ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾದ ಪ್ರಮುಖ ವೇಗಿ ಅಲಭ್ಯ

Starc out of India tour due to pectoral tear

ಬೆಂಗಳೂರು, ಫೆಬ್ರವರಿ 07: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರು ಭಾರತ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ಪರ ಆಡುವ ಅವಕಾಶ ತಪ್ಪಿಸಿಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧದ ಕ್ಯಾನ್ ಬೆರಾ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಪಡೆದು ಜಯದ ರುವಾರಿಯಾಗಿದ್ದ ಎಡಗೈ ವೇಗಿ ಸ್ಟಾರ್ಕ್ ಅವರು ಪಂದ್ಯದ ಕೊನೆ ದಿನದಂದು ಎಡಗಾಲಿನ ಸ್ನಾಯುಸೆಳೆತಕ್ಕೆ ಒಳಗಾಗಿ ನೋವು ಅನುಭವಿಸಿದ್ದರು.

ಇದೀಗ ಅಧಿಕೃತ, ಐಪಿಎಲ್ ನಲ್ಲಿ ಕೆಕೆಆರ್ ತಂಡದಿಂದ ಸ್ಟಾರ್ಕ್ ಬಿಡುಗಡೆ ಇದೀಗ ಅಧಿಕೃತ, ಐಪಿಎಲ್ ನಲ್ಲಿ ಕೆಕೆಆರ್ ತಂಡದಿಂದ ಸ್ಟಾರ್ಕ್ ಬಿಡುಗಡೆ

ಹೀಗಾಗಿ, ಫೆಬ್ರವರಿ 24ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾದ ಭಾರತ ಪ್ರವಾಸಕ್ಕೆ ಸ್ಟಾರ್ಕ್ ಅಲಭ್ಯರಾಗಿದ್ದು, 15 ಮಂದಿ ಸದಸ್ಯರ ಆಸೀಸ್ ತಂಡದಲ್ಲಿ ಸ್ಟಾರ್ಕ್ ಇರುವುದಿಲ್ಲ. ಸ್ಟಾರ್ಕ್ ಅವರು ಪಾಕಿಸ್ತಾನ ವಿರುದ್ಧ ಮಾರ್ಚ್ ನಲ್ಲಿ ಯುಎಇಯಲ್ಲಿ ನಡೆಯುವ ಏಕದಿನ ಸರಣಿಗೆ ಲಭ್ಯರಾಗುವ ಆಶಯವಿದೆ ಎಂದು ಆಸ್ಟ್ರೇಲಿಯಾದ ರಾಷ್ಟ್ರೀಯ ಆಯ್ಕೆದಾರ ಟ್ರೆವರ್ ಹಾನ್ಸ್ ಹೇಳಿದರು.

ಭಾರತ ವಿರುದ್ಧ 2 ಟ್ವೆಂಟಿ20 ಹಾಗೂ 5 ಏಕದಿನ ಪಂದ್ಯಗಳನ್ನು ಆಸ್ಟ್ರೇಲಿಯಾ ಆಡಲಿದೆ. ಆಸ್ಟ್ರೇಲಿಯಾ ತಂಡದಲ್ಲಿ ಜೋಶ್ ಹೇಜಲ್ವುಡ್ ಕೂಡಾ ಗಾಯಗೊಂಡಿದ್ದು, ಕೇನ್ ರಿಚರ್ಡ್ಸನ್, ನಾಥನ್ ಕೌಲ್ಟರ್ ನೈಲ್ ಗೆ ಅವಕಾಶ ಸಿಗಲಿದೆ.

ತಂಡ ಇಂತಿದೆ: ಅರೋನ್ ಫಿಂಚ್ (ನಾಯಕ), ಜಾಸನ್ ಬೆಹ್ರೊನ್ ಡೊರ್ಫ್, ಅಲೆಕ್ಸ್ ಕ್ಯಾರಿ, ನಾಥನ್ ಕೌಲ್ಟರ್ ನೈಲ್, ಪ್ಯಾಟ್ ಕಮಿನ್ಸ್, ಪೀಟರ್ ಹ್ಯಾಂಡ್ಸ್ ಕಂಬ್, ಉಸ್ಮಾನ್ ಖವಾಜ, ನಾಥನ್ ಲಿಯಾನ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್ ವೆಲ್, ಜಾಯ್ ರಿಚರ್ಡ್ಸ, ಕೇನ್ ರಿಚರ್ಡ್ಸನ್, ನ್ಯಾನ್ಸಿ ಶಾರ್ಟ್, ಮಾರ್ಕಸ್ ಸ್ಟೋಯಿನಸ್, ಆಸ್ಟನ್ ಟರ್ನರ್, ಆಡಂ ಝಂಪಾ

ಸ್ಟಾರ್ ಅವರು ಐಪಿಎಲ್ 2016ರಲ್ಲಿ ಗಾಯಾಳುವಾಗಿ ಟೂರ್ನಮೆಂಟ್ ನಿಂದ ಹೊರನಡೆದಿದ್ದು, 2017ರಲ್ಲೂ ಗಾಯದ ಸಮಸ್ಯೆ ಎದುರಾಗಿತ್ತು. 2018ರಲ್ಲಿ ಬಲಗಾಲ ಸ್ನಾಯುಸೆಳೆತಕ್ಕೆ ಒಳಗಾಗಿದ್ದು, ಐಪಿಎಲ್ ನಲ್ಲಿ ಆಡಿರಲಿಲ್ಲ.ಈಗ ವಿಶ್ವಕಪ್ 2019ಕ್ಕೆ ಸಿದ್ಧತೆ ನಡೆಸಬೇಕಾಗಿರುವುದರಿಂದ ಐಪಿಎಲ್ ಆಡದಿರಲು ನಿರ್ಧರಿಸಿದ್ದಾರೆ.

Story first published: Thursday, February 7, 2019, 19:43 [IST]
Other articles published on Feb 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X