ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಸರಣಿ: ಶ್ರೀಲಂಕಾ ವಿರುದ್ಧ ಸರಣಿ ಕ್ಲೀನ್‌ಸ್ವೀಪ್ ಮಾಡಿದ ದ.ಆಫ್ರಿಕಾ

Sri Lanka vs South Africa, 3rd T20I: South Africa won the match and series by 3-0

ಕೊಲಂಬೋ, ಸೆಪ್ಟೆಂಬರ್ 14: ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳು ಟಿ20 ಸರಣಿಯಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಮುಖಾಮುಖಿಯಾಲ್ಲಿಯೂ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಮೂರನೇ ಪಂದ್ಯವನ್ನು ಕೂಡ ಗೆದ್ದು ಬೀಗಿದೆ. ಅಂತಿಮ ಪಂದ್ಯವನ್ನಾದರೂ ಗೆದ್ದು ವೈಟ್‌ವಾಶ್ ಅವಮಾನದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟ ಶ್ರೀಲಂಕಾ ಅದರಲ್ಲಿ ವಿಫಲವಾಗಿದ್ದು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸರಣಿಯನ್ನು 0-3 ಅಂತರದಿಂದ ಒಪ್ಪಿಸಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲಿಗೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಆದರೆ ಈ ಪಂದ್ಯದಲ್ಲಿಯೂ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ವೈಫಲ್ಯವನ್ನು ಅನುಭವಿಸಿದೆ. ನಿಗದಿತ 20 ಓವರ್‌ಗಳಲ್ಲಿ ಲಂಕಾ ತಂಡ ಕೇವಲ 120 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿದೆ. ಶ್ರೀಲಂಕಾ ತಂಡದ ಪರವಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುಸಲ್ ಪೆರೆರಾ ಮಾತ್ರವೇ 39 ರನ್‌ಗಳಿಸುವ ಮೂಲಕ ಸ್ವಲ್ಪ ಪ್ರತಿರೋಧವನ್ನು ಒಡ್ಡುವಲ್ಲಿ ಯಶಸ್ವಿಯಾಗಿದರು

ಅಂತಿಮ ಹಂತದಲ್ಲಿ ಚಮೀಕಾ ಕರುಣರತ್ನೆ 24 ರನ್‌ಗಳ ಕೊಡುಗೆ ನೀಡಿದ್ದು ಲಂಕಾ 120ರ ಗಡಿ ತಲುಪಲು ಸಾಧ್ಯವಾಗಿಸಿತು. ದಕ್ಷಿಣ ಆಫ್ರಿಕಾದ ವೇಗಿ ಬಿಯೋನ್ ಫೊರ್ಟೈನ್ ಹಾಗೂ ಕಗಿಸೋ ರಬಡಾ ತಲಾ ಎರಡು ವಿಕೆಟ್ ಕಿತ್ತು ಮಿಂಚಿದ್ದರೆ ಮಾರ್ಕ್ರಂ, ನಾಯಕ ಮಹರಾಜ್ ಹಾಗೂ ಮಲ್ಡರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ದಾರೆ.

ಇನ್ನು ಶ್ರೀಲಂಕಾ ನೀಡಿದ 121 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಲು ಆರಂಭಿಸಿತು. ಆರಂಭಿಕರಾದ ಕ್ವಿಂಡನ್ ಡಿಕಾಕ್ ಹಾಗೂ ರೀಜಾ ಹೆಂಡ್ರಿಕ್ಸ್ ಉತ್ತಮ ಪ್ರದರ್ಶನ ನೀಡುವ ಮೂಲಕ ದಕ್ಷಿಣ ಆಫ್ರಿಕಾ ಮತ್ತೊಂದು ಸುಲಭ ಗೆಲುವು ಸಾಧಿಸಲು ಕಾರಣರಾದರು. ದಕ್ಷಿಣ ಆಫ್ರಿಕಾದ ಈ ಆರಂಭಿಕ ಜೋಡಿ ಅಜೇಯವಾಗುಳಿದು ತಂಡವನ್ನು ಗೆಲ್ಲಿಸಿದ್ದಲ್ಲದೆ ಇಬ್ಬರು ಕೂಡ ಅರ್ಧ ಶತಕದ ಸಾಧನೆ ಮಾಡಿದ್ದಾರೆ. ಹೆಂಡ್ರಿಕ್ಸ್ 42 ಎಸೆತಗಳಲ್ಲಿ 56 ರನ್‌ಗಳಿಸಿದರೆ ಡಿಕಾಕ್ 59 ರನ್‌ಗಳಿಸಿದ್ದಾರೆ.

