ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ರಿಷಬ್ ಪಂತ್ ಸ್ಥಾನಕ್ಕೆ ಅಚ್ಚರಿಯ ಆಯ್ಕೆ!

Srikar Bharat Called In As Cover For Rishabh Pant

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್‌ ಕೀಪರ್ ರಿಷಬ್ ಪಂತ್ ಗಾಯಗೊಂಡಿದ್ದರು. ಬ್ಯಾಟಿಂಗ್ ವೇಳೆ ಗಾಯಗೊಂಡ ಪಂತ್ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಮೈದಾನಕ್ಕೆ ಇಳಿಯಕೇ ಇಲ್ಲ. ವಿಕೆಟ್‌ ಕೀಪರ್ ಸ್ಥಾನವನ್ನು ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್ ಕನ್ನಡಿಗ ಕೆಎಲ್ ರಾಹುಲ್ ವಹಿಸಿಕೊಂಡರು. ಈ ಮಧ್ಯೆ ಮೀಸಲು ವಿಕೆಟ್ ಕೀಪರ್‌ಅನ್ನು ಮ್ಯಾನೇಜ್‌ಮೆಂಟ್ ಕರೆಸಿಕೊಂಡಿದೆ.

ರಾಷ್ಟ್ರೀಯ ತಂಡದಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ಮಾಡಿದ್ದಾರೆ. ಹೀಗಾಗಿ ಮೀಸಲು ವಿಕೆಟ್ ಕೀಪರ್ ತಂಡಕ್ಕೆ ಅನಿವಾರ್ಯವಾಗಿದೆ. ಆದರೆ ಸದ್ಯ ತಂಡಕ್ಕೆ ಸೇರ್ಪಡೆಯಾಗಿರುವ ಮೀಸಲು ಆಟಗಾರ ಆಯ್ಕೆ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿದೆ.

ಅದೃಷ್ಟವಿಲ್ಲದ ಅಂಗಳದಲ್ಲಿ ಅದೃಷ್ಟ ಹುಡುಕಲು ಹೊರಟ ಭಾರತಅದೃಷ್ಟವಿಲ್ಲದ ಅಂಗಳದಲ್ಲಿ ಅದೃಷ್ಟ ಹುಡುಕಲು ಹೊರಟ ಭಾರತ

ಶ್ರೀಕರ್ ಭರತ್ ರಿಷಬ್ ಪಂತ್ ಸ್ಥಾನಕ್ಕೆ ಮೀಸಲು ಆಟಗಾರನಾಗಿ ಆಯ್ಕೆಯಾಗಿರುವ ಆಟಗಾರ. ಆದರೆ ಭರತ್ ಲಿಸ್ಟ್ ಎ ಪಂದ್ಯಗಳ ದಾಖಲೆ ಆಯ್ಕೆಯನ್ನು ಆಶ್ಚರ್ಯದಿಂದ ನೋಡುವಂತೆ ಮಾಡುತ್ತದೆ. ಹಾಗಿದ್ದರೂ ಬಿಸಿಸಿಐ ಈ ಆಯ್ಕೆ ಮಾಡಿರುವುದು ಗೊಂದಲ ಮೂಡಿಸಿದೆ.

51 ದೇಸೀ ಪಂದ್ಯಗಳಲ್ಲಿ ಶ್ರೀಧರ್ 28ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಸ್ಟ್ರೇಕ್ ರೇಟ್‌ ಕೇವಲ 69 ರನ್. ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ನಡೆದ ಐತಿಹಾಸಿಕ ಡೇ-ನೈಟ್ ಟೆಸ್ಟ್ ಸಂದರ್ಭದಲ್ಲೂ ವೃದ್ಧಿಮಾನ್ ಸಾಹಾ ಗೆ ಮೀಸಲು ವಿಕೆಟ್‌ ಕೀಪರ್ ಆಗಿ ತಂಡದಲ್ಲಿದ್ದರು.

ಕೊಹ್ಲಿ 'ಸ್ಪಿರಿಟ್ ಆಫ್ ಕ್ರಿಕೆಟ್‌' ಪ್ರಶಸ್ತಿ ಪಡೆದ ಬಳಿಕ ಪಾಕ್ ವೇಗಿಯ ಪ್ರತಿಕ್ರಿಯೆ ನೋಡಿ!ಕೊಹ್ಲಿ 'ಸ್ಪಿರಿಟ್ ಆಫ್ ಕ್ರಿಕೆಟ್‌' ಪ್ರಶಸ್ತಿ ಪಡೆದ ಬಳಿಕ ಪಾಕ್ ವೇಗಿಯ ಪ್ರತಿಕ್ರಿಯೆ ನೋಡಿ!

ಸಂಜು ಸ್ಯಾಮ್ಸನ್ ನ್ಯೂಜಿಲ್ಯಾಂಡ್ ಎ ತಂಡದ ವಿರುದ್ಧ ಆಡಲು ನ್ಯೂಜಿಲ್ಯಾಂಡ್‌ ಪ್ರವಾಸಕ್ಕೆ ತೆರಳಿದ್ದಾರೆ. ವೃದ್ಧಿಮಾನ್ ಸಾಹಾ ಏಕದಿನದಲ್ಲಿ ಉತ್ತಮ ಆಯ್ಕೆಯಲ್ಲ ಎಂದು ತೀರ್ಮಾನಿಸಿದ್ದಾರೆ. ಹೀಗಾಗಿ ಆಯ್ಕೆಗಾರರು ಮತ್ತೆ ಶ್ರೀಕರ್ ಭರತ್ ಆಯ್ಕೆ ಮಾಡಿದ್ದಾರೆ. ಮೂರನೇ ಪಂದ್ಯದಲ್ಲಿ ರಿಷಬ್ ಪಂತ್ ಟೀಮ್ ಇಂಡಿಯಾವನ್ನು ಸೇರ್ಪಡೆಗೊಳ್ಳಲಿದ್ದಾರೆ.

Story first published: Friday, January 17, 2020, 15:12 [IST]
Other articles published on Jan 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X