ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಔಟಿಲ್ಲದಿದ್ದರೂ ಔಟ್‌ ನೀಡಿದ್ದೆ: ಸಚಿನ್‌ ವಿವಾದಾತ್ಮಕ ತೀರ್ಪಿನ ಬಗ್ಗೆ ಸ್ಟೀವ್ ಬಕ್ನರ್ ಮಾತು

Steve Bucknor Recalls Umpiring Decisions Involving Sachin Tendulkar

ಸಚಿನ್ ತೆಂಡೂಲ್ಕರ್‌ಗೆ ಎರಡು ಬಾರಿ ತಪ್ಪು ತೀರ್ಪು ನೀಡುವ ಮೂಲಕ ಔಟಾಗಲು ಕಾರಣರಾಗಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅಂಪೈರ್ ಸ್ಟೀವ್ ಬಕ್ನರ್. ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ ಶ್ರೇಷ್ಠ ಅಂಪೈರ್ ಎಂದು ಗುರುತಿಸಿಕೊಂಡಿದ್ದ ಬಕ್ನರ್ ತೆಂಡೂಲ್ಕರ್ ವಿಚಾರದಲ್ಲಿ ಒಂದಲ್ಲ ಎರಡು ಬಾರಿ ಎಡವಿದ್ದರು. ಈ ಬಗ್ಗೆ ಸ್ವತಃ ಸ್ಟೀವ್ ಬಕ್ನರ್ ಪ್ರತಿಕ್ರಿಯಿಸಿದ್ದಾರೆ.

ಮೊದಲಿಗೆ 2003ರಲ್ಲಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ 'ಗಬ್ಬಾ' ಟೆಸ್ಟ್‌ ಪಂದ್ಯದಲ್ಲಿ ಸಚಿನ್‌ ಎಲ್‌ಬಿಡಬ್ಲ್ಯು ಆಗಿದ್ದಾರೆ ಎಂದು ಸ್ಟೀವ್‌ ಬಕ್ನರ್‌ ತೀರ್ಪು ನೀಡಿದ್ದರು. ಆಗ ಅಂಪೈರ್‌ ತೀರ್ಪು ಪರಿಶೀಲನೆ ಇಲ್ಲವಾಗಿದ್ದ ಕಾರಣ ಸಚಿನ್‌ ನಾಟ್‌ಔಟ್‌ ಆಗಿದ್ದರೂ ಕೂಡ ಹೊರ ನಡೆಯುವಂತಾಗಿತ್ತು.

"ಹೆಚ್ಚು ಆಡುವ ಅವಕಾಶ ದೊರೆತಿದ್ದರೆ ಭಾರತದ ಶ್ರೇಷ್ಠ ಆಲ್‌ರೌಂಡರ್ ಎನಿಸಿಕೊಳ್ಳುತ್ತಿದ್ದೆ"

ವಿಷಾದ ವ್ಯಕ್ತಪಡಿಸಿದ ಬಕ್ನರ್

ವಿಷಾದ ವ್ಯಕ್ತಪಡಿಸಿದ ಬಕ್ನರ್

ಈ ಬಗ್ಗೆ ಇದೀಗ ಮಾತನಾಡಿರುವ ಸ್ಟೀವ್‌ ಬಕ್ನರ್ ತನ್ನ ತೀರ್ಪು ತಪ್ಪಾಗಿದ್ದರ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಅಂದು ಜೇಸನ್‌ ಗಿಲೆಸ್ಪಿ ಅವರ ಬೌಲಿಂಗ್‌ನಲ್ಲಿ ಸಚಿನ್‌ ಪ್ಯಾಡ್ಸ್‌ಗೆ ಬಡಿದಿದ್ದ ಚೆಂಡು ಬಹುಶಃ ಸ್ಟಂಪ್ಸ್‌ನಿಂದ ಮೇಲೆ ಹೋಗುತ್ತಿತ್ತು ಎಂದಿದ್ದಾರೆ.

