ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 60 ಅಂಕ ಬಾಚಿಕೊಂಡ ಶ್ರೀಲಂಕಾ

sri lanka vs nz 1st test 2019

ಗಾಲೆ, ಆಗಸ್ಟ್‌ 18: ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ ಎರಡು ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ದಾಖಲಿಸಿದ ಆತಿಥೇಯ ಶ್ರೀಲಂಕಾ ತಂಡ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದೆ.

ಗಾಲೆ ಟೆಸ್ಟ್‌ ಪಂದ್ಯದಲ್ಲಿ 268 ರನ್‌ಗಳ ಗುರಿ ಬೆನ್ನತ್ತಿದ ಆತೀಥೇಯ ಲಂಕಾ ಪಡೆ, ನಾಯಕ ದಿಮುತ್‌ ಕರುಣಾರತ್ನೆ (122) ಅವರ ಅದ್ಭುತ ಶತಕದ ನೆರವಿನಿಂದ ಪಂದ್ಯದ ಐದನೇ ದಿನವಾದ ಭಾನುವಾರ ಮೊದಲ ಅವಧಿಯಲ್ಲೇ ಗೆಲುವಿನ ಸಂಭ್ರಮ ಆಚರಿಸಿತು. ಈ ಮೂಲಕ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 60 ಅಂಕಗಳೊಂದಿಗೆ ಶ್ರೀಲಂಕಾ ಖಾತೆ ತೆರೆದಿದೆ.

1
46274

ಐಸಿನೇ ದಿನದಾಟದಲ್ಲಿ ವಿಕೆಟ್‌ ನಷ್ಟವಿಲ್ಲದೆ 133 ರನ್‌ಗಳಿಂದ ಬ್ಯಾಟಿಂಗ್‌ ಮುಂದುವರಿಸಿದ ಶ್ರೀಲಂಕಾಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕರುಣಾರತ್ನೆ ಮತ್ತು ಲಾಹಿರು ತಿರಿಮನ್ನೆ ಮೊದಲ ವಿಕೆಟ್‌ಗೆ 161 ರನ್‌ಗಳನ್ನು ಜೋಡಿ ಜಯದ ಹಾದಿಯನ್ನು ಸುಗಮವನ್ನಾಗಿಸಿದರು. ಕರುಣಾರತ್ನೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೃತ್ತಿ ಬದುಕಿನ 9ನೇ ಶತಕ ಬಾರಿಸಿ ಕಂಗೊಳಿಸಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಈವರೆಗೆ 60 ಪಂದ್ಯಗಳನ್ನಾಡಿರುವ ಕರುಣಾರತ್ನೆ 4ನೇ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿರುವುದು ಇದೇ ಮೊದಲ ಬಾರಿ ಆಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ನಗ್ನ ಫೋಟೊ ಪ್ರಕಟಿಸಿದ ಇಂಗ್ಲೆಂಡ್‌ ಆಟಗಾರ್ತಿ!ಸೋಷಿಯಲ್‌ ಮೀಡಿಯಾದಲ್ಲಿ ನಗ್ನ ಫೋಟೊ ಪ್ರಕಟಿಸಿದ ಇಂಗ್ಲೆಂಡ್‌ ಆಟಗಾರ್ತಿ!

ದ್ವಿತೀಯ ಟೆಸ್ಟ್‌ ಪಂದ್ಯ ಆಗಸ್ಟ್‌ 22ರಂದು (ಗುರುವಾರ) ಕೊಲಂಬೊದಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌
ಶ್ರೀಲಂಕಾ: ಮೊದಲ ಇನಿಂಗ್ಸ್‌ 267/10 ಮತ್ತು ಎರಡನೇ ಇನಿಂಗ್ಸ್‌ 268/4 (ದಿಮುತ್‌ ಕರುಣಾರತ್ನೆ 122, ಲಾಹಿರು ತಿರಿಮನ್ನೆ 64; ಟಿಮ್‌ ಸೌಥೀ 33ಕ್ಕೆ 1).
ನ್ಯೂಜಿಲೆಂಡ್‌: ಮೊದಲ ಇನಿಂಗ್ಸ್‌ 249/10 ಮತ್ತು ಎರಡನೇ ಇನಿಂಗ್ಸ್‌ 285/10 (ಬಿಜೆ ವ್ಯಾಟ್ಲಿಂಗ್‌ 77, ಟಾಮ್‌ ಲೇಥಮ್‌ 45; ಲಸಿತ್‌ ಎಂಬುಲ್ದೆನಿಯಾ 99ಕ್ಕೆ 4).

Story first published: Sunday, August 18, 2019, 14:16 [IST]
Other articles published on Aug 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X