ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾರ್ಬಡೋಸ್ ಟೆಸ್ಟ್: ಶ್ರೀಲಂಕಾಕ್ಕೆ ಐತಿಹಾಸಿಕ ಜಯ

srilanka vs west indies 3rd test: srilanka levelled series

ಬ್ರಿಡ್ಜ್‌ಟೌನ್‌, ಜೂನ್ 27: ಚೆಂಡು ವಿರೂಪ ಪ್ರಕರಣ ಮತ್ತು ವಿವಾದದಿಂದ ಕಂಗೆಟ್ಟಿದ್ದ ಶ್ರೀಲಂಕಾ ತಂಡಕ್ಕೆ ಗೆಲುವಿನ ಚೈತನ್ಯ ದೊರೆತಿದೆ.

ದಿನೇಶ್ ಚಂಡಿಮಾಲ್ ಮೇಲಿನ ನಿಷೇಧ ಜಾರಿಯಾದ ಕಾರಣ, ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮುನ್ನಡೆಸುವ ಹೊಣೆಯನ್ನು ವಹಿಸಿಕೊಂಡ ವೇಗದ ಬೌಲರ್ ಸುರಂಗಾ ಲಕ್ಮಲ್, ಮೊದಲ ಪಂದ್ಯದಲ್ಲಿಯೇ ಗೆಲುವಿನ ಕಾಣಿಕೆ ಪಡೆದರು.

ಅಲ್ಲದೆ, ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸುವುದರ ಮೂಲಕ ವೆಸ್ಟ್ ಇಂಡೀಸ್ ಜತೆ ಟ್ರೋಫಿಯನ್ನು ಹಂಚಿಕೊಂಡರು.

ಶ್ರೀಲಂಕಾ-ವೆಸ್ಟ್ ಇಂಡೀಸ್‌: ಕುತೂಹಲಕಾರಿ ಘಟ್ಟಕ್ಕೆ ಬಾರ್ಬಡೋಸ್ ಟೆಸ್ಟ್ ಶ್ರೀಲಂಕಾ-ವೆಸ್ಟ್ ಇಂಡೀಸ್‌: ಕುತೂಹಲಕಾರಿ ಘಟ್ಟಕ್ಕೆ ಬಾರ್ಬಡೋಸ್ ಟೆಸ್ಟ್

ಬಾರ್ಬಡೋಸ್‌ನಲ್ಲಿ ಗೆಲುವು ಪಡೆದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಶ್ರೀಲಂಕಾ ಪಾತ್ರವಾಯಿತು.

ಗೆಲುವಿನ ಬಾಕಿ 63 ರನ್‌ಗಳ ಗುರಿಯೊಂದಿಗೆ ನಾಲ್ಕನೆ ದಿನದ ಆಟ ಆರಂಭಿಸಿದ ಶ್ರೀಲಂಕಾ ತಂಡ ಆರಂಭದಲ್ಲಿಯೇ ಆಘಾತ ಅನುಭವಿಸಿತು. 81 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ಲಂಕಾಕ್ಕೆ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ನಡುಕ ಹುಟ್ಟಿಸಿದರು.

ಹಿಂದಿನ ದಿನದ ಮೊತ್ತಕ್ಕೆ ಒಂದು ರನ್ ಪೇರಿಸಲೂ ಅವಕಾಶ ನೀಡದ ಹೋಲ್ಡರ್, ಮೊದಲ ಓವರ್‌ನಲ್ಲಿಯೇ ಕುಸಾಲ್ ಮೆಂಡಿಸ್ ವಿಕೆಟ್ ಪಡೆದರು.

srilanka vs west indies 3rd test: srilanka levelled series

ಇದರಿಂದ ಪಂದ್ಯ ಮತ್ತಷ್ಟು ರೋಚಕವಾಗುವ ಸೂಚನೆ ನೀಡಿತು. ಮೂರನೇ ದಿನದ ಆಟದ ವೇಳೆ ಜಾಹಿರಾತು ಫಲಕಕ್ಕೆ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಕುಸಾಲ್ ಪೆರೇರಾ, ಗಾಯದಿಂದ ಚೇತರಿಸಿಕೊಂಡು ಕ್ರೀಸ್‌ಗೆ ಇಳಿದರು.

