ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ಟಿ20 ವಿಶ್ವಕಪ್‌ಗೆ ಪರ್ಯಾಯ ತಾಣಗಳನ್ನು ಗುರುತಿಸಿದ ಐಸಿಸಿ

Sri Lanka, Uae Kept As India’s Back Up For 2021 World T20

ಶ್ರೀಲಂಕಾ ಹಾಗೂ ಯುಎಇಯನ್ನು ಮುಂದಿನ ವಿಶ್ವಕಪ್‌ಗೆ ಬ್ಯಾಕ್‌ಅಪ್ ತಾಣಗಳಾಗಿ ಐಸಿಸಿ ತೀರ್ಮಾನ ಮಾಡಿಕೊಂಡಿದೆ ಎಂದು ವರದಿಯಾಗಿದೆ. 2021ರ ಟಿ20 ವಿಶ್ವಕಪ್ ಆಯೋಜನೆಯ ಜವಾಬ್ಧಾರಿ ಭಾರತ ವಹಿಸಿಕೊಂಡಿದೆ. ಆದರೆ ಮುಂದಿನ ವರ್ಷವೂ ಭಾರತದಲ್ಲಿ ಆಯೋಜನೆ ಸಾಧ್ಯವಾಗದಿದ್ದರೆ ಈ ಎರಡು ತಾಣಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಟೂರ್ನಿ ಆಯೋಜನೆ ಮಾಡಲು ತೀರ್ಮಾನಿಸಿಕೊಂಡಿದೆ ಎನ್ನಲಾಗಿದೆ.

ಆಸ್ಟ್ರೇಲಿಯಾದಲ್ಲಿ ಇದೇ ವರ್ಷಾಂತ್ಯಕ್ಕೆ ನಡೆಯಬೇಕಿದ್ದ ಟಿ20 ವಿಶ್ವಕಪ್ ಕೊರೊನಾ ವೈರಸ್‌ನ ಕಾರಣದಿಂದಾಗಿ 16 ರಾಷ್ಟ್ರಗಳ ಆಟಗಾರರನ್ನು ಹೊಂದಿಸಿಕೊಂಡು ಆಯೊಜಿಸುವುದು ಅಸಾಧ್ಯವೆಂದು ತೀರ್ಮಾನಿಸಿ 2022ಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ ಮುಂದಿನ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಇನ್ನೂ ಒಂದು ವರ್ಷಗಳ ಸಮಯಾವಕಾಶ ಇದೆ.

ಐಪಿಎಲ್ 2020: ಶ್ರೇಷ್ಠ ಐಪಿಎಲ್ XI ತಂಡವನ್ನು ಪ್ರಕಟಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ಐಪಿಎಲ್ 2020: ಶ್ರೇಷ್ಠ ಐಪಿಎಲ್ XI ತಂಡವನ್ನು ಪ್ರಕಟಿಸಿದ ಗ್ಲೆನ್ ಮ್ಯಾಕ್ಸ್‌ವೆಲ್

ಇಎಸ್‌ಪಿಎಸ್ ಕ್ರಿಕ್ ಇನ್ಫೋ ವರದಿಯ ಪ್ರಕಾರ ಕೊರೊನಾ ವೈಸರ್‌ನ ಕಾರಣದಿಂದಾಗಿ ಮುಂದಿನ ಟಿ20 ವಿಶ್ವಕಪ್ ಭಾರತದಲ್ಲಿ ಆಯೋಜಿಸಲು ಸಾಧ್ಯವಾಗದ ಸಂದರ್ಭದಲ್ಲಿ ಯುಎಇ ಹಾಗೂ ಶ್ರೀಲಂಕಾ ದೇಶವನ್ನು ಪರ್ಯಾಯವಾಗಿಟ್ಟುಕೊಂಡಿದೆ ಎಂದಿದೆ.

ಕಳೆದ ವಾರವಷ್ಟೇ ಐಸಿಸಿ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ವಿಶ್ವಕಪ್ 2022ಕ್ಕೆ ಹಾಗೂ 2021ಕ್ಕೆ ಈ ಹಿಂದೆ ನಿರ್ಧಾರವಾಗಿತುವಂತೆಯೇ ಭಾರತದಲ್ಲೇ ನಡೆಸುವ ತೀರ್ಮಾನವನ್ನು ಕೈಗೊಂಡಿತ್ತು. ಹಾಗಿದ್ದರೂ ಜಾಗತಿಕ ಟೂರ್ನಮೆಂಟ್‌ಗಾಗಿ ಪರ್ಯಾಯ ತಾಣಗಳನ್ನು ಕಾಯ್ದಿರಿಸಕೊಳ್ಳುವುದು ಪ್ರಮಾಣಿತ ಶಿಷ್ಠಾಚಾರವಾಗಿದೆ.

ಸಿಪಿಎಲ್ 2020: ಕೆರಿಬಿಯನ್ ಲೀಗ್‌ನಲ್ಲಿ ಮಿಂಚು ಹರಿಸಬಹುದಾದ 4 ವಿದೇಶಿ ಆಟಗಾರರುಸಿಪಿಎಲ್ 2020: ಕೆರಿಬಿಯನ್ ಲೀಗ್‌ನಲ್ಲಿ ಮಿಂಚು ಹರಿಸಬಹುದಾದ 4 ವಿದೇಶಿ ಆಟಗಾರರು

ಪ್ರತೀ ಜಾಗತಿಕ ಟೂರ್ನಿಗೂ ಪರ್ಯಾಯ ಸ್ಥಳಗಳನ್ನು ಗುರುತಿಸಿಕೊಳ್ಳುವುದು ಐಸಿಸಿಯ ಸಾಮಾನ್ಯ ಶಿಷ್ಠಾಚಾರವಾಗಿದೆ. ಆದರೆ ಸದ್ಯದ ಕೊರೊನಾ ವೈರಸ್‌ನ ಕಾರಣದಿಂದಾಗಿ ಅದು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಜಾಗತೊಲ ಮಟ್ಟದಲ್ಲಿ ಕೊರೊನಾ ವೈರಸ್‌ಗೆ ಅತಿ ಕೆಟ್ಟ ಪರಿಣಾಮವನ್ನು ಬೀರಿದ ಮೂರನೇ ದೇಶವಾಗಿ ಭಾರತ ಗುರುತಿಸಿಕೊಂಡಿದೆ.

Story first published: Thursday, August 13, 2020, 10:01 [IST]
Other articles published on Aug 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X