ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಮಿತ್‌ ಆಟ ನೋಡಿ ಹಳೆ ವಿವಾದ ಕೆದಕಿದ ಇಂಗ್ಲೆಂಡ್ ಕ್ರಿಕೆಟರ್

ಸ್ಮಿತ್ ಏನೇ ಮಾಡಿದ್ರು ಒಪ್ಪುತ್ತಿಲ್ಲ ಇಂಗ್ಲೆಂಡ್..? | ashes test | Oneindia Kannada
Steve Harmison Sparks Controversy On His Comment On Steve Smith

ಬೆಂಗಳೂರು, ಸೆಪ್ಟೆಂಬರ್ 09 : ಇಂಗ್ಲೆಡ್ ವಿರುದ್ಧ ನಡೆಯುತ್ತಿರುವ ಆಶಸ್ ಟೆಸ್ಟ್‌ ಸರಣಿಯಲ್ಲಿ ಅಮೋಘ ದ್ವಿಶತಕದ ಸಾಧನೆ ಮಾಡಿ ಸ್ಟೀವ್ ಸ್ಮಿತ್ ಮಿಂಚುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ.

ಮಾಜಿ ಟೆಸ್ಟ್ ಕ್ರಿಕೆಟಿಗ ಸ್ಟೀವ್ ಹಾರಿಮ್‌ಸನ್, "ಸ್ಟೀವ್ ಸ್ಮೀತ್ ಬ್ಯಾಟ್ ಮೂಲಕ ಏನೇ ಸಾಧನೆ ಮಾಡಲಿ. ಆದರೆ, ಅವರು ವಂಚಕ ಎಂದೇ ನೆನಪಾಗುತ್ತಾರೆ" ಎಂದು ಹೇಳುವ ಮೂಲಕ ಹಳೆ ವಿವಾದವನ್ನು ಕೆದಕಿದ್ದಾರೆ.

ದ್ವಿಶತಕ ಬಾರಿಸಿ ಸರ್ ಗ್ಯಾರಿ ಸೋಬರ್ಸ್ ದಾಖಲೆ ಮುರಿದ ಸ್ಮಿತ್, ಬ್ರಾಡ್ಮನ್ ದಾಖಲೆ ಬಾಕಿ!ದ್ವಿಶತಕ ಬಾರಿಸಿ ಸರ್ ಗ್ಯಾರಿ ಸೋಬರ್ಸ್ ದಾಖಲೆ ಮುರಿದ ಸ್ಮಿತ್, ಬ್ರಾಡ್ಮನ್ ದಾಖಲೆ ಬಾಕಿ!

"ನೀವು ಅವರನ್ನು ಕ್ಷಮಿಸಿದ್ದೀರಿ ಎಂದು ಅಂದುಕೊಳ್ಳುತ್ತೇನೆ. ಈಗ ಸ್ಮಿತ್ ಏನಾದರೂ ಮಾಡಲಿ. ಅವರು ಯಾವಾಗಲೂ ದಕ್ಷಿಣ ಆಫ್ರಿಕಾದಲ್ಲಿ ನಡೆದ ಘಟನೆಯಿಂದಲೇ ನೆನಪಿನಲ್ಲಿ ಇರುತ್ತಾರೆ" ಎಂದು ಹೇಳಿದ್ದಾರೆ.

1
44041

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದರು. ಈಗ ಅವರು ಪುನಃ ಆಟ ಆರಂಭಿಸಿದ್ದು, ಉತ್ತಮ ಫಾರ್ಮ್‌ನಲ್ಲಿದ್ದಾರೆ.

ದ್ವಿಶತಕದ ಮೂಲಕ 'ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾನೇ ಕಿಂಗ್‌' ಎಂದ ಸ್ಟೀವ್ ಸ್ಮಿತ್!ದ್ವಿಶತಕದ ಮೂಲಕ 'ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾನೇ ಕಿಂಗ್‌' ಎಂದ ಸ್ಟೀವ್ ಸ್ಮಿತ್!

ಪ್ರಸ್ತುತ ಇಂಗ್ಲೆಡ್ ವಿರುದ್ಧ ನಡೆಯುತ್ತಿರುವ ಆಶಸ್ ಟೆಸ್ಟ್‌ ಸರಣಿಯ ಪ್ರಥಮ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಶತಕದ ಸಾಧನೆ ಮಾಡಿದ್ದರು. 4ನೇ ಟೆಸ್ಟ್‌ ಪಂದ್ಯದಲ್ಲಿ 319 ಎಸೆತದಲ್ಲಿ 211 ರನ್‌ ಗಳಿಸಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಸಹ ಸ್ಟೀವ್ ಸ್ಮಿತ್ ಆಟವನ್ನು ಹೊಗಳಿ ಟ್ವೀಟ್ ಮಾಡಿದ್ದರು. ಅಧ್ಬುತ ಕಮ್ ಬ್ಯಾಕ್ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದರು. ಆದರೆ, ಹಾರಿಮ್‌ಸನ್ ಮಾತ್ರ ಹಳೆಯ ವಿವಾದ ಕೆದಕಿದ್ದಾರೆ.

Story first published: Monday, September 9, 2019, 11:39 [IST]
Other articles published on Sep 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X