ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಪ್ರಮುಖ ಇಬ್ಬರು ಆಟಗಾರರನ್ನು ಹೊರಗಿಟ್ಟ ಆಸ್ಟ್ರೇಲಿಯಾ

Sri Lanka vs Australia: Aussies squad announced for 5-match T20I series 2 star players rested

ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮುಂದಿನ ತಿಂಗಳು ಶ್ರೀಲಂಕಾಗೆ ಪ್ರವಾಸ ಕೈಗೊಳ್ಳಲಿದ್ದು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಯಲ್ಲಿ ಪಾಲ್ಗೊಳ್ಳುವ ಆಸ್ಟ್ರೇಲಿಯಾ ತಂಡವನ್ನು ಇಂದು ಪ್ರಕಟಿಸಲಾಗಿದ್ದು ಇಬ್ಬರು ಸ್ಟಾರ್ ಆಟಗಾರರನ್ನು ಈ ಸರಣಿಯಿಂದ ಹೊರಗಿಡಲಾಗಿದೆ. ಈ ಸರಣಿಯನ್ನು ಆಸ್ಟ್ರೇಲಿಯಾ ತಂಡ ಮುಂದೆ ಪಾಕಿಸ್ತಾನದಲ್ಲಿ ನಡೆಯಲಿರುವ ಸರಣಿಗೆ ಪೂರ್ವಸಿದ್ಧತಾ ಸರಣಿಯನ್ನಾಗಿಯೂ ಪರಿಗಣಿಸಿದೆ.

ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ 16 ಆಟಗಾರರ ಬಳಗವನ್ನು ಪ್ರಕಟಿಸಿದ್ದು ಇದರಲ್ಲಿ ಇತ್ತೀಚೆಗಷ್ಟೇ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು 4-0 ಅಂತರದಿಂದ ಮಣಿಸಿದ್ದ ಸ್ಕ್ವಾಡ್‌ನಲ್ಲಿದ್ದ ಐವರು ಆಟಗಾರರು ಸೇರಿಕೊಂಡಿದ್ದಾರೆ. ಪ್ಯಾಟ್ ಕಮ್ಮಿನ್ಸ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಜ್‌ವುಡ್ ಈ 5 ಕ್ರಿಕೆಟಿಗರಾಗಿದ್ದಾರೆ. ಗಾಯದ ಕಾರಣದಿಂದ ಆಶಸ್ ಸರಣಿಯ ಅಂತಿಮ ಪಂದ್ಯದಿಂದ ಹೊರಗುಳಿದಿದ್ದ ಹ್ಯಾಜಲ್‌ವುಡ್ ತಂಡಕ್ಕೆ ಮರಳಿದ್ದಾರೆ.

ಕೊಹ್ಲಿ ನಾಯಕತ್ವ ಬಿಡುವಂತೆ ತಂಡದೊಳಗೆ ರಚಿಸಿದ್ದ ಈ ಪ್ಲಾನ್ ಯಾರಿಗೂ ಗೊತ್ತಿಲ್ಲ ಬಿಡಿ: ಮಾಜಿ ಕ್ರಿಕೆಟಿಗ!ಕೊಹ್ಲಿ ನಾಯಕತ್ವ ಬಿಡುವಂತೆ ತಂಡದೊಳಗೆ ರಚಿಸಿದ್ದ ಈ ಪ್ಲಾನ್ ಯಾರಿಗೂ ಗೊತ್ತಿಲ್ಲ ಬಿಡಿ: ಮಾಜಿ ಕ್ರಿಕೆಟಿಗ!

