ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಗೆಲ್ಲಿಸುವುದಾಗಿ ಮೈದಾನಕ್ಕೆ ನುಗ್ಗಿದ್ದ 'ಜಾರ್ವೋ 69'ಗೆ ಆಜೀವ ನಿಷೇಧ!

Stadium intruder Jarvo 69 fined and banned for life from Headingley

ಲೀಡ್ಸ್: ಭಾರತ ಇಂಗ್ಲೆಂಡ್ ಟೆಸ್ಟ್‌ ಪಂದ್ಯಗಳ ವೇಳೆ ಆಟದ ಮಧ್ಯೆ ಮೈದಾನಕ್ಕೆ ನುಗ್ಗಿ ಟೀಮ್ ಇಂಡಿಯಾ ಪರ ಆಡಲು ಸಜ್ಜಾಗಿದ್ದ ಯೂಟ್ಯೂಬರ್ ಡೇನಿಯಲ್ ಜಾರ್ವಿಸ್ ಯಾನೆ 'ಜಾರ್ವೋ 69'ಗೆ ಅವರಿಗೆ ಜೀವನ ಪರ್ಯಂತ ನಿಷೇಧ ಹೇರಲಾಗಿದೆ. ಸುರಕ್ಷಾ ಕ್ರಮಗಳನ್ನು ಮೀರಿ ಮೈದಾನಕ್ಕೆ ಪ್ರವೇಶಿಸಿದ್ದರಿಂದ 'ಜಾರ್ವೋ 69' ಮೇಲೆ ಆಜೀವ ನಿಷೇಧ ಹೇರಿರುವುದಾಗಿ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಮೂಲ ಶನಿವಾರ (ಆಗಸ್ಟ್ 28) ತಿಳಿಸಿದೆ.

4ನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆಯಾಗುವ ಸುಳಿವಿತ್ತ ವಿರಾಟ್ ಕೊಹ್ಲಿ!4ನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆಯಾಗುವ ಸುಳಿವಿತ್ತ ವಿರಾಟ್ ಕೊಹ್ಲಿ!

'ಜಾರ್ವೋ 69' ಹೆಸರಿನ ವ್ಯಕ್ತಿ ಭಾರತ ಇಂಗ್ಲೆಂಡ್ ದ್ವಿತೀಯ ಮತ್ತು ತೃತೀಯ ಟೆಸ್ಟ್‌ ಪಂದ್ಯಗಳ ವೇಳೆ ಆಟದ ಮಧ್ಯೆ ಮೈದಾನಕ್ಕೆ ಪ್ರವೇಶಿಸಿ ಗೊಂದಲ ಸೃಷ್ಠಿಸಿದ್ದರು. ಗಮ್ಮತ್ತಿನ ಸಂಗತಿಯೆಂದರೆ ಈ ವ್ಯಕ್ತಿ ಎರಡೂ ಸಾರಿಯೂ ಟೀಮ್ ಇಂಡಿಯಾ ನಕಲಿ ಜೆರ್ಸಿಯೊಂದಿಗೆ ಮೈದಾನಕ್ಕೆ ಪ್ರವೇಶಿಸಿ ಭಾರತದ ಪರ ಆಡುವುದಾಗಿ ಹೇಳಿದ್ದರು. ಪಂದ್ಯ ವೀಕ್ಷಿಸುತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡಿದ್ದರು.