ಪಾಕ್ ವಿರುದ್ಧವೂ ತಪ್ಪು ಮಾಡಿದ್ದ ಬಕ್ನರ್

ಪಾಕ್ ವಿರುದ್ಧವೂ ತಪ್ಪು ಮಾಡಿದ್ದ ಬಕ್ನರ್

ಸಚಿನ್‌ಗೆ ಎರಡನೇ ಬಾರಿ ತಪ್ಪು ತೀರ್ಪು ನೀಡಿದ್ದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ. 2005ರಲ್ಲಿ ಪಾಕಿಸ್ತಾನ ವಿರುದ್ಧ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲೂ ಸಚಿನ್‌, ವೇಗಿ ಅಬ್ದುಲ್‌ ರಝಾಕ್‌ ಬೌಲಿಂಗ್‌ನಲ್ಲಿ ಎಡ್ಜ್‌ ಮಾಡಿ ಕೀಪರ್‌ಗೆ ಕ್ಯಾಚ್‌ ನೀಡಿದ್ದರು ಎಂದು ತಪ್ಪಾಗಿ ಗ್ರಹಿಸಿದ್ದಾಗಿ ಬಾಯ್ಬಿಟ್ಟಿದ್ದಾರೆ.

ತಪ್ಪುಗಳು ಶಾಶ್ವತವಾಗಿ ಉಳಿದು ಬಿಡುತ್ತವೆ!

ತಪ್ಪುಗಳು ಶಾಶ್ವತವಾಗಿ ಉಳಿದು ಬಿಡುತ್ತವೆ!

ಸಚಿನ್‌ಗೆ ನೀಡಿದ್ದ ಆ ಎರಡೂ ತೀರ್ಪುಗಳು ತಪ್ಪಾಗಿದೆ. ಆದರೆ ಅಂಪಾಯರ್‌ಗಳು ಎಂದಿಗೂ ತಪ್ಪು ತೀರ್ಪು ನೀಡಬೇಕು ಎಂದು ಬಯಸುವುದಿಲ್ಲ. ಯಾಕೆಂದರೆ ಆ ತಪ್ಪು ತೀರ್ಪುಗಳು ಶಾಶ್ವತವಾಗಿ ಉಳಿದುಕೊಳ್ಳುತ್ತದೆ ಎಂದು ಬಕ್ನರ್ ರೇಡಿಯೋ ಕಾರ್ಯಕ್ರಮವೊಂದಲ್ಲಿ ಹೇಳಿಕೊಂಡಿದ್ದಾರೆ.

ಬದಲಾವಣೆ ಸ್ವಾಗತಾರ್ಹ

ಬದಲಾವಣೆ ಸ್ವಾಗತಾರ್ಹ

ಇನ್ನು ಅಂಪೈರಿಂಗ್‌ನಲ್ಲಿ ತಾಂತ್ರಿಕವಾಗಿ ಬದಲಾವಣೆಯಾಗಿರುವುದು ಅಂಪೈರ್‌ಗಳಿಗೆ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಿಂದೆ ಅಂಪೈರ್‌ಗಳು ತಪ್ಪು ತೀರ್ಪನ್ನು ನೀಡಿದರೆ ಬಳಿಕ ಅವರನ್ನು ಇಡೀ ರಾತ್ರಿ ನಿದ್ದೆಗೆಡುವಂತೆ ಮಾಡುತ್ತಿತ್ತು. ಆದರೆ ಈಗ ಹಾಗಿಲ್ಲ, ಕ್ಷಣದಲ್ಲೇ ಅದನ್ನು ತಿದ್ದಿಕೊಂಡು ತೀರ್ಪು ಬದಲಾಯಿಸುವ ಅವಕಾಶವಿದೆ. ಮರು ಕ್ಷಣದಲ್ಲೇ ನಿರಾಳತೆಯನ್ನು ಹೊಂದಬಹುದು ಎಂದು ಬಕ್ನರ್ ಹೇಳಿದ್ದಾರೆ.

Story first published: Monday, June 22, 2020, 12:54 [IST]
Other articles published on Jun 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X