ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಶ್ರೀಲಂಕಾ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್- ಲಂಕಾ ಮಾಜಿ ಕ್ರೀಡಾ ಸಚಿವ ಆರೋಪ

Sri Lanka Sold 2011 Cricket World Cup Final, Says Former Sports Minister

ಮುಂಬೈನ ವಾಂಖೆಡೆ ಸ್ಟೇಡಿಯಮ್‌ನಲ್ಲಿ 2011ರಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಫಿಕ್ಸ್ ಆಗತ್ತು ಎಂಬ ಆರೋಪ ಮತ್ತೊಮ್ಮೆ ಕೇಳಿಬಂದಿದೆ. ಈ ಬಾರಿ ಈ ಗಂಭೀರ ಆರೋಪವನ್ನು ಮಾಡಿರುವುದು ಸ್ವತಃ ಶ್ರೀಲಂಕಾದ ಅಂದಿನ ಕ್ರೀಡಾ ಸಚಿವರಾಗಿದ್ದ ಮಹಿಂದಾನಂದ ಅಲುತ್‌ಗಮಗೆ ಮಾಡಿದ್ದಾರೆ.

ಈ ಮೂಲಕ 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಫಿಕ್ಸಿಂಗ್ ಮಾಡಿಕೊಂಡು ಸೋಲನ್ನಪ್ಪಿತ್ತು ಆರೋಪಿಸಿದ ಎರಡನೇ ವ್ಯಕ್ತಿಯಾಗಿದ್ದಾರೆ ಮಹಿಂದಾನಂದ. ಈ ಹಿಂದೆ 1996 ಶ್ರೀಲಂಕಾ ವಿಶ್ವಕಪ್ ವಿಜೇತ ತಂಡದ ನಾಯಕ ಅರ್ಜುನ ರಣತುಂಗ ಇದೇ ಆರೋಪವನ್ನು ಮಾಡಿದ್ದರು.

ಪಂದ್ಯದ ಸಂದರ್ಭದಲ್ಲೇ ಅನುಮಾನ ಬಂದಿತ್ತು

ಪಂದ್ಯದ ಸಂದರ್ಭದಲ್ಲೇ ಅನುಮಾನ ಬಂದಿತ್ತು

ನಾನು ಕ್ರೀಡಾ ಸಚಿವನಾಗಿದ್ದಾಗಲೇ ನನಗೆ ಈ ಅನುಮಾನ ಬಂದಿತ್ತು. ಆದರೆ ನಾನು ನಿಮ್ಮ ಮುಂದೆ ಈಗ ಹೇಳುತ್ತಿದ್ದೇನೆ, 2011ರ ವಿಶ್ವಕಪ್ ಫೈನಲ್ ಪಂದ್ಯವನ್ನು ನಾವು ಮಾರಿಕೊಂಡಿದ್ದೆವು ಎಂದು ಖಾಸಗೀ ವಾಹಿನಿಯ ಜೊತೆಗೆ ಮಾತನಾಡುತ್ತಾ ಮಹಿಂದಾನಂದ ಅಲುತ್‌ಗಮಗೆ ಈ ಗಂಭೀರ ಆರೋಪವನ್ನು ಮಾಡಿದ್ದಾರೆ.

ಕೆಲ ವಿಭಾಗಗಳು ಫಿಕ್ಸಿಂಗ್‌ನಲ್ಲಿ ಭಾಗಿ

ಕೆಲ ವಿಭಾಗಗಳು ಫಿಕ್ಸಿಂಗ್‌ನಲ್ಲಿ ಭಾಗಿ

2011ರಲ್ಲಿ ನಾವು ಗೆಲ್ಲಬಹುದಾಗಿತ್ತು. ಆದರೆ ನಾವು ಅದನ್ನು ಮಾರಿಕೊಂಡಿದ್ದೆವು, ನಾನು ಈಗ ಈ ಬಗ್ಗೆ ಮಾತನಾಡಬಹುದು ಎಂದು ಅನಿಸುತ್ತದೆ. ನಾನು ಆಟಗಾರರಿಗೆ ಮಾತ್ರ ಸಂಬಂಧಿಸಿ ಹೇಳುತ್ತಿಲ್ಲ. ಕೆಲ ವಿಭಾಗಗಳು ಇದರಲ್ಲಿ ಒಳಗೊಂಡಿತ್ತು ಎಂದು ತನ್ನ ಆರೋಪದಲ್ಲಿ ಹೇಳಿಕೊಂಡಿದ್ದಾರೆ.

ಸೋಲಿನ ಬಗ್ಗೆ ತನಿಖೆಗೆ ಆಗ್ರಹಿಸಿದ್ದ ರಣತುಂಗ

ಸೋಲಿನ ಬಗ್ಗೆ ತನಿಖೆಗೆ ಆಗ್ರಹಿಸಿದ್ದ ರಣತುಂಗ

ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಮಾಜಿ ನಾಯಕ ರಣತುಂಗ ವೀಕ್ಷಕವಿವರಣೆಕಾರನಾಗಿದ್ದರು. ಫೈನಲ್ ಪಂದ್ಯದ ಸೋಲಿನ ಬಗ್ಗೆ ತನಿಖೆ ನಡೆಯಬೇಕು ಎಂದು ಅವರು ಈ ಹಿಂದೆಯೇ ಆಗ್ರಿಸಿದ್ದರು. 2017ರಲ್ಲಿ ಈ ಬಗ್ಗೆ ಧ್ವನಿಯೆತ್ತಿದ್ದ ರಣತುಂಗ ಪಂದ್ಯ ಸೋಲುತ್ತಿದ್ದಂತೆಯೇ ನನಗೆ ಅನುಮಾನ ಬಂದಿತ್ತು. ಆ ಪಂದ್ಯದ ಬಗ್ಗೆ ಸಂಪೂರ್ಣ ತನಿಖೆಯಾಗಲೇಬೇಕು ಎಂದಿದ್ದರು.

ಹೇಗಿತ್ತು ಫೈನಲ್ ಪಂದ್ಯ

ಹೇಗಿತ್ತು ಫೈನಲ್ ಪಂದ್ಯ

ಭಾರತದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 274 ರನ್ ಗಳಿಸಿತ್ತು. ಇದನ್ನು ಬೆನ್ನಟ್ಟಿದ ಭಾರತ ತಂಡದ ಪ್ರಮುಖ ಆಟಗಾರ ಸಚಿನ್ ತೆಂಡೂಲ್ಕರ್ ಅವರನ್ನು 18 ರನ್ ಆಗುವಷ್ಟರಲ್ಲಿ ಔಟ್ ಮಾಡಿ ಮೇಲುಗೈ ಸಾಧಿಸಿತ್ತು. ಆದರೆ ಬಳಿಕ ಶ್ರೀಲಂಕಾ ಎಲ್ಲೂ ಪ್ರತಿರೋಧ ತೋರದೆಯೇ ಭಾರತಕ್ಕೆ ಶರಣಾಗಿತ್ತು.

Story first published: Thursday, June 18, 2020, 19:01 [IST]
Other articles published on Jun 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X