ದಿಲ್ರುವಾನ್ ಪೆರೇರಾ ಅವರ ಜತೆಗೂಡಿದ ಕುಸಾಲ್, ಮುಂದೆ ತಂಡ ಯಾವುದೇ ಸಮಸ್ಯೆಗೆ ಸಿಲುಕಲು ಆಸ್ಪದ ನೀಡಲಿಲ್ಲ. ಎಚ್ಚರಿಕೆಯ ಆಟದ ಮೊರೆ ಹೋದ ಇಬ್ಬರೂ, ಅವಕಾಶ ಸಿಕ್ಕಲ್ಲೆಲ್ಲ ರನ್ ಕದಿಯುವುದನ್ನು ಮರೆಯಲಿಲ್ಲ.

ಮತ್ತೆ ಅಬ್ಬರಿಸಿದ ಮಯಂಕ್: ಇಂಗ್ಲೆಂಡ್ ಲಯನ್ಸ್ ವಿರುದ್ಧ ಗೆಲುವು ಮತ್ತೆ ಅಬ್ಬರಿಸಿದ ಮಯಂಕ್: ಇಂಗ್ಲೆಂಡ್ ಲಯನ್ಸ್ ವಿರುದ್ಧ ಗೆಲುವು

ತಂಡಕ್ಕೆ ಗೆಲುವಿಗೆ ಬೇಕಿದ್ದ 63 ರನ್‌ಗಳನ್ನು ಇಬ್ಬರೂ 16 ಓವರ್‌ಗಳಲ್ಲಿ ಕಲೆಹಾಕಿ ತಂಡಕ್ಕೆ ಗೆಲುವಿನ ಸಮಾಧಾನ ನೀಡಿದರು.

ಇದುವರೆಗೂ ಏಷ್ಯಾದ ಯಾವ ತಂಡವೂ ಬಾರ್ಬಡೋಸ್‌ನಲ್ಲಿ ವಿಂಡೀಸ್ ಎದುರು ಗೆದ್ದಿರಲಿಲ್ಲ. 1988ರಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತಂಡ, 1993ರಲ್ಲಿ ವಾಸಿಂ ಅಕ್ರಂ ನಾಯಕತ್ವದ ತಂಡ, 2002ರಲ್ಲಿ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡ, 2011ರಲ್ಲಿ ಎಂಎಸ್ ಧೋನಿ ನಾಯಕತ್ವದ ತಂಡ ಮತ್ತು 20170ರಲ್ಲಿ ಮಿಸ್ಬಾ ಉಲ್ ಹಕ್ ನಾಯಕತ್ವದ ಪಾಕಿಸ್ತಾನ ತಂಡ ಇಲ್ಲಿ ಟೆಸ್ಟ್ ಆಡಿದ್ದರೂ, ಗೆಲುವು ಸಾಧಿಸುವಲ್ಲಿ ವಿಫಲವಾಗಿದ್ದವು.

ಆದರೆ ಇಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲಿಯೇ ಹೊಸ ನಾಯಕ ಸುರಂಗಾ ಲಕ್ಮಲ್ ನೇತೃತ್ವದಲ್ಲಿ ಶ್ರೀಲಂಕಾ ಐತಿಹಾಸಿಕ ಸಾಧನೆ ಮಾಡಿದೆ.

ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್: 204 ಮತ್ತು 93
ಶ್ರೀಲಂಕಾ: 154 ಮತ್ತು 6 ವಿಕೆಟ್ ನಷ್ಟಕ್ಕೆ 144.
ಫಲಿತಾಂಶ: ಶ್ರೀಲಂಕಾಕ್ಕೆ 4 ವಿಕೆಟ್ ಗೆಲುವು ಮತ್ತು ಮೂರು ಪಂದ್ಯಗಳ ಸರಣಿ 1-1ರಿಂದ ಸಮ
ಪಂದ್ಯಶ್ರೇಷ್ಠ: ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್)
ಸರಣಿ ಶ್ರೇಷ್ಠ: ಶೇನ್ ಡೌರಿಚ್ (ವೆಸ್ಟ್ ಇಂಡೀಸ್)

Story first published: Wednesday, June 27, 2018, 16:03 [IST]
Other articles published on Jun 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X