ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಮನ್ಸ್, ಪೊಲಾರ್ಡ್, ರಸೆಲ್ ಅಬ್ಬರದಾಟಕೆ ಶರಣಾದ ಶ್ರೀಲಂಕಾ

Sri Lanka vs West Indies, 1st T20I - Live match update

ಪಲ್ಲೆಕೆಲೆ, ಮಾರ್ಚ್ 4: ಶ್ರೀಲಂಕಾ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡ, ಪಲ್ಲೆಕೆಲೆ ಇಂಟರ್ ನ್ಯಾಷನಲ್ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಬುಧವಾರ (ಮಾರ್ಚ್ 4) ನಡೆದ ಮೊದಲನೇ ಟಿ20ಐ ಪಂದ್ಯದಲ್ಲಿ 25 ರನ್ ಜಯ ಗಳಿಸಿದೆ. ಲೆಂಡ್ಲ್ ಸಿಮ್ಮನ್ಸ್, ಕೀರನ್ ಪೊಲಾರ್ಡ್ ಮತ್ತು ಆ್ಯಂಡ್ರೆ ರಸೆಲ್ ಅಬ್ಬರದ ಬ್ಯಾಟಿಂಗ್‌ನಿಂದಾಗಿ ವಿಂಡೀಸ್ ಗೆಲುವು ಕಂಡಿತು.

ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್‌, ಲೆಂಡ್ಲ್ ಸಿಮ್ಮನ್ಸ್ ಅಜೇಯ 67 (51 ಎಸೆತ), ಕೀರನ್ ಪೊಲಾರ್ಡ್ 34 (15 ಎಸೆತ) ಮತ್ತು ಆ್ಯಂಡ್ರೆ ರಸೆಲ್ 34 (15 ಎಸೆತ) ರನ್‌ನೊಂದಿಗೆ ವಿಂಡೀಸ್ 20 ಓವರ್‌ಗೆ 196 ರನ್ ಕಲೆ ಹಾಕಿತ್ತು.

ಶ್ರೀಲಂಕಾ vs ವೆಸ್ಟ್ ಇಂಡೀಸ್, 1ನೇ ಟಿ20ಐ, ಸ್ಕೋರ್‌ಕಾರ್ಡ್

1
47848

ಗುರಿ ಬೆನ್ನಟ್ಟಿದ ಶ್ರೀಲಂಕಾ, ಕುಸಾಲ್ ಪೆರೆರಾ 66, ವನಿಂದು ಹಸರಂಗ 44 ರನ್‌ ಕೊಡುಗೆಯೊಂದಿಗೆ 19.1ನೇ ಓವರ್‌ಗೆ ಸರ್ವ ಪತನ ಕಂಡು 172 ರನ್ ಗಳಿಸಲಷ್ಟೇ ಶಕ್ತವಾಯ್ತು. ಲಂಕಾ ಇನ್ನಿಂಗ್ಸ್‌ನಲ್ಲಿ ಒಶಾನೆ ಥಾಮನ್ 28 ರನ್ನಿಗೆ 5 ವಿಕೆಟ್ ಮುರಿದು ಪಾರಮ್ಯ ಮೆರೆದರು.

ವೆಸ್ಟ್ ಇಂಡೀಸ್ ತಂಡ: ಲೆಂಡ್ಲ್ ಸಿಮ್ಮನ್ಸ್, ಬ್ರಾಂಡನ್ ಕಿಂಗ್, ಶಿಮ್ರಾನ್ ಹೆಟ್ಮೈಯರ್, ನಿಕೋಲಸ್ ಪೂರನ್ (ವಿಕೆ), ಕೀರನ್ ಪೊಲಾರ್ಡ್ (ಸಿ), ರೋವ್ಮನ್ ಪೊವೆಲ್, ಆಂಡ್ರೆ ರಸ್ಸೆಲ್, ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೋ, ಓಶೇನ್ ಥಾಮಸ್, ಶೆಲ್ಡನ್ ಕಾಟ್ರೆಲ್.

ಮಹಿಳಾ ವರ್ಲ್ಡ್‌ಕಪ್ ಸೆಮಿಫೈನಲ್: ಇತಿಹಾಸ ನಿರ್ಮಿಸಲು ಟೀಮ್ ಇಂಡಿಯಾ ಸಜ್ಜುಮಹಿಳಾ ವರ್ಲ್ಡ್‌ಕಪ್ ಸೆಮಿಫೈನಲ್: ಇತಿಹಾಸ ನಿರ್ಮಿಸಲು ಟೀಮ್ ಇಂಡಿಯಾ ಸಜ್ಜು

ಶ್ರೀಲಂಕಾ ತಂಡ: ಅವಿಷ್ಕಾ ಫರ್ನಾಂಡೊ, ಕುಸಾಲ್ ಪೆರೆರಾ (ವಿಕೆ), ಕುಸಾಲ್ ಮೆಂಡಿಸ್, ಶೆಹನ್ ಜಯಸೂರ್ಯ, ಏಂಜೆಲೊ ಮ್ಯಾಥ್ಯೂಸ್, ದಾಸುನ್ ಶಾನಕಾ, ಥಿಸರಾ ಪೆರೆರಾ, ವನಿಂದು ಹಸರಂಗ, ಇಸುರು ಉದಾನ, ಲಸಿತ್ ಮಾಲಿಂಗ (ಸಿ), ಲಕ್ಷನ್ ಸಂದಕನ್.

Story first published: Wednesday, March 4, 2020, 23:20 [IST]
Other articles published on Mar 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X