ಜಾರ್ವೋ 69 ಬೇರೇನೂ ತೊಂದರೆ ನೀಡಿರಲಿಲ್ಲ

ಮೈದಾನಕ್ಕೆ ಪ್ರವೇಶಿಸಿದ್ದ ಜಾರ್ವೋ 69 ಬೇರೇನೂ ತೊಂದರೆ ನೀಡಿರಲಿಲ್ಲ. ತಾನು ಟೀಮ್ ಇಂಡಿಯಾ ಪರ ಆಡುವುದಾಗಿ ಎರಡು ಸಾರಿಯೂ ಆಡಲು (ಒಮ್ಮೆ ಫೀಲ್ಡಿಂಗ್, ಒಮ್ಮೆ ಬ್ಯಾಟಿಂಗ್) ರೆಡಿಯಾಗಿದ್ದರು. ಆರಂಭದಲ್ಲಿ ಲಂಡನ್‌ನ ಲಾರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ vs ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ ವೇಳೆ ಮೈದಾನಕ್ಕೆ ಪ್ರವೇಶಿಸಿ ಟೀಮ್ ಇಂಡಿಯಾ ಪರ ಆಡಲು ಸಜ್ಜಾಗಿದ್ದರು. ಈ ವೇಳೆ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಇದ್ಯಾರಪ್ಪ? ಇವ ಎಲ್ಲಿಂದ ಬಂದ? ಅಂತ ಜಾರ್ವೋ ಅವರನ್ನೇ ದಿಟ್ಟಿಸಿ ಗಮ್ಮತ್ತು ತೆಗೆದುಕೊಂಡಿದ್ದರು. ಅದಾಗಿ ಮತ್ತೆ ಲೀಡ್ಸ್‌ನ ಹೆಡ್ಲಿಂಗ್ಲಿ ಸ್ಟೇಡಿಯಂನಲ್ಲಿ ನಡೆದ ತೃತೀಯ ಟೆಸ್ಟ್‌ ಪಂದ್ಯದ ವೇಳೆ ಆಟದ ಮಧ್ಯದಲ್ಲಿ ನುಗ್ಗಿ ಬ್ಯಾಟಿಂಗ್‌ ಮಾಡಲು ಮುಂದಾಗಿದ್ದರು. ರೋಹಿತ್ ಶರ್ಮಾ ಅರ್ಧ ಶತಕ ಬಾರಿಸಿ ಪೆವಿಲಿಯನ್‌ಗೆ ನಿರ್ಗಮಿಸುತ್ತಲೇ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದ ಜಾರ್ವೋ ಬ್ಯಾಟಿಂಗ್‌ ಮಾಡಲು ಯತ್ನಿಸಿದ್ದರು. ಇತ್ತ ಬ್ಯಾಟಿಂಗ್‌ಗಾಗಿ ಸಜ್ಜಾಗಿದ್ದ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಕೂಡ ಇದ್ಯಾರು ಹೊಸ ಬ್ಯಾಟ್ಸ್‌ಮನ್‌ ಎಂದು ಜಾರ್ವೋ ಅತ್ತ ಅಚ್ಚರಿಯಿಂದ ದಿಟ್ಟಿಸಿ ಇಬ್ಬರೂ ಏನೋ ಮಾತನಾಡಿಕೊಂಡಿದ್ದರು.

ಜಾರ್ವೋಗೆ ಜೀವನಪರ್ಯಂತ ನಿಷೇಧ ಶಿಕ್ಷೆ

ಜಾರ್ವೋ ಬೇರೇನೂ ತಪ್ಪೆಸಗಿಲ್ಲ. ಟೀಮ್ ಇಂಡಿಯಾದ ಬಗ್ಗೆ ಅತೀವ ಅಭಿಮಾನವೇ ಏನೋ ಗೊತ್ತಿಲ್ಲ. ಭಾರತದ ಪರ ಆಡಲು ಅನಧಿಕೃತವಾಗಿ ಹೀಗೆ ಅತೀ ಉತ್ಸಾಹ ತೋರಿಸಿದ್ದಾರಷ್ಟೇ. ಸಾಮಾಜಿಕ ಜಾಲತಾಣದಲ್ಲಿ ಜಾರ್ವೋ ವರ್ತನೆ ಅಸಮಾಧಾನಕ್ಕೆ ಕಾರಣವಾಗಿಲ್ಲ, ಬದಲಿಗೆ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಈ ಘಟನೆಯನ್ನು ತಮಾಷೆಯಾಗಿ ವೀಕ್ಷಿಸಿ ಗಮ್ಮತ್ತು ತೆಗೆದುಕೊಂಡಿದ್ದರು. ಆದರೆ ಕೋವಿಡ್-19 ಭೀತಿಯ ಈ ದಿನಗಳಲ್ಲಿ ಬಯೋ ಬಬಲ್ ಒಳಗೆ ಪಂದ್ಯ ನಡೆಯುತ್ತಿದ್ದಾಗ ಹೀಗೆ ಪಂದ್ಯದ ಮಧ್ಯದಲ್ಲಿ ಮೈದಾನಕ್ಕೆ ಪ್ರವೇಶಿಸೋದು ಸುರಕ್ಷತೆಯ ದೃಷ್ಟಿಯಿಂದ ಅಪರಾಧ ಹೀಗಾಗಿ ಯಾರ್ಕ್‌ಶೈಕ್ ಕೌಂಟಿ ಕ್ರಿಕೆಟ್ ಕ್ಲಬ್ ಜಾರ್ವೋ ವರ್ತನೆಯನ್ನು ಅಪರಾಧವಾಗಿ ಪರಿಗಣಿಸಿದೆ. ಅವರನ್ನು ಜೀವನ ಪರ್ಯಂತ ಲೀಡ್ಸ್‌ ಸ್ಟೇಡಿಯಂಗೆ ಪ್ರವೇಶಿಸದಂತೆ ನಿಷೇಧ ಹೇರಿದೆ. ಜಾರ್ವೋ ಈ ಮೊದಲೂ ಇಂಥ ಹುಚ್ಚಾಟ ಅನೇಕ ಸಾರಿ ಮಾಡಿದ್ದರು ಎನ್ನಲಾಗಿದೆ.

