ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೂನ್ 1ರಿಂದ ಮೈದಾನಕ್ಕಿಳಿಯಲು ಶ್ರೀಲಂಕಾ ಕ್ರಿಕೆಟಿಗರು ಸಜ್ಜು

Sri Lankan cricketers to resume training Monday

ಕೊಲಂಬೋ, ಮೇ 31: ಬೌಲರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ 13 ಮಂದಿ ಶ್ರೀಲಂಕಾ ಕ್ರಿಕೆಟಿಗರ ತಂಡ ಸೋಮವಾರದಿಂದ (ಜೂನ್ 1) ಮೈದಾನಕ್ಕಿಳಿಯಲಿದೆ, ಅಭ್ಯಾಸ ಆರಂಭಿಸಲಿದೆ. ಕೊರೊನಾ ವೈರಸ್‌ನಿಂದ ಕ್ರೀಡಾಚಟುವಟಿಕೆಗಳು ನಿಲುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ಲಂಕಾ ಆಟಗಾರರು ಅಭ್ಯಾಸಕ್ಕಾಗಿ ಮೈದಾನಕ್ಕಿಳಿಲಿದ್ದಾರೆ.

ವಿರಾಟ್ ಕೊಹ್ಲಿ ವೃತ್ತಿ ಜೀವನಕ್ಕೆ ತಿರುವು ನೀಡಿದ ವಿರಾಟ್ ಕೊಹ್ಲಿ ವೃತ್ತಿ ಜೀವನಕ್ಕೆ ತಿರುವು ನೀಡಿದ "ಆ" ಇನ್ನಿಂಗ್ಸ್!

'ಆಯ್ದ 13 ಮಂದಿಯ ತಂಡ ಕೊಲಂಬೋ ಕ್ರಿಕೆಟ್ ಕ್ಲಬ್‌ನಲ್ಲಿ 12 ದಿನಗಳ ವಸತಿ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದೆ,' ಎಂದು ಶ್ರೀಲಂಕಾ ಕ್ರಿಕೆಟ್‌ (ಎಸ್‌ಎಲ್‌ಸಿ) ಹೇಳಿಕೆ ಮೂಲಕ ತಿಳಿಸಿದೆ. ಕೊರೊನಾವೈರಸ್ ಕಾರಣ ಎಲ್ಲಾ ಆಟಗಾರರು ತಪ್ಪದೆ ಸರ್ಕಾರ ನೀಡಿರುವ ಆರೋಗ್ಯ ಸಂಬಂಧಿ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ.

ಟೆಸ್ಟ್‌ನಲ್ಲಿ ಅತೀ ಹೆಚ್ಚುಬಾರಿ 5+ ವಿಕೆಟ್ ಪಡೆದ ಮಾಂತ್ರಿಕ ಬೌಲರ್‌ಗಳುಟೆಸ್ಟ್‌ನಲ್ಲಿ ಅತೀ ಹೆಚ್ಚುಬಾರಿ 5+ ವಿಕೆಟ್ ಪಡೆದ ಮಾಂತ್ರಿಕ ಬೌಲರ್‌ಗಳು

'ಶಿಬಿರದಲ್ಲಿ ಭಾಗವಹಿಸುವ ಆಟಗಾರರು ಎಲ್ಲಾ ಮಾದರಿಗಳಿಂದ ಆಯ್ಕೆಯಾದ ಸಾಮಾನ್ಯ ತಂಡವನ್ನು ಪ್ರತಿನಿಧಿಸುತ್ತಾರೆ. ಇಲ್ಲಿರುವವರಲ್ಲಿ ಬೌಲರ್‌ಗಳು ಹೆಚ್ಚಿದ್ದಾರೆ. ಯಾಕೆಂದರೆ ಅವರು ಸ್ಪರ್ಧೆಗೆ ಹೋಗುವ ಮುನ್ನ ಅವರಿಗೆ ಕಂಡೀಶನಿಂಗ್‌ಗೆ ಹೆಚ್ಚು ಸಮಯ ಬೇಕಾಗುತ್ತದೆ,' ಎಂದು ಎಸ್‌ಎಲ್‌ಸಿ ಹೇಳಿದೆ.

'ಖೇಲ್ ರತ್ನ'ಕ್ಕೆ ರೋಹಿತ್ ಶರ್ಮಾ, 'ಅರ್ಜುನ'ಕ್ಕೆ ಧವನ್ ನಾಮನಿರ್ದೇಶನ'ಖೇಲ್ ರತ್ನ'ಕ್ಕೆ ರೋಹಿತ್ ಶರ್ಮಾ, 'ಅರ್ಜುನ'ಕ್ಕೆ ಧವನ್ ನಾಮನಿರ್ದೇಶನ

ಕ್ರೀಡಾ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯದ ಸಮಾಲೋಚನೆಯಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ಅಭ್ಯಾಸದ ವೇಳೆ ಪ್ರತೀ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಲಿದ್ದೇವೆ,' ಎಂದು ಲಂಕಾ ಕ್ರಿಕೆಟ್‌ ಮಾಹಿತಿ ನೀಡಿದೆ.

Story first published: Sunday, May 31, 2020, 16:08 [IST]
Other articles published on May 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X