ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶದಲ್ಲಿ ಇಬ್ಬರಾದ್ರೂ ಪ್ರಮುಖ ಬೌಲರ್‌ಗಳಿದ್ದಾರೆ, ನಿಮ್ಮ ಬಳಿ ಯಾರಿದ್ದಾರೆ? ಲಂಕಾಗೆ ಮಾತಿನ ತಿರುಗೇಟು

Srilanka vs Bangladesh

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಅತ್ಯಂತ ಮಹತ್ವದ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ನಡುವೆ ಕಿಚ್ಚು ಹೆಚ್ಚಿದೆ. ಇದಕ್ಕೆ ಕಾರಣ ಉಭಯ ತಂಡಗಳ ಆಟಗಾರರ ನಡುವಿನ ಮಾತಿನ ಸಮರವಾಗಿದೆ.

ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಸೆಪ್ಟೆಂಬರ್ 1ರ ರಾತ್ರಿ ನಡೆಯಲಿರುವ ಪಂದ್ಯವು ಉಭಯ ತಂಡಗಳಿಗೆ ಡೂ ಆರ್ ಡೈ ಪರಿಸ್ಥಿತಿ ನಿರ್ಮಿಸಿದೆ. ಸೋತ ತಂಡವು ಟೂರ್ನಿಯಿಂದ ನಿರ್ಗಮಿಸಿದ್ರೆ, ಗೆದ್ದ ತಂಡವು ಗ್ರೂಪ್‌ ಬಿಯಿಂದ ಸೂಪರ್ 4ಗೆ ಎಂಟ್ರಿಯಾಗಲಿರುವ ಎರಡನೇ ತಂಡವಾಗಲಿದೆ. ಈಗಾಗಲೇ ಅಫ್ಘಾನಿಸ್ತಾನ ಎರಡೂ ಪಂದ್ಯಗಳನ್ನ ಜಯಿಸಿ ಅಗ್ರ ತಂಡವಾಗಿ ಸೂಪರ್ 4 ಪ್ರವೇಶಿಸಿದೆ.

ನಮ್ಮ ಬಳಿ ಇಬ್ಬರಾದ್ರೂ ವರ್ಲ್ಡ್ ಕ್ಲಾಸ್ ಬೌಲರ್‌ಗಳಿದ್ದಾರೆ!

ನಮ್ಮ ಬಳಿ ಇಬ್ಬರಾದ್ರೂ ವರ್ಲ್ಡ್ ಕ್ಲಾಸ್ ಬೌಲರ್‌ಗಳಿದ್ದಾರೆ!

ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಸನು ಶನಕ ಹೇಳಿಕೆಯನ್ನ ಉದ್ದೇಶಿಸಿ ಮಾತನಾಡಿರುವ ಬಾಂಗ್ಲಾದೇಶ ಟೀಂ ಡೈರೆಕ್ಟರ್ ಖಲೀದ್ ಮಹಮ್ಮದ್ ಸುಜೋನ್ ಲಂಕಾ ನಾಯಕನ ವಿರುದ್ಧ ತೀವ್ರವಾಗಿ ಹರಿಯಾಯ್ದಿದ್ದಾರೆ. ಬಾಂಗ್ಲಾದೇಶ ಬೌಲಿಂಗ್ ದಾಳಿ ಕುರಿತು ಮಾತನಾಡಿರುವ ಲಂಕಾ ನಾಯಕನಿಗೆ ಸುಜೋನ್ ಬಿಸಿ ಮುಟ್ಟಿಸಿದ್ದಾರೆ. 'ಬಾಂಗ್ಲಾದೇಶ ಕನಿಷ್ಠ ಇಬ್ಬರಾದ್ರೂ ವರ್ಲ್ಡ್‌ ಕ್ಲಾಸ್ ಬೌಲರ್‌ ಹೊಂದಿದೆ'' ಎಂದು ಹೇಳುವ ಮೂಲಕ ನಿಮ್ಮ ಬಳಿ ಯಾರಿದ್ದಾರೆ ಎಂದು ಪರೋಕ್ಷವಾಗಿ ಲಂಕಾವನ್ನ ಪ್ರಶ್ನಿಸಿದ್ದಾರೆ.

ಏಷ್ಯಾ ಕಪ್: ಶ್ರೀಲಂಕಾಗೆ ಬಾಂಗ್ಲಾದೇಶ ಸವಾಲು: ಪೈಪೋಟಿಯಲ್ಲಿ ಮೇಲುಗೈ ಸಾಧಿಸುವವರು ಯಾರು?