ಏಕಾಏಕಿ ಎಂಟ್ರಿಯಾಗಿ ಫೀಲ್ಡ್ ಸೆಟ್ಟಿಂಗ್‌ಗೆ ಮುಂದಾಗಿದ್ದ ಜಾರ್ವೋ

"ಹೌದು. ಡೇನಿಯಲ್ ಜಾರ್ವಿಸ್ ಹೆಡಿಂಗ್ಲಿಯಿಂದ ಜೀವನಪರ್ಯಂತ ಬ್ಯಾನ್ ಆಗಿದ್ದಾರೆ. ಆತನಿಗೆ ಬ್ಯಾನ್ ಜೊತೆಗೆ ಹಣದ ರೂಪದ ದಂಡ ಕೂಡ ವಿಧಿಸಲಾಗಿದೆ," ಎಂದು ಯಾರ್ಕ್‌ಶೈರ್ ಕ್ರಿಕೆಟ್ ಕ್ಲಬ್‌ನ ವಕ್ತಾರೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಪಂದ್ಯ ನಡೆಯುವಾಗ ಇಂಥ ವರ್ತನೆ ತೋರುವವರನ್ನು ಹೇಗೆ ನಿಭಾಯಿಸುತ್ತೀರಿ ಎಂದು ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿ ಯಾರ್ಕ್‌ಶೈರ್ ಕ್ರಿಕೆಟ್ ಕ್ಲಬ್‌ನ ವಕ್ತಾರ ಹೀಗೆ ಹೇಳಿದ್ದಾರೆ. ಅಂದ್ಹಾಗೆ ಲಾರ್ಡ್ಸ್‌ನಲ್ಲಿ ಭಾರತದ ಪರ ಫೀಲ್ಡಿಂಗ್‌ಗೆ ಮುಂದಾಗಿದ್ದ 'ಜಾರ್ವೋ 69' ಅವರನ್ನು ಮೈದಾನದ ಸಿಬ್ಬಂದಿಗಳು ಬಂದು ಮೈದಾನದಿಂದ ಹೊರಗೆ ಎಳೆದುಕೊಂಡು ಹೋಗಿದ್ದರು. ಲೀಡ್ಸ್ ಪಂದ್ಯದ ವೇಳೆಯೂ ಪ್ಯಾಡ್, ಹೆಲ್ಮೆಟ್ ಕಟ್ಟಿಕೊಂಡು ಬಂದು ಬ್ಯಾಟಿಂಗ್‌ಗೆ ಮುಂದಾಗಿದ್ದ ಜಾರ್ವೋ ಅವರನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಎಳೆದುಕೊಂಡು ಹೋಗಿದ್ದರು. ತಮಾಷೆಯೆಂದರೆ ಏಕಾಏಕಿ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದ ಜಾರ್ವೋ ಆರಂಭದಲ್ಲಿ, ಭಾರತದ ಪರ ಆಡುತ್ತೇನೆ ಎಂದು ಫೀಲ್ಡಿಂಗ್ ಸೆಟ್ ಮಾಡಲು ಮುಂದಾಗಿದ್ದರು. ಎರಡನೇ ಸಾರಿ ಪ್ಯಾಡ್, ಹೆಲ್ಮೆಟ್ ಧರಿಸಿ ನಾನು ಭಾರತ ಪರ ಬ್ಯಾಟಿಂಗ್ ಮಾಡ್ತೀನಿ, ಗೆಲ್ಲಿಸ್ತೀನಿ ಎಂದಿದ್ದರು. ಮೂಲತಃ ಇಂಗ್ಲೆಂಡ್‌ನವಾರಗಿದ್ದರೂ ಜಾರ್ವೋಗೆ ಭಾರತದ ಮೇಲಿರುವ ಹುಚ್ಚು ಅಭಿಮಾನವನ್ನಂತೂ ಮೆಚ್ಚಿಕೊಳ್ಳಬೇಕು ಅನ್ನಿ. ಅಂದ್ಹಾಗೆ ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಸಹಿತ 76 ರನ್ ಸೋಲನುಭವಿಸಿತ್ತು.

ಒಲಿಂಪಿಕ್ಸ್ ಕ್ರೀಡಾಕೂಟವೊಂದರ ವೇಳೆ ಜಾರ್ವೋ ಅವತಾರ

Story first published: Saturday, August 28, 2021, 21:31 [IST]
Other articles published on Aug 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X