳನ್ನು ಆಡಿರುವ ಮಾಲಿಂಗ, 19.7ರ ಸರಾಸರಿಯಲ್ಲಿ 97 ವಿಕೆಟ್‌ಗಳನ್ನು ಕಡೆವಿದ್ದಾರೆ. ಮಾಲಿಂಗ ಮುಂದಿನ ವರ್ಷ ಟಿ20 ವಿಶ್ವಕಪ್ ವರೆಗೂ ಲಭ್ಯರಿರಲಿದ್ದಾರೆ. ಐಪಿಎಲ್‌ನಲ್ಲಿ ಲಸಿತ್, ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ.

'ಈ ಹೊತ್ತಿನಲ್ಲಿ ಏಕದಿನ ಆಟ ತ್ಯಜಿಸಲು ನನಗೆ ಖುಷಿಯೆನಿಸುತ್ತದೆ. ಮುಂದಿನ ವಿಶ್ವಕಪ್‌ನಲ್ಲಿ ತನ್ನ ಪ್ರತಿಭೆ ಸಾಭೀತುಪಡಿಸಲು ಯುವ ಆಟಗಾರರಿಗೆ ಇದೊಂದು ಅವಕಾಶ,' ಎಂದು 35ರ ಹರೆಯದ ಮಾಲಿಂಗ ಸುದ್ದಿಗಾರರೊಂದಿಗೆ ಹೇಳಿಕೊಂಡರು. ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾ ವಿರುದ್ಧ 91 ರನ್ ಗೆಲುವನ್ನಾಚರಿಸಿದೆ.

ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?

'ಮುಂದಿನ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡದಲ್ಲಿ ನಾನು ಲಭ್ಯನಿರಲಿದ್ದೇನೆ ಎಂದು ಭಾವಿಸುತ್ತೇನೆ. ಆ ಟೂರ್ನಿ ಆಡಲು ಅವಕಾಶ ಲಭಿಸಬಹುದು ಎಂದು ಆಶಿಸುತ್ತೇನೆ. ಒಂದು ವೇಳೆ ಆಗ ನನಗಿಂತಲೂ ಉತ್ತಮ ಆಟಗಾರ ಇದ್ದರೆ, ನನ್ನನ್ನು ತಂಡದಿಂದ ಹೊರಗಿಟ್ಟರೂ ನನಗೇನೂ ಬೇಜಾರಿಲ್ಲ,' ಎಂದು ಲಸಿತ್ ಹೇಳಿದರು.

Story first published: Saturday, July 27, 2019, 16:44 [IST]
Other articles published on Jul 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X