ಬಾಂಗ್ಲಾ ತಂಡದಲ್ಲಿ ಇಬ್ಬರೇ ಪ್ರಮುಖ ಬೌಲರ್ ಎಂದಿದ್ದ ಲಂಕಾ ನಾಯಕ

ಬಾಂಗ್ಲಾ ತಂಡದಲ್ಲಿ ಇಬ್ಬರೇ ಪ್ರಮುಖ ಬೌಲರ್ ಎಂದಿದ್ದ ಲಂಕಾ ನಾಯಕ

ಶ್ರೀಲಂಕಾ ತಂಡದ ನಾಯಕ ದಸನು ಶನಕ ಬಾಂಗ್ಲಾದೇಶ ಬೌಲಿಂಗ್ ಅಟ್ಯಾಕ್ ಅನ್ನು ಅಫ್ಘಾನಿಸ್ತಾನಕ್ಕೆ ಹೋಲಿಸಿ, '' ನಮಗೆ ತಿಳಿದಿದೆ ಫಿಜ್ (ಮುಸ್ತಫಿಜುರ್ ರಹಮಾನ್) ಉತ್ತಮ ಬೌಲರ್ ಎಂದು. ಶಕೀಬ್ ಅಲ್ ಹಸನ್ ಕೂಡ ವರ್ಲ್ಡ್‌ ಕ್ಲಾಸ್ ಬೌಲರ್ ಆಗಿದ್ದಾರೆ. ಇವರಿಬ್ಬರನ್ನ ಹೊರತುಪಡಿಸಿ, ಬೇರೆ ಯಾವೊಬ್ಬರೂ ವರ್ಲ್ಡ್‌ ಕ್ಲಾಸ್ ಬೌಲರ್ ಅವರ ತಂಡದಲ್ಲಿಲ್ಲ. ಹೀಗಾಗಿ ಅಫ್ಘಾನಿಸ್ತಾನಕ್ಕೆ ಹೋಲಿಕೆ ಮಾಡಿದ್ರೆ, ಬಾಂಗ್ಲಾದೇಶ ಸುಲಭ ಎದುರಾಳಿ'' ಎಂದು ಶನಕ ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧದ ಅವರ ಪಂದ್ಯದ ಮೊದಲು, ಬಾಂಗ್ಲಾದೇಶದ ತಂಡದ ನಿರ್ದೇಶಕ ಖಲೀದ್ ಮಹಮೂದ್ ಅವರನ್ನು ಶನಕಾ ಅವರ ತಂಡದ ಬಗ್ಗೆ ಪ್ರತಿಕ್ರಿಯಿಸಲು ಕೇಳಲಾಯಿತು. ಬಾಂಗ್ಲಾದೇಶದ ಮಾಜಿ ನಾಯಕ ಶ್ರೀಲಂಕಾದಲ್ಲಿ "ಗುಣಮಟ್ಟದ ಬೌಲರ್‌ಗಳಿಲ್ಲ" ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಉಭಯ ತಂಡಗಳು ಈಗಾಗಲೇ ಅಫ್ಘಾನಿಸ್ತಾನ ವಿರುದ್ಧ ಸೋತಿದ್ದರ ಪರಿಣಾಮ ಈ ಪಂದ್ಯವನ್ನ ಗೆಲ್ಲಲೇಬೇಕಿದೆ.

ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ ರೋಹಿತ್, ಕೊಹ್ಲಿ: ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌

Virat Kohliಗೆ ಮರೆಯಲಾಗದ ಗಿಫ್ಟ್ ಕೊಟ್ಟ ಹಾಂಗ್ ಕಾಂಗ್ ಕ್ರಿಕೆಟ್ | *Cricket | OneIndia Kannada
ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸಂಭಾವ್ಯ ಪ್ಲೇಯಿಂಗ್ 11

ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸಂಭಾವ್ಯ ಪ್ಲೇಯಿಂಗ್ 11

ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್ 11
ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ದಿಲ್ಷ್ಯಾನ್ ಮಧುಶಂಕ, ಮತೀಶ ಪತಿರಣ

ಬಾಂಗ್ಲಾದೇಶ ಸಂಭಾವ್ಯ ಪ್ಲೇಯಿಂಗ್ 11
ಮೊಹಮ್ಮದ್ ನಯಿಮ್, ಅನಾಮುಲ್ ಹಕ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮುಷ್ಫೀಕರ್ ರಹೀಮ್ (ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ಮಹಮ್ಮದುಲ್ಲಾ, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರಹಮಾನ್

Story first published: Thursday, September 1, 2022, 15:29 [IST]
Other articles published on Sep 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X