ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ ಇತಿಹಾಸದಲ್ಲಿ ಬಲು ಅಪರೂಪದ ದಾಖಲೆ ಬರೆದ ಭುವನೇಶ್ವರ್ ಕುಮಾರ್!

Sri Lanka vs India: Bhuvneshwar Kumar Bowls First No-Ball In 6 Years In International Cricket

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಉಪ ನಾಯಕ ಭುವನೇಶ್ವರ್ ಕುಮಾರ್ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಬಲು ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯನ್ನು ಒಳ್ಳೆಯ ದಾಖಲೆ ಅನ್ನುತ್ತೀರೋ ಅಥವಾ ಕೆಟ್ಟ ದಾಖಲೆ ಅನ್ನುತ್ತೀರೋ ಅದು ನಿಮಗೆ ಬಿಟ್ಟಿದ್ದು.

ಭಾರತ vs ಶ್ರೀಲಂಕಾ: ಏಕದಿನ ಸರಣಿಯ ವೇಳೆ ನಿರ್ಮಾಣವಾಗಲಿರುವ ಕುತೂಹಲಕಾರಿ ದಾಖಲೆಗಳಿವು!ಭಾರತ vs ಶ್ರೀಲಂಕಾ: ಏಕದಿನ ಸರಣಿಯ ವೇಳೆ ನಿರ್ಮಾಣವಾಗಲಿರುವ ಕುತೂಹಲಕಾರಿ ದಾಖಲೆಗಳಿವು!

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬರೋಬ್ಬರಿ 6 ವರ್ಷಗಳ ಬಳಿಕ ಮೊದಲ ನೋ ಬಾಲ್ ಹಾಕಿದ ವಿಚಿತ್ರ ದಾಖಲೆಗೆ ವೇಗಿ ಭುವನೇಶ್ವರ್ ಕುಮಾರ್ ಕಾರಣರಾಗಿದ್ದಾರೆ. ಭಾರತ-ಶ್ರೀಲಂಕಾ ಮಧ್ಯೆ ಜುಲೈ 20ರ ಮಂಗಳವಾರ ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದ ವೇಳೆ ಭುವಿ ಈ ದಾಖಲೆ ನಿರ್ಮಿಸಿದ್ದಾರೆ.

ಪಂದ್ಯದ 5ನೇ ಓವರ್‌ನಲ್ಲಿ ಭುವನೇಶ್ವರ್ 6 ವರ್ಷಗಳ ನಂತರ ಮೊದಲ ನೋ ಬಾಲ್ ಎಸೆದರು. ನೋ ಬಾಲ್ ಗೆರೆ ದಾಟಿ ಭುವಿ ಬೌಲಿಂಗ್ ಮಾಡಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಆದರೆ ವಿಶೇಷವೆಂದರೆ ಭುವಿ ಕಡೇಯಸಾರಿ ನೋ ಬಾಲ್ ಹಾಕಿದ್ದು 2015 ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ.

ಲಿಯೋನೆಲ್ ಮೆಸ್ಸಿ, ಕ್ರಿಸ್ಚಿಯಾನೊ ರೊನಾಲ್ಡೋ ಭಾರತದಲ್ಲಿ ಬೀಡಿ ಪ್ರಚಾರ ಮಾಡ್ತಿದ್ದಾರಾ?!ಲಿಯೋನೆಲ್ ಮೆಸ್ಸಿ, ಕ್ರಿಸ್ಚಿಯಾನೊ ರೊನಾಲ್ಡೋ ಭಾರತದಲ್ಲಿ ಬೀಡಿ ಪ್ರಚಾರ ಮಾಡ್ತಿದ್ದಾರಾ?!

Deepak Chahar ಪಂದ್ಯ ಶ್ರೇಷ್ಠ ಗೆದ್ದ ನಂತರ ಹೇಳಿದ್ದೇನು | Oneindia Kannada

ಅದಾಗಿ ಇಲ್ಲೀವರೆಗೂ ಭುವಿ ಒಂದೇ ಒಂದು ನೋ ಬಾಲ್ ಹಾಕಿರಲಿಲ್ಲ. ಅಂದರೆ ಭರ್ಜರಿ 3903 ಎಸೆತಗಳ ಬಳಿಕ ಭುವನೇಶ್ವರ್ ಮೊದಲ ನೋ ಬಾಲ್ ಹಾಕಿದ್ದರು. ಪಂದ್ಯದಲ್ಲಿ ಒಟ್ಟು 10 ಓವರ್‌ ಎಸೆದಿದ್ದ ಭುವಿ 54 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಅವಿಷ್ಕಾ ಫೆರ್ನಾಂಡೋ, ಚರಿತ್ ಅಸಲಂಕಾ ಮತ್ತು ದುಷ್ಮಂತ ಚಮೀರ ವಿಕೆಟ್‌ಗಳು ಭುವಿಗೆ ಸಿಕ್ಕಿದ್ದವು.

Story first published: Wednesday, July 21, 2021, 14:10 [IST]
Other articles published on Jul 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X