ಆಸ್ಟ್ರೇಲಿಯಾ vs ಶ್ರೀಲಂಕಾ ಟೆಸ್ಟ್ ಸರಣಿ: ಮೊದಲ ಪಂದ್ಯದ ಸಂಭಾವ್ಯ ತಂಡ, ಪ್ರಿವ್ಯೂ

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ನಡುವಿನ ವೈಟ್‌ಬಾಲ್ ಸರಣಿ ಅಂತ್ಯವಾಗಿದ್ದು ಇದೀಗ ಟೆಸ್ಟ್ ಸರಣಿಗೆ ಎರಡು ತಂಡಗಳು ಕೂಡ ಸಜ್ಜಾಗುತ್ತಿದೆ. ಜೂನ್ 29ರಂದು ಗಾಲ್ಲೆ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ಟಿ20 ಸರಣಿಯನ್ನು ಆಸ್ಟ್ರೇಲಿಯಾ ವಶಕ್ಕೆ ಪಡೆದ ಬಳಿಕ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡ ಅದ್ಭುತ ಪ್ರದರ್ಶನ ನೀಡಿದ್ದು 3-2 ಅಂತರದಿಂದ ಆತಿಥೇಯ ತಂಡ ಸರಣಿ ವಶಕ್ಕೆ ಪಡೆದುಕೊಮಡಿತ್ತು. ಹೀಗಾಗಿ ಟೆಸ್ಟ್ ಸರಣಿಯ ಮೇಲೆಯೂ ಶ್ರಿಲಂಕಾ ತಂಡ ಆತ್ಮವಿಶ್ವಾಸದಿಂದ ಇದೆ.

ಆದರೆ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾಗೆ ಆಸ್ಟ್ರೇಲಿಯಾದಿಂದ ಮತ್ತಷ್ಟು ಕಠಿಣ ಸವಾಲು ಎದುರಾಗುವುದರಲ್ಲಿ ಅನುಮಾನವಿಲ್ಲ. ಕಳೆದ ಜನವರಿಯಿಂದೀಚೆಗೆ ಆಸ್ಟ್ರೇಲಿಯಾ ಅತ್ಯುತ್ತಮ ಪ್ರದರ್ಶನ ನಿಡುತ್ತಿದ್ದು ಆಶ್ ಸರಣಿಯಲ್ಲಿ 4-0 ಅಂತರದ ಗೆಲುವು ಸಾಧಿಸಿದರೆ ಪಾಕಿಸ್ತಾನದ ವಿರುದ್ಧ 1-0 ಅಂತರದಿಂದ ಸರಣಿ ಗೆದ್ದಿದೆ. ನಾಯಕನಾಗಿ ಆಯ್ಕೆಯಾದ ಬಳಿಕ ಪ್ಯಾಟ್ ಕಮ್ಮಿನ್ಸ್ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

ಗಾಲ್ಲೆ ಪಿಚ್ ರಿಪೋರ್ಟ್

ಗಾಲ್ಲೆ ಪಿಚ್ ರಿಪೋರ್ಟ್

ಗಾಲ್ಲೆ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ತಕ್ಕಮಟ್ಟಿಗೆ ಯೋಗ್ಯವಾಗಿರುವ ಪಿಚ್ ಎನಿಸಿಕೊಂಡಿದೆ. ಆದರೆ ಪಂದ್ಯ ಮುಂದುವರೆದಂತೆ ಪಿಚ್‌ನಲ್ಲಿನ ಬಿರುಕುಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು ಸ್ಪಿನ್ನರ್‌ಗಳು ಮಹತ್ವದ ಪಾತ್ರವಹಿಸಲಿದ್ದಾರೆ. ಇಲ್ಲಿ ಟಾಸ್ ಗೆದ್ದ ತಮಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಹವಾಮಾನ ವರದಿ

ಹವಾಮಾನ ವರದಿ

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆಯ ಆತಂಕ ಇದೆ. ಅದರಲ್ಲೂ ಎರಡು ಹಾಗೂ ಮೂರನೇ ದಿನ ಮಳೆ ಸುರಿಯುವ ನಿರೂಕ್ಷೆಯಿದ್ದು ಪಂದ್ಯಕ್ಕೆ ಕೆಲ ಕಾಲ ಅಡ್ಡಿಯಾಗಬಹುದು. ಇನ್ನು ಪಂದ್ಯದುದ್ದಕ್ಕೂ ಮೋಡಕವಿದ ವಾತಾವರಣವಿರಲಿದ್ದು 31 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ.

ಶ್ರೀಲಂಕಾ ಸಂಭಾವ್ಯ ತಂಡ

ಶ್ರೀಲಂಕಾ ಸಂಭಾವ್ಯ ತಂಡ

ದಿಮುತ್ ಕರುಣಾರತ್ನೆ (ನಾಯಕ), ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಓಷದ ಫೆರ್ನಾಂಡೋ, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಪ್ರವೀಣ್ ಜಯವಿಕ್ರಮ, ಜೆಫ್ರಿ ವಾಂಡರ್ಸೆ, ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಕಸುನ್ ರಜಿತಾ

ನಾನೇ ಅಂತಿದ್ದ ಗಾಯಕ್ವಾಡ್ ಗೆ ಪಾಠ ಕಲಿಸಿದ ಪಾಂಡ್ಯ | *Cricket | OneIndia Kannada
ಆಸ್ಟ್ರೇಲಿಯಾ ಸಂಭಾವ್ಯ ತಂಡ

ಆಸ್ಟ್ರೇಲಿಯಾ ಸಂಭಾವ್ಯ ತಂಡ

ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್, ನಥನ್ ಲಿಯಾನ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, June 28, 2022, 13:26 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X