ಇನ್ನು ಈ ಸರಣಿಯ ಮೊದಲ ಎರಡು ಪಂದ್ಯಗಳನ್ನು ಕೂಡ ದಕ್ಷಿಣ ಆಫ್ರಿಕಾ ಗೆದ್ದು ಬೀಗಿತ್ತು. ಮೊದಲ ಪಂದ್ಯದಲ್ಲಿ 28 ರನ್‌ಗಳಿಂದ ಆತಿಥೇಯ ತಂಡವನ್ನು ಮಣಿಸಿದ್ದ ದಕ್ಷಿಣ ಆಫ್ರಿಕಾ ಎರಡನೇ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಅಮೋಘ ಗೆಲುವು ಸಾಧಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಕೂಡ 10 ವಿಕೆಟ್‌ಗಳ ದೊಡ್ಡ ಅಂತರದಿಂದ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಿದೆ. ಇನ್ನು ಇದಕ್ಕೂ ಮುನ್ನ ನಡೆದ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡ 2-1 ಅಂತರದಿಂದ ಪ್ರವಾಸಿ ಆಫ್ರಿಕಾ ತಂಡವನ್ನು ಮಣಿಸಿತ್ತು. ಈ ಸೋಲಿಗೆ ಪ್ರವಾಸಿ ತಂಡ ಸೋಲು ತೀರಿಸಿಕೊಂಡಿದೆ.

ಶ್ರೀಲಂಕಾ ಆಡುವ ಬಳಗ: ಕುಸಲ್ ಪೆರೇರಾ (ವಿಕೆಟ್ ಕೀಪರ್), ಅವಿಷ್ಕಾ ಫೆರ್ನಾಂಡೊ, ಭಾನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಕಮಿಂಡು ಮೆಂಡಿಸ್, ದಾಸುನ್ ಶನಕ (ನಾಯಕ), ವಾನಿಂದು ಹಸರಂಗ, ಚಾಮಿಕ ಕರುಣರತ್ನೆ, ಲಹಿರು ಮಧುಶಂಕ, ದುಷ್ಮಂತ ಚಮೀರ, ಮಹೀಶ್ ತೀಕ್ಷ್ಣ

IPL ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಸಕ್ಸಸ್ ವಿರಾಟ್ ಮತ್ತು ABD ಗೆ‌ ಇನ್ನೂ ಸಿಕ್ಕಿಲ್ಲ | Oneindia Kannada

ದಕ್ಷಿಣ ಆಫ್ರಿಕಾ ಆಡುವ ಬಳಗ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಮ್, ರಾಸ್ಸಿ ವ್ಯಾನ್ ಡೆರ್ ಡಸೆನ್, ಹೆನ್ರಿಕ್ ಕ್ಲಾಸೆನ್, ದ್ವೇನ್ ಪ್ರಿಟೋರಿಯಸ್, ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್ (ನಾಯಕ), ಕಾಗಿಸೊ ರಬಾಡಾ, ಬಿಯೋನ್ ಫೊರ್ಟೈನ್, ತಬ್ರೇಜ್ ಶಮ್ಸಿ

Story first published: Tuesday, September 14, 2021, 22:15 [IST]
Other articles published on Sep 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X