ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಡಿಮೆ ವೇತನ ಒಪ್ಪಂದಕ್ಕೆ ಸಹಿ ಹಾಕಲು ಶ್ರೀಲಂಕಾ ಕ್ರಿಕೆಟರ್ಸ್ ನಕಾರ

Sri Lankan cricketers refuse to sign reduced pay contracts

ಕೊಲಂಬೋ: ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರರು ಶನಿವಾರ (ಜೂನ್ 5) ಕಡಿಮೆ ವೇತನ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ. ಶನಿವಾರ ಅವರಿಗೆ ಸಹಿ ಹಾಕಲು ಗಡುವು ನೀಡಲಾಗಿತ್ತಾದರೂ ಸಹಿ ಹಾಕಿಲ್ಲ. ಆದರೆ ಮುಂಬರಲಿರುವ ಇಂಗ್ಲೆಂಡ್ ಪ್ರವಾಸದಲ್ಲಿ ಪಾಲ್ಗೊಳ್ಳುವುದಾಗಿ ಆಟಗಾರರು ಹೇಳಿದ್ದಾರೆ.

ವಿರಾಟ್ ಕೊಹ್ಲಿ, ರವಿ ಶಾಸ್ತ್ರಿ ಮಾತುಕತೆಯ ಆಡಿಯೋ ತುಣುಕು ಲೀಕ್!ವಿರಾಟ್ ಕೊಹ್ಲಿ, ರವಿ ಶಾಸ್ತ್ರಿ ಮಾತುಕತೆಯ ಆಡಿಯೋ ತುಣುಕು ಲೀಕ್!

ಕ್ರಿಕೆಟ್ ಬೋರ್ಡ್‌ ನೂತನವಾಗಿ ತಂದಿರುವ ಪ್ರದರ್ಶನಕ್ಕನುಸಾರ ವೇತನ ಒಪ್ಪಂದಕ್ಕೆ ಕ್ರಿಕೆಟರ್‌ಗಳು ಸಹಿ ಹಾಕಲು ಒಪ್ಪಿಲ್ಲ. ಹೊಸ ಒಪ್ಪಂದ ರೂಪಿಸಿರುವ ಕ್ರಿಕೆಟ್ ಬೋರ್ಡ್ ಪ್ಯಾನೆಲ್‌ನಲ್ಲಿ ಆಸ್ಟ್ರೇಲಿಯಾದ ಮಾಜಿ ಸ್ಟಾರ್ ಟಾಮ್ ಮೂಡಿ ಕೂಡ ಇದ್ದರು ಎಂದು ಕ್ರಿಕೆಟರ್‌ಗಳ ಪ್ರತಿನಿಧಿ ಲಾಯರ್ ಹೇಳಿದ್ದಾರೆ.

'ವೇತನಕ್ಕೆ ಸಂಬಂಧಿಸಿದ ಘರ್ಷಣೆ ಬಗೆಹರಿಸುವವರೆಗೂ ವಾರ್ಷಿಕ ಮತ್ತು ಪ್ರವಾಸ ಒಪ್ಪಂದಗಳಿಗೆ ಸಹಿ ಹಾಕಲು ಕ್ರಿಕೆಟರ್‌ಗಳು ನಿರಾಕರಿಸಿದ್ದಾರೆ,' ಎಂದು ಲಾಯರ್ ಪ್ರೇಮತಿರತ್ನೆ ಹೇಳಿದ್ದಾರೆ. ಹೊಸ ಒಪ್ಪಂಕ್ಕೆ ಸಹಿ ಹಾಕಲು ಲಂಕಾ ಕ್ರಿಕೆಟರ್‌ಗಳಿಗೆ ಜೂನ್ 3ರಂದು ಕಡೆಯ ದಿನಾಂಕವೆಂದು ಹೇಳಲಾಗಿತ್ತು. ಆದರೆ ಮತ್ತೆ ದಿನಾಂಕವನ್ನು ಜೂನ್ 5ರ ಶನಿವಾರದ ವರೆಗೆ ವಿಸ್ತರಿಸಲಾಗಿತ್ತು.

ಭಾರತದಲ್ಲಿ ಟಿ20 ವಿಶ್ವಕಪ್‌ ನಡೆಸುವ ಬಿಸಿಸಿಐ ಆಸೆಗೆ ದೊಡ್ಡ ಹಿನ್ನಡೆ!ಭಾರತದಲ್ಲಿ ಟಿ20 ವಿಶ್ವಕಪ್‌ ನಡೆಸುವ ಬಿಸಿಸಿಐ ಆಸೆಗೆ ದೊಡ್ಡ ಹಿನ್ನಡೆ!

ಇದೇ ತಿಂಗಳ ಕೊನೆಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದ್ದು, ಪ್ರವಾಸವನ್ನು ಒಪ್ಪಂದವಿಲ್ಲದೆ ಆಡಲು ಲಂಕಾ ಕ್ರಿಕೆಟರ್ಸ್ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂಗ್ಲೆಂಡ್ ಪ್ರವಾಸ ಸರಣಿಯು 3 ಟಿ20ಐ ಮತ್ತು 3 ಏಕದಿನ ಪಂದ್ಯಗಳನ್ನು ಒಳಗೊಂಡಿರಲಿದೆ.

Story first published: Saturday, June 5, 2021, 18:23 [IST]
Other articles published on Jun 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X