ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಬಾರಿಗೆ ಭಾರತದ ವಿರುದ್ಧ ಶೂನ್ಯ ಸುತ್ತಿದ ಸ್ಟೀವ್ ಸ್ಮಿತ್

Steve Smith 1st time out for duck against India in international cricket

ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಭಾರತದ ವಿರುದ್ಧದ ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದ್ದಾರೆ. ಭಾರತದ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ದಾಖಲೆಯನ್ನು ಹೊಂದಿರುವ ಸ್ಟೀವ್ ಸ್ಮಿತ್ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ವಿರುದ್ಧ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ಸೆಶನ್‌ನಲ್ಲಿ ಭಾರತ ಉತ್ತಮ ಬೌಲಿಂಗ್ ದಾಳಿಯನ್ನು ಸಂಘಟಿಸಿತು. ಈ ವೇಳೆ ಆತಿಥೇಯರ ಮೂರು ವಿಕೆಟ್ ಪಡೆಯುವಲ್ಲಿ ಭಾರತ ಯಶಸ್ವಿಯಾಯಿತು. ಅದರಲ್ಲೂ ಸ್ಟೀವ್ ಸ್ಮಿತ್ ವಿಕೆಟ್‌ಅನ್ನು ಶೀಘ್ರವಾಗಿ ಪಡೆಯುವ ಮೂಲಕ ಆರ್ ಅಶ್ವಿನ್ ತಂಡಕ್ಕೆ ಮೇಲುಗೈ ಒದಗಿಸಿದರು.

ಭಾರತ vs ಆಸ್ಟ್ರೇಲಿಯಾ: ಬಾಕ್ಸಿಂಗ್ ಡೇ ಟೆಸ್ಟ್, ಆಸ್ಟ್ರೇಲಿಯಾಗೆ ಆರಂಭಿಕ ಆಘಾತ: Live ಸ್ಕೋರ್ಭಾರತ vs ಆಸ್ಟ್ರೇಲಿಯಾ: ಬಾಕ್ಸಿಂಗ್ ಡೇ ಟೆಸ್ಟ್, ಆಸ್ಟ್ರೇಲಿಯಾಗೆ ಆರಂಭಿಕ ಆಘಾತ: Live ಸ್ಕೋರ್

ಸ್ಟೀವ್ ಸ್ಮಿತ್ ಮೆಲ್ಬರ್ನ್‌ ಅಂಗಳದಲ್ಲಿ ಅತ್ಯಂತ ವಿರಳ ಹಿನ್ನೆಡೆಯನ್ನು ಅನುಭವಿಸಿದ್ದಾರೆ. ಎಂಸಿಜಿಯಲ್ಲಿ ಸ್ಮಿತ್ ಶ್ರೇಷ್ಠ ಬ್ಯಾಟಿಂಗ್ ದಾಖಲೆಹೊಂದಿದ್ದು 113.5 ಸರಾಸರಿಯನ್ನು ಹೊಂದಿದ್ದಾರೆ. ಇಲ್ಲಿ ಸ್ಮಿತ್ ನಾಲ್ಕು ಶತಕ ಹಾಗೂ ನೂರು ಅರ್ಧ ಶತಕವನ್ನು ಬಾರಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂರೆ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಮಿತ್ ಶೂನ್ಯಕ್ಕೆ ಔಟಾಗುತ್ತಿರುವುದು ಇದೇ ಮೊದಲು.

ಇದಕ್ಕೂ ಮೊದಲು ಜಸ್ಪ್ರಿತ್ ಬೂಮ್ರಾ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಜೋ ಬರ್ನ್ಸ್‌ ಅವರನ್ನು ಕೂಡ ಶೂನ್ಯಕ್ಕೆ ಔಟ್ ಮಾಡಿದ್ದರು. ಅದಾದ ಬಳಿಕ ಆರ್ ಅಶ್ವಿನ್ ಮ್ಯಾಥ್ಯೂ ವೇಡ್ ಅವರನ್ನು 30 ರನ್‌ಗಳಿಗೆ ಬಲಿ ಪಡೆದರು.

ಶುಭ್ಮನ್ ಗಿಲ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಕಾರಣ ಏನು?ಶುಭ್ಮನ್ ಗಿಲ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಕಾರಣ ಏನು?

ರಹಾನೆ ನಾಯಕತ್ವದಲ್ಲಿ ಎರಡನೇ ಪಂದ್ಯದಲ್ಲಿ ಭಾರತ ನಾಲ್ಕು ಬದಲಾವನೆ ಮಾಡಿಕೊಂಡಿದೆ. ಶುಭ್ಮನ್ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ಟೆಸ್ಟ್‌ ಕ್ರಿಎಕಟ್‌ಗೆ ಪದಾರ್ಪಣೆಯನ್ನು ಮಾಡಿದ್ದಾರೆ. ರವೀಂದ್ರ ಜಡೇಜಾ ಹಾಗೂ ರಿಷಫ್ ಪಂತ್ ಎರಡನೇ ಪಂದ್ಯದಲ್ಲಿ ಆಡುವ ಬಳಗಕ್ಕೆ ಸೇರಿಕೊಂಡಿದ್ದಾರೆ.

Story first published: Saturday, December 26, 2020, 10:08 [IST]
Other articles published on Dec 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X