ಸಿಡ್ನಿ ಟೆಸ್ಟ್ 2008: ಆಸಿಸ್ ವಿರುದ್ಧ ಭಾರತದ ಸೋಲಿಗೆ ಕಾರಣವಾದ ತಪ್ಪು ತೀರ್ಪಿಗೆ ಸ್ಟೀವ್ ಬಕ್ನರ್ ಮರುಕ!

2008ರ ಸಿಡ್ನಿ ಟೆಸ್ಟ್ ಕ್ರಿಕೆಟ್ ಇತಿಹಾಸದ ಅತ್ಯಂತ ವಿವಾದಾತ್ಮಕ ಪಂದ್ಯಗಳಲ್ಲಿ ಒಂದು. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಆ ಪಂದ್ಯದಲ್ಲಿ ಮಂಕಿಗೇಟ್ ಪ್ರಕರಣ ಅಲ್ಲೋಲಕಲ್ಲೋಲ ಮಾಡಿತ್ತು. ಆಸ್ಟ್ರೇಲಿಯಾ ಆಟಗಾರ ಆಂಡ್ರೋ ಸೈಮಂಡ್ಸ್ ಬಗ್ಗೆ ಟೀಮ್ ಇಂಡಿಯಾ ಆಟಗಾರ ಹರ್ಭಜನ್ ಸಿಂಗ್ ಜನಾಂಗೀಯ ನಿಂದನೆಯಿಂದ ದೊಡ್ಡ ಸುದ್ದಿಯಾಗಿದ್ದ ಪಂದ್ಯವದು.

ಈ ಪಂದ್ಯದಲ್ಲಿ ಅಂಪಾಯರ್‌ಗಳು ನೀಡಿದ ತಪ್ಪು ತೀರ್ಪು ವಿವಾದಕ್ಕೆ ಕಿಡಿ ಹೊತ್ತಿಸಿತ್ತು. ಇದರ ಪರಿಣಾಮವಾಗಿ ಭಾರತ ಆಸ್ಟ್ರೇಲಿಯಾಗೆ 122 ರನ್‌ಗಳ ಅಂತರದಿಂದ ಶರಣಾಗಿತ್ತು. ಆದರೆ ಈ ಬೃಹತ್ ಸೋಲಿನ ಬಗ್ಗೆ ಅಂದಿನ ಪಂದ್ಯದ ಅಂಪಾಯರ್ ಆಗಿದ್ದ ಸ್ಟೀವ್ ಬಕ್ನರ್ ಮಾತನಾಡಿದ್ದು ಅಂದು ತಾನು ಮಾಡಿದ ಎರಡು ತಪ್ಪು ಭಾರತಕ್ಕೆ ದುಬಾರಿಯಾಯಿತು ಎಂದಿದ್ದಾರೆ.

ನಾನು ಖೇಲ್‌ರತ್ನ ಪ್ರಶಸ್ತಿಗೆ ಅರ್ಹನಲ್ಲ ಎಂದ ಹರ್ಭಜನ್ ಸಿಂಗ್

ವಿವಾದಾತ್ಮಕ ಸಿಡ್ನಿ ಪಂದ್ಯದಲ್ಲಿ ಸ್ಟೀವ್ ಬಕ್ನರ್ ಮಾಡಿದ ಆ ಎರಡು ತಪ್ಪುಗಳು ಯಾವುದು? ಫಲಿತಾಂಶದ ಮೇಲೆ ಅದು ಹೇಗೆ ಪರಿಣಾಮ ಬೀರಿತು ಮುಂದೆ ಓದಿ..

ಬಕ್ನರ್ ಮಾಡಿದ ಮೊದಲ ತಪ್ಪು

ಬಕ್ನರ್ ಮಾಡಿದ ಮೊದಲ ತಪ್ಪು

ಘಟನೆ ನಡೆದು 12 ವರ್ಷಗಳ ಬಳಿಕ ಈ ಬಗ್ಗೆ ಮಾತನಾಡಿದ ಸ್ಟೀವ್ ಬಕ್ನರ್ "ನಾನು 2008ರ ಸಿಡ್ನಿ ಟಸ್ಟ್ ಪಂದ್ಯದಲ್ಲಿ ಎರಡು ತಪ್ಪುಗಳನ್ನು ಮಾಡಿದ್ದೆ. ಮೊದಲನೆಯದು ಭಾರತ ಪಂದ್ಯವನ್ನು ಉತ್ತಮವಾಗಿ ಆಡುತ್ತಿದ್ದಾಗ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗೆ ಶತಕಗಳಿಸಲು ಅವಕಾಶ ನೀಡಿದ್ದೆ" ಎಂದಿದ್ದಾರೆ.

ಬಕ್ನರ್ ಮಾಡಿದ ಎರಡನೇ ತಪ್ಪು

ಬಕ್ನರ್ ಮಾಡಿದ ಎರಡನೇ ತಪ್ಪು

ನನ್ನಿಂದಾದ ಎರಡನೇಯ ತಪ್ಪು ಐದನೇಯ ದಿನ. ಇದು ಪಂದ್ಯದಲ್ಲಿ ಭಾರತಕ್ಕೆ ದುಬಾರಿಯಾಯಿತು. ಆದರೂ ಕೂಡ ಈ ಎರಡು ತಪ್ಪುಗಳು ನನ್ನಿಂದ ನಡೆದಿತ್ತು. ಆದರೆ ಟೆಸ್ಟ್ ಪಂದ್ಯದಲ್ಲಿ ಅಂಪಾಯರ್ ಆಗಿ ಎರಡು ತಪ್ಪುಗಳನ್ನು ಮಾಡಿದ್ದು ನಾನು ಒಬ್ಬನೇನಾ ಎಂದು ಪ್ರಶ್ನಿಸಿದ್ದಾರೆ. ಆದರೂ ಈ ಎರಡು ತಪ್ಪುಗಳು ನನ್ನನ್ನು ಕಾಡುತ್ತದೆ ಎಂದು ಹೇಳಿದ್ದಾರೆ.