ಇಬ್ಬರು ಸ್ಟಾರ್ ಆಟಗಾರರು ಸರಣಿಯಿಂದ ಹೊರಕ್ಕೆ: ಇನ್ನು ಶ್ರೀಲಂಕಾ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಯಿಂದ ಆಸ್ಟ್ರೇಲಿಯಾ ತಂಡದ ಇಬ್ಬರು ಪ್ರಮುಖ ಆಟಗಾರರಾದ ಡೇಚಿಡ್ ವಾರ್ನರ್ ಹಾಗೂ ಆಲ್‌ರೌಂಡರ್ ಮಿಶೆಲ್ ಮಾರ್ಶ್ ಹೊರಗುಳಿಯಲಿದ್ದಾರೆ. ಈ ಇಬ್ಬರಿಗೂ ಈ ಸರಣಿಯಿಂದ ವಿಶ್ರಾಂತಿಯನ್ನು ನೀಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ಇನ್ನು ಈ ತಂಡವನ್ನು ಪ್ರಕಟಿಸಿದ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಪ್ರತಿಕ್ರಿಯಿಸಿದೆ."ಇದು ಈ ವರ್ಷದ ಕೊನೆಯಲ್ಲಿ ತವರಿನಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್‌ಅನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ತಯಾರಿಯ ಆರಂಭವಾಗಿದೆ. ಉತ್ತಮ ಎದುರಾಳಿಯ ವಿರುದ್ಧ ಈ ಐದು ಪಂದ್ಯಗಳಲ್ಲಿ ಮಿಂಚಲು ಅನೇಕ ಯುವ ಆಗಟಾರರಿಗೂ ಈ ಸರಣಿ ಅವಕಾಶವನ್ನು ನೀಡಲಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿ ಫ್ರಬ್ರವರಿ 11ರಿಂದ ಆರಂಬವಾಗಲಿದ್ದು ಫೆಬ್ರವರಿ 020 ರಂದು ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ಅದಾದ ಬಳಿಕ ಪಾಕಿಸ್ತಾನ ಪ್ರವಾಸವನ್ನು ಆಸ್ಟ್ರೇಲಿಯಾ ತಂಡ ಕೈಗೊಳ್ಳಲಿದ್ದು ಈ ಪ್ರವಾಸದಲ್ಲಿ ಮೊದಲಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿ, ನಂತರ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಒಂದು ಟಿ20 ಪಂದ್ಯ ನಡೆಯಲಿದೆ. ಮಾರ್ಚ್ 3ರಿಂದ ಪಾಕಿಸ್ತಾನ ವಿರುದ್ಧದ ಸರಣಿ ಆರಂಭವಾಗಲಿದೆ.

ಸ್ಪಾಟ್‌ ಫಿಕ್ಸಿಂಗ್: ಬ್ರೆಂಡನ್ ಟೇಲರ್‌ ಪರ ನಿಂತ ಆರ್‌. ಅಶ್ವಿನ್ಸ್ಪಾಟ್‌ ಫಿಕ್ಸಿಂಗ್: ಬ್ರೆಂಡನ್ ಟೇಲರ್‌ ಪರ ನಿಂತ ಆರ್‌. ಅಶ್ವಿನ್

ಇನ್ನು ಕಳೆದ ನವೆಂಬರ್‌ನಲ್ಲಿ ಅಂತ್ಯವಾಗಿರುವ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಆ ಪ್ರದರ್ಶನವನ್ನು ಈ ವರ್ಷವೂ ಮುಂದುವರಿಸುವ ಆತ್ಮವಿಶ್ವಾಸದಲ್ಲಿದೆ. ಈ ಬಾರಿ ಆಸ್ಟ್ರೇಲಿಯಾ ನೆಲದಲ್ಲಿಯೇ ವಿಶ್ವಕಪ್ ಟೂರ್ನಿ ನಡೆಯಲಿರುವ ಕಾರಣ ಈ ಸರಣಿಯಲ್ಲಿ ಆಸಿಸ್ ತಂಡದ ಪ್ರದರ್ಶನ ಕುತೂಹಲ ಮೂಡಿಸಿದೆ. ಇನ್ನು ಆಸ್ಟ್ರೇಲಿಯಾ ತಂಡ ಇತ್ತೀಚೆಗಷ್ಟೇ ಅಂತ್ಯವಾದ ಆಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 4-0 ಅಂತರದಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿತ್ತು.

ಪಾಕ್ ಬೌಲರ್ ಶಾಹಿನ್ ಅಫ್ರಿದಿಗೆ ಗೆ ಭಾರತದ ಸೋಲಿನಿಂದ ಅನಿಸಿದ್ದೇನು? | Oneindia Kannada

ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವ ಆಸ್ಟ್ರೇಲಿಯಾ ತಂಡ: ಆರೋನ್ ಫಿಂಚ್, ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮೊಯಿಸಸ್ ಹೆನ್ರಿಕ್ಸ್, ಜೋಶ್ ಇಂಗ್ಲಿಸ್, ಬೆನ್ ಮೆಕ್‌ಡರ್ಮಾಟ್, ಗ್ಲೆನ್ ಮ್ಯಾಕ್ಸ್‌ವೆಲ್, ಜ್ಯೆ ರಿಚರ್ಡ್‌ಸನ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯ್ನಿಸ್, ಮ್ಯಾಥ್ಯೂ ವೇಡ್, ಆಡಮ್ ಝಂಪಾ

Story first published: Tuesday, January 25, 2022, 15:56 [IST]
Other articles published on Jan 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X