ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಅದ್ದೂರಿ ಕ್ರಿಕೆಟ್ ಹಬ್ಬಕ್ಕೆ ಐಸಿಸಿಯಿಂದ ಅಧಿಕೃತ ಗೀತೆ ಬಿಡುಗಡೆ

‘Stand by’ – ICC releases official song for showpiece event in UK

ಲಂಡನ್, ಮೇ 18: ಮೇ 30ರಿಂದ ಜುಲೈ 14ರ ವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್‌ಗಾಗಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧಿಕೃತ ಗೀತೆಯನ್ನು ಬಿಡುಗಡೆಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ.

ಕುಂಬ್ಳೆ ಪ್ರಕಾರ ವಿಶ್ವಕಪ್‌ನಲ್ಲಿ ಈ ತಂಡ ಖಂಡಿತಾ ಸೆ.ಫೈನಲ್ ಪ್ರವೇಶಿಸಲಿದೆ!ಕುಂಬ್ಳೆ ಪ್ರಕಾರ ವಿಶ್ವಕಪ್‌ನಲ್ಲಿ ಈ ತಂಡ ಖಂಡಿತಾ ಸೆ.ಫೈನಲ್ ಪ್ರವೇಶಿಸಲಿದೆ!

ಲಾರಿನ್ ಮತ್ತು ಯುನೈಟೆಡ್ ಕಿಂಗ್ಡಮ್‌ನ ಯಶಸ್ವಿ ಬ್ಯಾಂಡ್ ರೂಡಿಮೆಂಟಲ್ ಸಹಯೋಗದಲ್ಲಿ 'ಸ್ಟ್ಯಾಂಡ್ ಬೈ' ಹೆಸರಿನ ಅಧಿಕೃತ ಗೀತೆಯನ್ನು 'ಕ್ರಿಕೆಟ್ ವರ್ಲ್ಡ್ ಕಪ್' ಮೇ 17ರಂದು ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಟೂರ್ನಿಯುದ್ದಕ್ಕೂ ಕೇಳಿಬರಲಿರುವ ಈ ಗೀತೆ, ಮಂದಿಯನ್ನು ಕ್ರಿಕೆಟ್ ಗುಂಗಿನತ್ತ ಎಳೆಯಲಿದೆ.

ಮೇ 30ರಂದು ಆರಂಭಗೊಳ್ಳುವ ವಿಶ್ವಕಪ್ ಟೂರ್ನಿ, ಜುಲೈ 14ರಂದು ಫೈನಲ್‌ನೊಂದಿಗೆ ಅಂತ್ಯ ಹಾಡಲಿದೆ. ಸೆಮಿಫೈನಲ್ ಪಂದ್ಯಗಳು ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರ್ಯಾಫೋರ್ಡ್ ಮತ್ತು ಬರ್ಮಿಂಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಜುಲೈ 9 ಮತ್ತು 11ರಂದು ನಡೆಯಲಿದೆ. ಪ್ರಶಸ್ತಿ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯಲಿದೆ.

ವಿಶ್ವಕಪ್ ಬ್ಯಾಟಿಂಗ್ ಕ್ರಮಾಂಕದ ಚರ್ಚೆ: ಬಾಯ್ಬಿಚ್ಚಿದ ಕೆಎಲ್ ರಾಹುಲ್ವಿಶ್ವಕಪ್ ಬ್ಯಾಟಿಂಗ್ ಕ್ರಮಾಂಕದ ಚರ್ಚೆ: ಬಾಯ್ಬಿಚ್ಚಿದ ಕೆಎಲ್ ರಾಹುಲ್

ವಿಶ್ವದ ಒಟ್ಟು 10 ತಂಡಗಳು ಟೂರ್ನಿಯಲ್ಲಿ ಸೆಣಸಾಡಲಿದ್ದು,. ಪ್ರತಿಯೊಂದು ತಂಡವೂ ಲೀಗ್‌ನಲ್ಲಿ ಪರಸ್ಪರ ಒಂದು ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 45 ಪಂದ್ಯಗಳ ಬಳಿಕ ಅಗ್ರ ನಾಲ್ಕು ಸ್ಥಾನಗಳಲ್ಲಿ ಉಳಿಯುವ ತಂಡಗಳು ಎರಡು ಸೆಮಿಫೈನಲ್‌ ಸವಾಲು ಸ್ವೀಕರಿಸಲಿವೆ.

Story first published: Saturday, May 18, 2019, 11:39 [IST]
Other articles published on May 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X