ಸೈಮಂಡ್ಸ್ ಔಟಾಗಿದ್ದರೂ ನಾಟೌಟ್ ತೀರ್ಪು

ಸೈಮಂಡ್ಸ್ ಔಟಾಗಿದ್ದರೂ ನಾಟೌಟ್ ತೀರ್ಪು

ಈ ವಿವಾದಾತ್ಮಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾವನ್ನು ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 134 ರನ್‌ಗೆ 6 ವಿಕೆಟ್ ಪಡೆಯುವ ಮೂಲಕ ಹಿಡಿತ ಸಾಧಿಸಿತ್ತು. ಆಂಡ್ರೋ ಸೈಮಂಡ್ಸ್ 30 ರನ್ ಗಳಿಸುವಷ್ಟರಲ್ಲಿ ಇಶಾಂತ್ ಎಸೆತ ಸೈಮಂಡ್ಸ್ ಬ್ಯಾಟ್‌ಗೆ ಸವರಿ ವಿಕೆಟ್ ಕೀಪರ್ ಧೋನಿ ಕೈ ಸೇರಿತ್ತು. ಆದರೆ ಅದನ್ನು ಪರಿಗಣಿಸದ ಅಂಪಾಯರ್ ಬಕ್ನರ್ ನಾಟೌಟ್ ತೀರ್ಪು ನೀಡಿದ್ದರು.

ಭರ್ಜರಿ ಶತಕ ಗಳಿಸಿ ಸುಸ್ಥಿತಿಗೆ ತಂದ ಸೈಮಂಡ್ಸ್

ಭರ್ಜರಿ ಶತಕ ಗಳಿಸಿ ಸುಸ್ಥಿತಿಗೆ ತಂದ ಸೈಮಂಡ್ಸ್

ಇದರ ಪರಿಣಾಮವಾಗಿ ಆಂಡ್ರೋ ಸೈಮಂಡ್ಸ್ 162 ರನ್‌ಗಳನ್ನು ಸಿಡಿಸಿ ಆಸಿಸ್ ಮೊದಲ ಇನ್ನಿಂಗ್ಸ್‌ನಲ್ಲಿ 463 ರನ್ ಗಳಿಸಲು ಕಾರಣವಾಗಿತ್ತು. ಹಾಗಿದ್ದರೂ ಇದಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ಪರವಾಗಿ ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಶತಕ ಸಿಡಿಸಿ 532 ರನ್‌ಗಳ ಬೃಹತ್ ಮೊತ್ತ ದಾಖಲಿಸುವುದರೊಂದಿಗೆ 63 ರನ್‌ಗಳ ನಿರ್ಣಾಯಕ ಮುನ್ನಡೆಯನ್ನು ಪಡೆದಿತ್ತು.

ಬಕ್ನರ್ ಎರಡನೇ ಆಘಾತ

ಬಕ್ನರ್ ಎರಡನೇ ಆಘಾತ

ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 401/7 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 332 ರನ್‌ಗಳ ಗುರಿ ಪಡೆದಿತ್ತು. ಇದನ್ನು ಬೆನ್ನಟ್ಟಿದ್ದ ಭಾರತ ಪಂದ್ಯವನ್ನು ಕನಿಷ್ಟ ಡ್ರಾ ಮಾಡಿಕೊಳ್ಳುವ ಆಲೋಚನೆಯಲ್ಲಿತ್ತು. 115 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದಾಗ ಭಾರತಕ್ಕೆ ಸ್ಟೀವ್ ಬಕ್ನರ್ ಮತ್ತೊಂದು ಆಘಾತವನ್ನು ನೀಡಿದ್ದರು.

ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು

ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು

ಪ್ಯಾಡ್‌ಗೆ ತಗುಲಿ ವಿಕೆಟ್ ಕೀಪರ್ ಕೈಗೆ ಸೇರಿದ ಚೆಂಡ್‌ಗೆ ಔಟ್ ನೀಡಿದ್ದರು. ರಿಪ್ಲೇನಲ್ಲಿ ಚೆಂಡು ಪ್ಯಾಡ್‌ಗೆ ತಗುಲಿರುವುದು ಸ್ಪಷ್ಟವಾಗಿದ್ದರು ಡಿಆರ್‌ಎಸ್ ನಿಯಮ ಆಗ ಜಾರಿಯಲ್ಲಿರಲಿಲ್ಲ. ಹೀಗಾಗಿ ಅಂತಿಮವಾಗಿ 210 ರನ್ ಗಳಿಸಲಷ್ಟೇ ಶಕ್ತವಾಗಿತ್ತು ಆಸ್ಟ್ರೇಲಿಯಾಗೆ ಶರಣಾಗಿತ್ತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, July 19, 2020, 16:46 [IST]
Other articles published on Jul 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X